ಮೊಬೈಲ್ ಗೀಳಿಗೆ ಬಿದ್ದಿದ್ದ ಬಾಲಕನಿಗೆ ಪೋಷಕರು ಬುದ್ದಿವಾದ ಹೇಳಿದಕ್ಕೆ ಕೋಪಗೊಂಡ ಬಾಲಕ ತನ್ನ ತಂದೆ ಹಾಗೂ ಅಕ್ಕನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಗಂಗಾವತಿ ತಾಲೂಕಿನ ಹೊಸ ಅಯೋದ್ಯ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಪ್ರಗತಿ (19) ಹಾಗೂ ವೆಂಕಟನಾಯ್ಡು (45) ಕೊಲೆಯಾದವರು ಎಂದು ತಿಳಿದು ಬಂದಿದೆ.
ತಾಯಿ ಸೌಜನ್ಯಗಳಿಗೂ ಚಾಕು ಇರಿದಿದ್ದಾನೆ, ಗಂಭೀರ ಗಾಯಗೊಂಡ ಅವರನ್ನು ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕೃತ್ಯ ಎಸಗಿದ ಸಾಯಿ ವೆಂಕಟಮಣಿ ತಾನೂ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ದ್ವಿತೀಯ ಪಿಯುಸಿ ಓದುತ್ತಿರುವ ಕೃತ್ಯ ಎಸಗಿದ ಬಾಲಕನ ವಯಸ್ಸು ಎಫ್‌ಐಆರ್ ನಲ್ಲಿ 18 ವರ್ಷ ಎಂದು ನಮೂದಿಸಲಾಗಿದೆ. ಆದರೆ, ಇನ್ನೂ ಅಷ್ಟು ವಯಸ್ಸು ಇಲ್ಲ ಎಂದು ಹೇಳಲಾಗುತ್ತಿದೆ. ಬಾಲಕನಿಗೆ ಆನ್‌ಲೈನ್ ಗೇಮ್ ಗೀಳು ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಡಾ.ರಾಮ್ ಎಲ್.ಅರಸಿದ್ಧಿ ತಿಳಿಸಿದ್ದಾರೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಯಾದಗಿರಿ | ಬಟ್ಟೆ ತೊಳೆಯಲು ಹೋದ ಮೂವರು ನೀರಿನಲ್ಲಿ ಮುಳುಗಿ ಸಾವು





