ಕೊಪ್ಪಳ | ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ನೀಡಿ: ಜಾಗೃತಿ ಸಂಸ್ಥೆಯಿಂದ ಅಭಿಯಾನ

Date:

Advertisements

ಮಕ್ಕಳ ಸರಿಯಾದ ಬೆಳವಣಿಗೆಗೆ ಸರಿಯಾದ ಪೌಷ್ಟಿಕ ಆಹಾರವನ್ನೇ ನೀಡಬೇಕು ಎಂದು ಕೊಪ್ಪಳದ ಜಾಗೃತಿ ಸಂಸ್ಥೆಯ ಮೈತ್ರಿ ತಿಳಿಸಿದರು.

ವರು ಕೊಪ್ಪಳ ತಾಲೂಕು ಶಹಪೂರ ಗ್ರಾಮದ ದರ್ಗಾ ಆವರಣದಲ್ಲಿ ಜಾಗೃತಿ ಸಂಸ್ಥೆಯು ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಸರಕಾರದ ಒದಗಿಸಲಾದ ಪೌಷ್ಟಿಕ ಆಹಾರ ‘ಪುಷ್ಟಿ’ಯಿಂದ ವಿವಿಧ ರೀತಿಯಲ್ಲಿ ಪದಾರ್ಥ ತಯಾರಿಸಿ ಮಕ್ಕಳಿಗೆ ಕೊಡಬೇಕೆಂಬ ಪ್ರೋತ್ಸಾಹದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಸದಸ್ಯೆ ಮೈತ್ರಿ, “ರಾಜ್ಯದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದು, ಅಂತ ಮಕ್ಕಳಿಗೆ ಪೌಷ್ಟಿಕತೆಯುಳ್ಳ ‘ಪುಷ್ಟಿ’ ಆಹಾರ ಪೊಟ್ಟಣದಲ್ಲಿರುವ ಪದಾರ್ಥದಿಂದ ವಿವಿಧ ಅಡಿಗೆ ಮಾಡಿ ಮಕ್ಕಳಿಗೆ ಕೊಟ್ಟರೆ ಆ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ‘ಪುಷ್ಠಿ’ ಹೆಸರಿನ ಪೌಷ್ಟಿಕ ಆಹಾರದಲ್ಲಿ ಗುಣಮಟ್ಟದ ಗೋಧಿ, ಸಕ್ಕರೆ, ಹುರಿಕಡಲೆ ಹಾಗೂ ಕಡಲೆಬೇಳೆ ಪುಡಿ ಇರುತ್ತದೆ” ಎಂದು ತಿಳಿಸಿದರು.

ಜಾಗೃತಿ ಸಂಸ್ಥೆಯ ಸದಸ್ಯೆ ಸಿದ್ಧಮ್ಮ ಎಂ ಅಭಿಗೇರಿಮಠ ಮಾತನಾಡಿ, “ಪೌಷ್ಟಿಕ ‘ಪುಷ್ಟಿ’ ಆಹಾರವನ್ನು ಮಕ್ಕಳಿಗೆ ತಯಾರಿಸಿ ಕೊಡುವುದಲ್ಲದೇ ಮನೆ ಹಾಗೂ ಸುತ್ತಲೂ ಪರಿಸರ ಸ್ವಚ್ಛವಾಗಿರಬೇಕು. ಹೆಚ್ಚು ಮಕ್ಕಳಿಗೆ ತರಕಾರಿ ಹಾಗೂ ಹಣ್ಣುಗಳನ್ನು ಕೊಡಬೇಕು. ಅಂಗಡಿಗಳಲ್ಲಿ ಎಣ್ಣೆಯಿಂದ ಕರದು ತಯಾರಿಸಿದ ‘ಫಾಸ್ಟ್ ಫುಡ್’ ತಿನಿಸುವುದರಿಂದ ಮಕ್ಕಳು‌ ಅರೋಗ್ಯವಂತರಾಗಿರಲು ಸಾಧ್ಯವಿಲ್ಲ. ಮಕ್ಕಳಿಗೆ ಅಂಗಡಿಯ ಮಾರಾಟವಾಗುವ ಕುರುಕುರೆ, ಚಾಕೊಲೇಟ್ ಹೀಗೆ ಬೇರೆಬೇರೆ ತಿನಿಸು ಕೊಡುವುದಕ್ಕಿಂತ ಶೇಂಗಾ ಚಿಕ್ಕಿಯಂತಹ ಸಿಹಿ ತಿನಿಸಿ ಕೊಡಬೇಕು. ವಾರದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಹಾಗೂ ಶಾಲೆಗಳಲ್ಲಿ ಕೊಡುವ ಮೊಟ್ಟೆ ಮಕ್ಕಳಿಗೆ ಕೊಟ್ರೆ ಅವರು ಬಲಿಷ್ಠರಾಗಿ ಹಾಗೂ ಆರೋಗ್ಯವಂತರಾಗಿ ಇರುತ್ತಾರೆ” ಎಂದು ತಿಳಿಸಿದರು.

ಗ್ರಾಮದ ಮಹಿಳೆ ಲಕ್ಷ್ಮೀದೇವಿ ನಾಗರಾಜ್ ಹಳ್ಳಿಗುಡಿ ಮಾತನಾಡಿ, “ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ‘ಪುಷ್ಟಿ’ ಆಹಾರ ಪೊಟ್ಟಣದ ಬಗ್ಗೆ ನಮಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಅದನ್ನು ದನಕರುಗಳಿಗೆ ಹಾಕುತ್ತಿದ್ದೆವು. ಅದನ್ನು ಸೇವಿಸಿದ ಆಕಳು ಹೆಚ್ಚು ಹಾಲು ಕೊಡುತ್ತದೆ ಎಂದು ಪುಷ್ಟಿ ಪೊಟ್ಟಣದಲ್ಲಿರುವ ಪದಾರ್ಥ ವ್ಯರ್ಥ ಮಾಡುತ್ತಿದ್ದೆವು. ಜಾಗೃತಿ ಸಂಸ್ಥೆಯವರು ಅದರ ಕುರಿತು ಹೆಚ್ಚು ಮಾಹಿತಿ ನೀಡಿದ್ದರಿಂದ ನಾವು ತಿಳಿದುಕೊಂಡಿದ್ದೆವೆ. ನಾವು ಓದಿದವರಾದ್ರೂ ನಮಗೆ ಇದರ ಬಗ್ಗೆ ಗೊತ್ತಿರಲಿಲ್ಲ” ಎಂದು ಜಾಗೃತಿ ಸಂಸ್ಥೆಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? ಕೊಪ್ಪಳ | ಅಳವಂಡಿಯಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಗೆಳೆಯರು; ಗಣೇಶನಿಗೆ ಪೂಜೆ, ಅಭಿಷೇಕ

ಈ ಸಂದರ್ಭದಲ್ಲಿ ಪೂಜಾ ದನಕಾದೋಡಿ, ಶೋಭಾ ಎಸ್ ಪೊಲೀಸ ಪಾಟೀಲ್, ಮಂಜುಳಾ, ಸೌಮ್ಯ, ಕಾವೇರಿ, ರುಕ್ಸಾನಾ, ಭಗೀರತಿ, ಅಂಗನವಾಡಿ ಕಾರ್ಯಕರ್ತೆ ಬಸವರಾಜೇಶ್ವರಿ, ಬಸಮ್ಮ, ಎಸ್‌ಡಿಎಮ್‌ಸಿ ಅಧ್ಯಕ್ಷೆ ಅಶ್ವಿನಿ, ಕೊಪ್ಪಳ ಜಾಗೃತಿ ಟೀಮ್ ಹಾಗೂ ತಾಯಂದಿರು ಮಕ್ಕಳು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

ಉಡುಪಿ | ಉಚ್ಚಿಲ ದಸರಾ : ಇಂದು ವೈಭವದ ಭವ್ಯ ಶೋಭಾ ಯಾತ್ರೆ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲದಲ್ಲಿ...

ಹಾವೇರಿ | ನಾಳೆ ‘ಮಾದಕ ಮುಕ್ತ ಸಮಾಜ ಮತ್ತು ಡಿಜಿಟಲ್ ಸ್ವಾತಂತ್ರ್ಯ’ ಕುರಿತು ಜಿಲ್ಲಾ ಮಟ್ಟದ ಯುವ ಸಮಾವೇಶ

"ಮಾದಕ ವಸ್ತುಗಳ ಸೇವನೆ ಹಾಗೂ ಡಿಜಿಟಲ್ ವ್ಯಸನದಿಂದ ಯುವಕರು ತಮ್ಮ ಜೀವನವನ್ನು...

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

Download Eedina App Android / iOS

X