ಉಡುಪಿ | ಕುಂದಾಪುರ ಜಾನಪದದ ತವರು – ಡಾ ಜಾನಪದ ಎಸ್ ಬಾಲಾಜಿ

Date:

Advertisements

ಕುಂದಾಪುರ ಜಾನಪದದ ತವರು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಹಾಲಾಡಿಯ ರಾಜೀವ್ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕುಂದಾಪುರದ ಗ್ರಾಮೀಣ ಭಾಗಗಳಲ್ಲಿ ಮೂಲ ಜಾನಪದ ಸಂಸ್ಕೃತಿ ಜೀವಂತವಾಗಿದೆ, ಅಳಿವಿನ ಅಂಚಿನಲ್ಲಿರುವ ಮೂಲ ಜಾನಪದ ಕಲೆಗಳನ್ನು ದಾಖಲಿಕಾರಣ ಮೂಲಕ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕ ಜಾನಪದ ಸಂರಕ್ಷಣೆ ಕಾರ್ಯದಲ್ಲಿ ತೊಡಗಲಿದೆ ಎಂದು ತಿಳಿಸಿದರು. ಯುವಜನರು ಸ್ಥಳೀಯ ಜಾನಪದ ಕಲೆಯನ್ನು ಅನುಕರಣೆ ಮಾಡಿ ಅದನ್ನೇ ಅಭ್ಯಾಸ ಮಾಡಬೇಕೆಂದು ತಿಳಿಸಿದರು.

ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅಶೋಕ್ ಶೆಟ್ಟಿ ಮಾತನಾಡಿ ನಶಿಸಿಹೋಗುವ ಜಾನಪದ ಕಲೆಗಳನ್ನು ಪುನರ್ಜೀವ ಕೊಡುವ ಕಾರ್ಯ ಜಾನಪದ ಯುವ ಬ್ರಿಗೇಡ್ ಮೂಲಕ ಆಗುತ್ತಿರುವುದು ಉತ್ತಮ ಬೆಳವಣಿಗೆಯನ್ನು ತಿಳಿಸಿದರು.

ಕನ್ನಡ ಜಾನಪದ ಪರಿಸರ ರಾಜ್ಯ ಮಹಿಳಾ ಘಟಕ ಸಂಚಾಲಕಿ ಡಾ ಭಾರತಿ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಜಾನಪದ ಪರಿಷತ್ ಮೂಲಕ ಯುವಜನರನ್ನು ಜಾನಪದ ಜಾಗೃತಿ ಮೂಡಿಸುವ ಕಾರ್ಯ ರಾಜ್ಯಾದ್ಯಂತ ಪ್ರಾರಂಭವಾಗಿದೆ, ಸ್ಥಳೀಯ ಜನಪದ ಸಂಪ್ರದಾಯ ಕಲೆಗಳನ್ನು ತರಬೇತಿ ಹಾಗೂ ದಾಖಲೀಕರಣದ ಮೂಲಕ ಯುವಜನರು ಎಂದು ತಿಳಿಸಿದರು.

ಸಾಹಿತಿ ಮಂಜುನಾಥ್ ಕಾಮತ್ ಮಾತನಾಡಿ ಜಾನಪದ ಯುವ ಬ್ರಿಗೇಡ್ ಇಂದಿನ ದಿನಗಳಲ್ಲಿ ಅಗತ್ಯತೆ ಬಹಳಷ್ಟಿದೆ ಯುವ ಜನರ ಮೂಲಕ ಸಂಸ್ಕೃತಿ ಉಳಿಸುವ ಕನ್ನಡ ಜಾನಪದ ಪರಿಷತ್ ಪ್ರಯತ್ನ ಮೆಚ್ಚುಗೆಗೆ ಪಾತ್ರ ಎಂದರು.

ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾಗಿ ವಿನಯ್, ಸಹ ಸಂಚಾಲಕರಾಗಿ ಶರತ್ ಪೂಜಾರಿ, ಬೈಂದೂರ್ ಸಂಚಾಲಕರಾಗಿ ದರ್ಶನ್ ಪೂಜಾರಿ, ಸ್ವಸ್ಟಿಕ್ ಬಂಡಾರಿ, ಪ್ರಕೃತಿ ಸಾಲಿಗ್ರಾಮ, ಸೌಪಣಿಕ ಪದವಿ ಸ್ವೀಕರಿಸಿದರು. ಹಾಲಾಡಿ ಚಂಡೆ ತಂಡ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಜನಪದ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನೀಡಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ಜನಾರ್ಧನ್ ಹಾಲಾಡಿ,ಪುನೀತ್ ಪೂಜಾರಿ, ಕಾಲೇಜಿನ ಉಪನ್ಯಾಸಕರು ಪ್ರಕಾಶ್, ಚಂದ್ರಶೇಖರ, ಗಣಪತಿ ಹೆಗಡೆ, ಕುಮಾರ್ ಕಲಾವಿದ ಗುಂಡು ಪೂಜಾರಿ, ಜಾನಪದ ಯುವ ಬ್ರಿಗೇಡ್ ರಾಜ್ಯ ಸಂಚಾಲಕರು ಅಭಿ ಶೆಟ್ಟಿ, ಕರಾವಳಿ ವಿಭಾಗ ಸಂಚಾಲಕರು ಸಂದೇಶ್ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರು ಸಂಪತ್ ಕುಮಾರ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X