ಕೊಪ್ಪಳ | ವೈದಿಕ ಪರಂಪರೆ ಮೌಲ್ಯಗಳ ನೆಪದಲ್ಲಿ ಮೌಢ್ಯ ಹೇರುತ್ತಿದೆ: ರಾಮಚಂದ್ರಪ್ಪ

Date:

ವೈದಿಕ ಪರಂಪರೆ ನಮ್ಮ ಮೇಲೆ ನಿರಂತರವಾಗಿ ಮೌಢ್ಯತೆಯನ್ನ ಹೇರುತ್ತ ಬಂದಿದೆ. ಮಹಿಳೆಯರು ಹೆಚ್ಚು ಮೌಢ್ಯತೆಗೊಳಗಾಗಿ ಶೋಷಣೆಗೊಳಪಡುತ್ತಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ಹೇಳಿದರು.

- Advertisement -

ಕೊಪ್ಪಳದ ಕುಕುನೂರು ತಾಲೂಕಿನ ದ್ಯಾಂಪೂರ್ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಕಾವ್ಯಾನಂದ ಮಹಿಳಾ ಅಭಿಮಾನಿಗಳ ಬಳಗದಿಂದ ಮನೆ ಮನೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಲನ್ನು ಹುತ್ತಕ್ಕೆ ಎರೆಯದೇ ವಿಶೇಷ ಮಕ್ಕಳಿಗೆ ಹಾಲು ಕೊಟ್ಟು ಕುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

“ಮಹಿಳೆಯರಲ್ಲಿ ಹೆಚ್ಚು ವೈಚಾರಿಕತೆ, ಅರಿವು ಜಾಗೃತಿ ಮೂಡಿಸುವ ಕೆಲಸ ಮಾನವ ಬಂಧುತ್ವ ವೇದಿಕೆ ಮಾಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ‘ಜನರ ಸೇವೆ ಮಾಡಲು ಬಂದಿದ್ದೇನೆʼ ಎಂದರು. ಎರಡನೇ ಬಾರಿ ʼನಾನು ಜೈವಿಕವಾಗಿ ಹುಟ್ಟಿಲ್ಲʼ ಎಂದರು… ಹೀಗೆ ಪ್ರಧಾನಿಗಳು ಸುಳ್ಳು ಹೇಳಿ ಜನರಲ್ಲಿ ಮೌಢ್ಯತೆ ಬಿತ್ತಿದರು. ಜಾಗೃತಗೊಳಿಸುವ ಕೆಲಸ ಮಾಡಲಿಲ್ಲ. ಹಾಲನ್ನ ಹುತ್ತಕ್ಕೆ ಹಾಕದೇ ಮಕ್ಕಳಿಗೆ ಕೊಟ್ಟರೆ ಆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದು ಕಡಿಮೆ ಆಗುತ್ತದೆ” ಎಂದರು.

ಅನ್ನದಾನೇಶ್ವರ ಶಾಖಾಮಠ ಮಹಾದೇವ ಸ್ವಾಮಿಗಳು ಮಾತನಾಡಿ, “ಬಿದ್ದವರನ್ನ ಮೇಲೆ ಎತ್ತುವುದು, ಹಸಿದವರಿಗೆ ಅನ್ನ ಹಾಕುವುದು ಪೂಜೆ. ಕಲ್ಲು ದೇವರಿಗೆ ಹಾಲು ಹಾಕುವುದು, ಕಲ್ಲು ನಾಗರಕ್ಕೆ ಹಾಲು ಎರೆಯುವುದರಿಂದ ಪೂಜೆ ಅಲ್ಲ ಇದರಿಂದ ಮೌಢ್ಯತೆ ಹೆಚ್ಚಾಗುತ್ತದೆ ಹೊರತು ವೈಚಾರಿಕತೆ ಬೆಳೆಯಲು ಸಾಧ್ಯವಿಲ್ಲ” ಎಂದರು.

ಲಡಾಯಿ ಪ್ರಕಾಶಕ ಬಸವರಾಜ ಸುಳೆಬಾವಿ ಮಾತನಾಡಿ, “ಓದುವುದರ ಮೂಲಕ ನೀವು ಮನುಷ್ಯರಾಗಬಹುದು. ಮನುಷ್ಯರ ನಡುವೆ ಮನುಷ್ಯತ್ವ ನಾಶವಾಗುತ್ತಿದೆ. ಕಾವ್ಯಾನಂದರು ‘ಯಾವ ಧರ್ಮೀಯನಾದರೇನು ಮೊದಲು ಮನುಷ್ಯನಾಗು’ ಅಂತ ಹೇಳಿದ್ದಾರೆ. ಬಿದ್ದವರನ್ನ ಎಬ್ಬಿಸಿ ನಿಲ್ಲಿಸುವುದೇ ಮನುಷ್ಯತ್ವ. ಮನುಷ್ಯತ್ವ ಅನಿಸಿಕೊಳ್ಳಲು ಬಹಳ ದಿನಬೇಕು. ಪುರುಷರೇ ಹೆಚ್ಚು ದೇಶವನ್ನಾಳಿದ್ದಾರೆ. ಆದರೆ, ಮಹಿಳೆಯರನ್ನ ಗೌಣ ಮಾಡುತ್ತಾ ಬಂದಿದ್ದಾರೆ. ತಾಯ್ತನ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಗಂಡು ಮಕ್ಕಳಲ್ಲಿ ಅದು ವಿರಳ. ದೇಶ, ಮನೆ, ಓಣಿ, ಶಾಂತವಾಗಿದ್ದರೆ ಅದು ಮಹಿಳೆಯರಿಂದಲೇ‌ ಸಾಧ್ಯ” ಎಂದರು.

ಸಿದ್ದಮ್ಮ ಪಾಟೀಲ್ ಬಾಗಲಕೋಟೆ ಮಾತಾಡಿ, “ಸಂವಿಧಾನವು ವಚನಗಳ ತಳಹದಿಯಲ್ಲೇ ಇದೆ. ಸಂವಿಧಾನವನ್ನು ಅಂಬೇಡ್ಕರ್ ಅಲ್ಲದೇ ಕೋಮುವಾದಿಗಳ ಕೈಯಲ್ಲಿ ರಚನೆ ಮಾಡಲು ಅವಕಾಶ ಸಿಕ್ಕಿದ್ದರೆ, ಇವತ್ತು ದೇಶದಲ್ಲಿ ಮನುಷ್ಯತ್ವವೇ ನಾಶವಾಗುತ್ತಿತ್ತು. ಮೌಢ್ಯತೆಯಿಂದ ಮುಖ್ಯವಾಗಿ ಮಹಿಳೆಯರು ದೂರ ಇರಬೇಕು. ಹೆಚ್ಚು ಜಾಗೃತರಾಗಬೇಕು. ಅನುಭವದ ಮಂಟಪದಡಿಯಲ್ಲಿ ಸಂವಿಧಾನ ರಚನೆಯಾಗಿದೆ. ಅದನ್ನು ಅರ್ಥ ಮಾಡಿಕೊಂಡು ವಿಚಾರವಂತರಾಗಬೇಕು” ಎಂದರು.

ಇದನ್ನೂ ಓದಿ: ಕೊಪ್ಪಳ | ವಿದ್ಯಾರ್ಥಿ ಅಂಕಪಟ್ಟಿ, ಟಿಸಿ ಕೊಡದ ವಾಸವಿ ಶಾಲೆ ಮುಖ್ಯಶಿಕ್ಷಕ ಫಕ್ಕೀರಪ್ಪ ಎಮ್ಮಿನವರ: ಪಾಲಕರ‌ ಪರದಾಟ

ವಿಸ್ತಾರ ಸಂಸ್ಥೆ ನಿರ್ದೇಶಕ ಡಾ.ನಾಜಿರ್ ಪಿ ಎಸ್ ಮಾತನಾಡಿ, “ಮುಟ್ಟು ಆಗುವ ಸಂದರ್ಭದಲ್ಲಿ ಮಹಿಳೆಯರನ್ನ ಹೊರಗಿಡುವ ಮೌಢ್ಯತೆ ಹೆಚ್ಚಾಗಿರುವುದು ಮಹಿಳೆಯರ ಹಕ್ಕನ್ನು ಹತ್ತಿಕ್ಕುವುದೇ ಆಗಿದೆ. ಮಕ್ಕಳಿಗೆ ಶಾಲೆಯ ಆರಂಭದಲ್ಲೇ ಜಾತಿ, ಲಿಂಗ ಗುರುತಿಸುವ ಕೆಲಸ ಮಾಡುತ್ತೇವೆ. ಮನುಷ್ಯನ ಬದುಕಿನಲ್ಲಿ ಮಾನವೀಯತೆಯೇ ಮಾಯವಾದರೆ ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಮನುಷ್ಯತ್ವ ಅಳಿದಂತೆಲ್ಲ ಬದುಕುವ ಸವಾಲು ಹೆಚ್ಚಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಟಿ.ರತ್ನಾಕರ, ಪ್ರೇಮಾ ಮುದಗಲ್, ಮಂಜುಳಾ ಮಾಲಗಿತ್ತಿ, ಬುಡ್ಡಮ್ಮ ಮರಡಿ, ಸಾವಿತ್ರಿ ಮರಡಿ, ಗಂಗಮ್ಮ ಹುಡೇದ, ಸರಸ್ವತಿ ಹಡಪದ, ಅನ್ನಪೂರ್ಣಮ್ಮ ಹುಣಸಿಮರದ, ಶಿವಬಸಪ್ಪ ನೋಟಗಾರ, ಮೋನಾಕ್ಷಿ ಸಾಸ್ವಿಹಾಳ, ರಾಧಿಕ ಬಡಿಗೇರ ಭೀಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ವಾಲ್ಮೀಕಿ ವಿವಿ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು: ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ

ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ...

ಉಡುಪಿ | ಕೃಷಿ ಮೇಳದಿಂದ ರೈತರ ಬದುಕಿಗೆ ಆತ್ಮಸ್ಥೈರ್ಯ ತುಂಬಲಿ: ಕೋಟ ಶ್ರೀನಿವಾಸ ಪೂಜಾರಿ

ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು...

ಉಡುಪಿ | ಜನಸಾಮಾನ್ಯರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸೋಣ : ಯಶ್ ಪಾಲ್ ಸುವರ್ಣ

ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಿದಾಗ ಮಾತ್ರ ಸರಕಾರದ...

ಧಾರವಾಡ | ಪಶ್ಚಿಮ ಪದವೀಧರರ ಚುನಾವಣೆ; ಬ್ಯಾಲೆಟ್ ಪೇಪರ್ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್. ಆರ್

"ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಚುನಾವಣಾ ಆಯೋಗದ...