ಕೊರಟಗೆರೆ | ಬಸವಣ್ಣನವರು ಸಾಮಾಜಿಕ ಸಮಾನತೆಗೆ ಶ್ರಮಿಸಿದ ಮಹಾಚೇತನ : ತಹಶೀಲ್ದಾರ್ ಕೆ. ಮಂಜುನಾಥ್

Date:

ಬಸವಣ್ಣ ನವರು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸಮಾನತೆ ಕೊಡಿಸಲು ಜೊತೆಗೆ ಸಾಮಾಜಿಕ ಸಮಾನತೆಗೆ  ಶ್ರಮಿಸಿದ ಮಹಾಚೇತನ . ಹಸಿವನ್ನು ನೀಗಿಸುವ ಸಲುವಾಗಿ ಪ್ರತಿಯೊಬ್ಬರಿಗೂ ದಾಸೋಹ ಪರಿಕಲ್ಪನೆ ನೀಡಿದ ದಾರ್ಶನಿಕ  ಎಂದು ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.

- Advertisement -

ಕೊರಟಗೆರೆ ತಾಲೂಕು  ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಜ್ಞಾನಿ ಜಗಜ್ಯೋತಿ ಬಸವಣ್ಣರವರ 892ನೇಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ನವರು ಸಮಾಜವನ್ನು ಸರಿದಾರಿಗೆ ತರಲು, ಅಂಕುಡೊಂಕುಗಳನ್ನು ತಿದ್ದಲು ವಚನಸಾಹಿತ್ಯವನ್ನು ರೂಪಿಸಿದರು. ಒಂದು ಆತ್ಮಶುದ್ಧಿಗಾಗಿ ಪರಿಕಲ್ಪನೆಗೆ ಲಿಂಗ ಪೂಜೆ ಮಾಡಿದ್ದರು ಅಷ್ಟೇ‌‌‌, ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾದವರಲ್ಲ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಸುಮಾರು 300ಕ್ಕೂ ಹೆಚ್ಚು ವಚನಕಾರರನ್ನು ಒಳಗೊಂಡ ಜಗದ್ಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಸುಮಾರು 23 ಸಾವಿರ ವಚನಗಳನ್ನು ಸಾಮಾಜಿಕ ನ್ಯಾಯ, ಲಿಂಗ ಬೇಧ, ಅಸ್ಪೃಶ್ಯತೆ ನಿವಾರಣೆಗೆ ರಚಿಸಿದ್ದರು ಎಂದು ನುಡಿದರು.

ನನ್ನಲ್ಲಿಯೇ ದೇವರಿದ್ದಾರೆ ಅದನ್ನು ಭಕ್ತಿಯಿಂದ ಪೂಜಿಸಬೇಕು ಅದುವೇ ನಾವು ಮಾಡುವ ಕಾಯಕ ಎಂದವರು ಬಸವಣ್ಣರವರು,ಜಾತಿ ಧರ್ಮ ಎಂಬ ವಿಷ ಬೀಜ ಬಿತ್ತುವುದನ್ನು ಬಿಟ್ಟು ಮಹಾನ್ ನಾಯಕರು ನೀಡಿದ ತತ್ವ-ಸಿದ್ದಾಂತ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.

ನಮ್ಮ ನೆರೆ ರಾಷ್ಟ್ರಗಳಾದ ಜರ್ಮನಿ, ಇಟಲಿ ಸೇರಿದಂತೆ ಅನೇಕರು ವಚನಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ಇಂದಿಗೂ ಅವರ ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಕೆಲಸದ ಮೇಲಿನ ಭಕ್ತಿಯ ಸಂದೇಶವು ಭಾರತದಾದ್ಯಂತ ಜನರನ್ನು ಪ್ರೇರೇಪಿಸುತ್ತಿದೆ ಎಂದರು

 ಸಿಪಿಐ ಅನಿಲ್ ಮಾತನಾಡಿ, ಬಸವಣ್ಣ ನವರು ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೆಸರನ್ನು ಗಳಿಸಿದ ಇವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ತಲೆ ಎತ್ತಿ ನಿಂತಿದ್ದ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಜಾತಿ, ಬಣ್ಣ, ಅಂತಸ್ತಿನಲ್ಲಿ ವ್ಯತ್ಯಾಸವಿದ್ದರೂ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ ಬಸವಣ್ಣನವರು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಕೊರಟಗೆರೆ ಟಿಎಪಿಸಿಎಂಎಸ್ ಅಧ್ಯಕ್ಷ  ಜಿ.ಎಂ ಶಿವಾನಂದ್ ಮಾತನಾಡಿ ಬಸವ ಜಯಂತಿ ಒಂದು ಪ್ರಾಚೀನ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ವೈವಿಧ್ಯಮಯವನ್ನು ಪ್ರತಿನಿಧಿಸುತ್ತದೆ. ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಜಗದ್ಗುರು ಬಸವೇಶ್ವರರ ಜಯಂತಿಯನ್ನು ಆಚರಿಸಲಾಗಿದೆ.

ಇಡೀ ಪ್ರಪಂಚದಲ್ಲಿ ಎಲ್ಲಾರೂ ಬಸವಣ್ಣರವರ ಅನುಯಾಯಿಗಳಾಗಿದ್ದರು.ಎಲ್ಲಾ ಜಾತಿ ಒಂದೇ ಯಾವುದೇ ಜಾತಿಯು ಇಲ್ಲಿಲ್ಲ ಎಂದು ಕೂಡಲಸಂಗಮ ದೇವ ಎನ್ನುವ ಸಮಾನತೆ, ಲಿಂಗಾತಾರತಮ್ಯದ ವಿರುದ್ದ ಹೋರಾಡ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದವರು. ಸಮಾಜದ ಸರ್ವಧರ್ಮದವರು ಬಸವಣ್ಣರವರ ತತ್ತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅವರ ಮಾರ್ಗದರ್ಶನದಂತೆ ನಡೆಯಬೇಕು.

ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ರಾಮ್‌ಪ್ರಸಾದ್, ವೀರಶೈವ ಸಮಾಜದ ಉಪಾಧ್ಯಕ್ಷ ವಿನಯ್‌ಕುಮಾರ್, ಕಾರ್ಯದರ್ಶಿ ಚೆನ್ನಬಸಪ್ಪ, ಖಚಾಂಚಿ ಶಿವಾನಂದ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಮುಖಂಡರಾದ ಎಲ್.ಸಿ ರಾಜಣ್ಣ, ಪರ್ವತಯ್ಯ, ಸುರೇಶ್, ಚಂದ್ರಶೇಖರ್, ಪವನ್‌ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಪಶ್ಚಿಮ ಪದವೀಧರರ  ಚುನಾವಣೆ; ಜಿಲ್ಲೆಯಲ್ಲಿ ಶೇ. 77.66  ರಷ್ಟು ಮತದಾನ ದಾಖಲು

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನವು ಅಕ್ಟೋಬರ್ 23...

ಉಡುಪಿ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ; ಮಳೆಯಲ್ಲೂ ಮುಂದುವರಿದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ...

ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ : ತುಮಕೂರು ಜಿಲ್ಲೆಯಲ್ಲಿ ಶೇ.71.56 ಮತದಾನ

 ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ತುಮಕೂರು...

ಉಡುಪಿ | 110 ಕೋಟಿ ರೂ. ವೆಚ್ಚದ ಆಸ್ಪತ್ರೆಗೆ ಹಳೆಯ ಪರಿಕರಗಳ ಅಳವಡಿಕೆ ಸಲ್ಲದು: ಫ್ರ್ಯಾಂಕಿ ಡಿಸೋಜ

ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಉಡುಪಿ ಜಿಲ್ಲಾ...