ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

Date:

Advertisements

‘ಖುರಾನ್’ ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು ಹೇಳಿವೆ. ಸಮಾನತೆ, ಸೌಹಾರ್ದತೆ, ಲೋಕಕಲ್ಯಾಣ, ಅಂಗವಿಕಲರಿಗೆ ಅನುಕಂಪದ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದ ಪ್ರವಾದಿಗಳ ಸಂದೇಶಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ ಎಂದು ಇಳಕಲ್ಲಿನ ಪ್ರತಿಷ್ಠಿತ ಕನ್ನಡ ವಾಗ್ಮಿಗಳಾದ ಲಾಲ್ ಹುಸೇನ್ ಕಂದ್ಗಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಪ್ಪಳ ನಗರದ ರಾಯಚೂರು ರಸ್ತೆಯಲ್ಲಿರುವ ಅಮರಜ್ಯೋತಿ ಫಂಕ್ಷನ್‌ ಹಾಲ್‌ನಲ್ಲಿ ಗಂಗಾವತಿಯ ಜಮಾಅತೆ ಇಸ್ಲಾಂ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ, ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಪ್ರವಾದಿ ಮುಹಮ್ಮದ್ ಅವರು ಸದಾ ʼಶಾಂತಿ ಮತ್ತು ಸಹೋದರತ್ವವೇ ನಿಜವಾದ ಜೀವನದ ಆಧಾರ. ಜನರಿಗೆ ಸೇವೆ ಮಾಡುವುದು ದೇವರ ಸೇವೆಗೆ ಸಮʼವೆಂದು ಹೇಳಿದ್ದ ಅವರು ಬಡವರು ಹಾಗೂ ಅನಾಥರಿಗೆ ಸಹಾಯ ಮಾಡಲು ಉತ್ತೇಜಿಸಿದರು. ಎಲ್ಲರೊಂದಿಗೆ ಕರುಣೆ, ದಯೆ, ಸಹಾನುಭೂತಿ ತೋರಬೇಕು. ಧರ್ಮ ಬೇರೆ ಇದ್ದರೂ ಮನುಷ್ಯತ್ವ ಎಲ್ಲರಲ್ಲೂ ಒಂದೇ ಎಂದಿದ್ದಾರೆ. ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ನ್ಯಾಯವನ್ನು ಪಾಲಿಸಬೇಕು. ನೆರೆಹೊರೆಯವರೊಂದಿಗೆ ಒಳ್ಳೆಯ ಸಂಬಂಧ ಹೊಂದುವುದು ಇಸ್ಲಾಂನಲ್ಲಿ ಮಹತ್ವದ್ದೆಂದು ಹೇಳಿದರು. ಎಲ್ಲ ಮನುಷ್ಯರೂ ದೇವರ ಮುಂದೆ ಸಮಾನರು ಎಂಬ ಸಂದೇಶವನ್ನು ಬೋಧಿಸಿದರು” ಎಂದು ತಿಳಿಸಿದರು.

Advertisements

“ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಪ್ರತಿಯೊಬ್ಬ ಸಮಾನತೆಯ ಹರಿಕಾರರು ಮನುಷ್ಯರಲ್ಲಿನ ಮನುಷ್ಯತ್ವಕ್ಕೆ ಬೆಲೆ ಕೊಟ್ಟು ಹಾಗೂ ಇಡೀ ವಿಶ್ವದಲ್ಲಿಯೇ ಭಾರತದಂತಹ ದೇಶ ಮತ್ತೊಂದಿಲ್ಲ, ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಂತೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಸಾಯಿ ಎಲ್ಲರೂ ಒಂದೇ ಎನ್ನುವಂತೆ ನಾವೆಲ್ಲರೂ ಅಣ್ಣತಮ್ಮಂದಿರಾಗಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ದೇಶದ ಸಂವಿಧಾನದ ಆಶಯದಂತೆ ನಾವೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ನಮ್ಮ ದೇಶದಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸಬೇಕು” ಎಂದು ತಿಳಿಸಿದರು.

ಹಿರಿಯ ಸಾಹಿತಿ ಮತ್ತು ಸುದ್ದಿ ಚಿಂತನ ಪತ್ರಿಕೆ ಸಂಪಾದಕ ಸಿ ಎಚ್ ನಾರಿನಾಳ ಮಾತನಾಡಿ, “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಕೂಡಲ-ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎಂದು ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾನತೆಯ ಸಂದೇಶವನ್ನು ತಮ್ಮ ವಚನಗಳಲ್ಲಿ ಸಾರಿದ್ದರೆ. ಇಂತಹ ಸರ್ವಧರ್ಮದ ಸಹೋದರತ್ವದ ಸೌಹಾರ್ದತೆಯ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ. ಅದಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಈ ಹಿಂದೆ ಭಾವೈಕ್ಯ ನಿಧಿ ಎಂದು ಹೆಸರುವಾಸಿಯಾಗಿದ್ದ ಎಂ ಎಸ್ ಅನ್ಸಾರಿಯವರು ಸತತ 11 ವರ್ಷಗಳ ಕಾಲ ನಗರದಲ್ಲಿ ಈದ್ ಮಿಲಾಫ್ ಕಾರ್ಯಕ್ರಮವನ್ನು ಆಯೋಜಿಸಿ ಸರ್ವ ಜನಾಂಗದಲ್ಲಿಯೂ ಸೌಹಾರ್ದತೆ ವೃದ್ಧಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ. ಅದನ್ನು ಮುಂದುವರೆಸುವ ಕೆಲಸ ನಮ್ಮೆಲ್ಲರಿಂದಲೂ ಆಗಬೇಕಿದೆ” ಎಂದರು.

ಎಂಎಂಎಂ ಕಾಲೇಜ್ ಉಪನ್ಯಾಸಕಿ ಡಾ.ಸೋಮಕ್ಕ ಮಾತನಾಡಿ, “ಕೋಮು ದ್ವೇಷದಿಂದ ನಮ್ಮ ಪ್ರೀತಿ, ಸ್ನೇಹ, ಭಾವೈಕ್ಯತೆ, ಮನುಷ್ಯರನ್ನು, ದೇಶ, ಜಗತ್ತನ್ನು, ಸುಡುತ್ತಿವೆ. ಅರಿಷಡ್ ವರ್ಷಗಳು ಹೆಚ್ಚಾಗುತ್ತಿವೆ. ನಾವು ಕಲಿತ ಪಾಠ, ನಮಗೆ ಬೋಧಿಸಿದ ಶಿಕ್ಷಣದ ಪರಿಕಲ್ಪನೆಗಳು, ಸತ್ಸಮರ ಭಾಷಣಗಳು ಮಾಯವಾಗಿವೆ. ಈ ನಾಡಿನ ದಾರ್ಶನಿಕರು, ಕವಿಗಳು ತತ್ವಜ್ಞಾನಿಗಳು ತತ್ವಪದಕಾರರು ಹಾಗೂ ವಚನ ರಚಿತ ಶರಣರು ಹೇಳಿದ್ದು ಒಂದೇ ಮಂತ್ರ. ಅದೇ, ʼಏನಾದರೂ ಆಗು ಮೊದಲು ಮಾನವನಾಗು, ಭಾರತೀಯರು ನಾವೆಲ್ಲರೂ ಒಂದೇʼ ಎಂದು ಹೇಳಿದರು. ಆದರೆ, ಈಗ ಜಾತಿ ಧರ್ಮಗಳ ಹೆಸರಲ್ಲಿ ಮನುಷ್ಯರು ವಿಂಗಡನೆಯಾಗುತ್ತಿದ್ದಾರೆ. ಮನುಷ್ಯ ಇರುವವರಿಗೆ ಮಾತ್ರ ದೇವರೆಂಬ ಕಲ್ಪನೆ ಇರುತ್ತದೆ. ಹೆಣವಾದ ಬಳಿಕ ಅದರ ಸುಳಿವೂ ಇರುವುದಿಲ್ಲ. ನಶ್ವರವಾದಂತಹ ಮೂರು ದಿನಗಳ ಜೀವನಕ್ಕೆ ಆಸೆಗಳ ಆಳದಲ್ಲಿ ಮುಳಿಗಿದ್ದೇವೆ. ಎಲ್ಲವೂ ಎಲ್ಲರೂ ಹಾಗೂ ಎಲ್ಲದೂ ನನಗೆ ಬೇಕೆಂಬ ದುರಾಸೆಯಲ್ಲಿ ಮುಳಗಿದ್ದೇವೆ. ಈ ಸಂತರ ಶರಣರ ಸಂದೇಶಗಳನ್ನು ತಿಳಿದರೆ ನಾವೆಲ್ಲ ಮನುಷ್ಯರಾಗಿ ಮನುಷ್ಯತ್ವದಿಂದ ಬದುಕಲು ಸಾಧ್ಯ” ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ? ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಉಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಶಾಹಿನ್ ಕೌಸರ್, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಬಂಜಾರ ಸಮಾಜ ಅಧ್ಯಕ್ಷ ಲಕ್ಷ್ಮಣ್ಣ ನಾಯಕ್, ಸುರೇಶ್ ಸಿಂಗನಾಳ್, ದಿಲೀಪ್ ಕುಮಾರ್, ಕೆ ಬಸಮಾಜ ರಾಷ್ಟ್ರೀಯ ಬಸವದಳ, ಡಾ. ಅಮರೇಶ್ ಅರಳಿ, ಡಾ.ಸುನಿಲ್ ಅರಳಿ, ಡಾ.ಜಿ ಎಂ ವಿಜಯಲಕ್ಷ್ಮಿ, ಡಾ. ಮುಲ್ತಾಜ್ ಬೇಗಂ, ಶೇಕ್ ಆಫೀಜುಲ್ಲಾ ಶಂಶುಲ್ಲುದಾ ಅನ್ಸಾರಿ, ಜನಾಬ್ ಹುಸೇನ್ ಸಾಬ್ ತುಂಗಭದ್ರಾ, ಜನಾಬ್ ಮುನೀರ್ ಸಾಬ್, ಜಮಾತೆ ಇಸ್ಲಾಮಿ ಮಾಜಿ ಜಿಲ್ಲಾಧ್ಯಕ್ಷ ದಿಲಾವರ್ అంಬರ್ ಎನ್, ಅಬ್ದುಲ್ ಖುದ್ದೂಸ್, ಸಾಲೇಹ ಬೇಗಂ ಹಾಗೂ ಜಮಾತಿನ ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

ಉಡುಪಿ | ಉಚ್ಚಿಲ ದಸರಾ : ಇಂದು ವೈಭವದ ಭವ್ಯ ಶೋಭಾ ಯಾತ್ರೆ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲದಲ್ಲಿ...

ಹಾವೇರಿ | ನಾಳೆ ‘ಮಾದಕ ಮುಕ್ತ ಸಮಾಜ ಮತ್ತು ಡಿಜಿಟಲ್ ಸ್ವಾತಂತ್ರ್ಯ’ ಕುರಿತು ಜಿಲ್ಲಾ ಮಟ್ಟದ ಯುವ ಸಮಾವೇಶ

"ಮಾದಕ ವಸ್ತುಗಳ ಸೇವನೆ ಹಾಗೂ ಡಿಜಿಟಲ್ ವ್ಯಸನದಿಂದ ಯುವಕರು ತಮ್ಮ ಜೀವನವನ್ನು...

Download Eedina App Android / iOS

X