ಮಣಿಪುರ ಹಿಂಸಾಚಾರಕ್ಕೆ ಕುಕಿ ಸಮುದಾಯವೇ ಕಾರಣ; ಚಕ್ರವರ್ತಿ ಸೂಲಿಬೆಲೆ ಆರೋಪ

Date:

Advertisements

ಮಣಿಪುರ ಹಿಂಸಾಚಾರಕ್ಕೆ ಕುಕಿ ಬಡುಕಟ್ಟು ಸಮುದಾಯವೇ ಕಾರಣ. ಅವರು ಗಾಂಜಾ ಬೆಳೆದು ಮೈತೇಯಿ ಯುವಕರನ್ನು ನಶೆಗೆ ದಾಸರನ್ನಾಗಿ ಮಾಡಿದ್ದಾರೆ. ಮಯನ್ಮಾರ್ ಅಕ್ರಮ ವಲಸಿಗರಿಗೆ ವಾಸಿಸಲು ಜಾಗ ನೀಡಿದ್ದಾರೆ. ಇದೇ ಘರ್ಷಣೆಗೆ ಮೂಲ ಕಾರಣವಾಗಿದೆ ಎಂದು ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ನಮೋಬ್ರಿಗೇಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಣಿಪುರದಲ್ಲಿ ನಡೆದ ಮಹಿಳೆಯ ಮೇಲೆ ದೌರ್ಜನ್ಯ ಸಭ್ಯ ಸಮಾಜ ತಲೆತಗ್ಗಿಸಬೇಕಾದ ಘಟನೆಯಾಗಿದೆ. ಆದರೆ, ಮಣಿಪುರ ಹಿಂಸಾಚಾರಕ್ಕೆ ಬೇರೆಯ ಆಯಾಮವಿದೆ. ಕುಕಿ ಬುಡಕಟ್ಟು ಸಮುದಾಯ ತಮಗೆ ದೊರೆತಿದ್ದ ಸವಲತ್ತನ್ನು ಅಕ್ರಮ ವಿಷಯಗಳಿಗೆ ಬಳಸಿಕೊಂಡಿದೆ. ಮಾದಕ ವಸ್ತುಗಳ ಮಾರಾಟ ಮಾಡಿ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇದೆಲ್ಲದಕ್ಕೂ ಚೀನಾ ಬೆಂಬಲ ನಿಡುತ್ತಿದೆ” ಎಂದು ದೂರಿದ್ದಾರೆ.

“ಮೈಥೇಯಿಗಳನ್ನು ಪ್ರಯೋಜನವಿಲ್ಲದವರು ಎಂಬಂತೆ ಬಿಂಬಿಸಿದ್ದರು. ಇಂಫಾಲ್‌ನಲ್ಲಿ ಮೈಥೇಯಿಗಳು ಕ್ರೂರತೆ ಮೆರೆದ ಘಟನೆಗಳು ಕಾಣುತ್ತಿವೆ. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ಕುಕಿಗಳು ಹಿಂಸಾಚಾರ ನಡೆಸುತ್ತಿದ್ದಾರೆ. ಅವುಗಳು ಪ್ರಚಾರ ಪಡೆಯುತ್ತಿಲ್ಲ” ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ಪ್ರಬಲ ಮತ್ತು ಬಹುಸಂಖ್ಯಾತರಾಗಿರುವ ಮೈಥೇಯಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಲು ಪರಿಗಣಿಸಬಹುದು ಎಂದು ಅಲ್ಲಿನ ಹೈಕೋರ್ಟ್‌ ಅದೇಶ ನೀಡಿತ್ತು. ಅದನ್ನು ಖಂಡಿಸಿ ಕುಕಿ ಸಮುದಾಯ ಇಂಫಾಲ್‌ನಲ್ಲಿ ಶಾಂತಿ ಪ್ರತಿಭಟನೆ ನಡೆಸಿದ್ದವು. ಆದರೆ, ಅಂದಿನ ರಾತ್ರಿ ವೇಳೆಗೆ ಮೈಥೇಯಿ ಸಮುದಾಯಕ್ಕೆ ಸೇರಿದ ಕೆಲವರು ಗಲಭೆ ಎಬ್ಬಿಸಿದ್ದರು. ಹಿಂಸಾಚಾರ ಆರಂಭವಾಗಿ 90 ದಿನಗಳ ಕಳೆದಿವೆ. ಆದರೂ, ಹಿಂಸಾಚಾರವನ್ನು ತಡೆಯುವಲ್ಲಿ ಬಿಜೆಪಿ ಡಬ್ಬಲ್ ಎಂಜಿನ್ ಸರ್ಕಾರ ವಿಫಲವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸರಕಾರ ದೇವದಾಸಿ ಮಹಿಳೆಯರ ಕುಟುಂಬ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸುವ ಕ್ರಮ ಸ್ವಾಗತ

"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ...

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

Download Eedina App Android / iOS

X