ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಪೋಲೆನಳ್ಳಿಯ ದಲಿತ ವ್ಯಕ್ತಿಯ ಭೀಕರ ಕೊಲೆ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.
ಪೋಲೆನಹಳ್ಳಿ ಗ್ರಾಮದಲ್ಲಿ ನಡೆದಿರುವ ಮಾದಿಗ ಜನಾಂಗದ ವ್ಯಕ್ತಿಯನ್ನು ಅಮಾನುಷವಾಗಿ ವಾಹನ ಚಲಾಯಿಸಿ ಕೊಲೆ ಮಾಡಿದ್ದು, ಕುಟುಂಬದವರಿಂದ ಯಾವುದೆ ಮಾಹಿತಿ ಪಡೆಯದೆ ಎಫ್ ಐ ಆರ್ ದಾಖಲಿಸಿ, ಅನ್ಯಾಯ ಮಾಡಿದ್ದಾರೆ. ಹಾಗಾಗಿ ಸಮಗ್ರವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕೆಂದು ಡಿಎಸ್ಎಸ್ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.
ದಲಿತ ವ್ಯಕ್ತಿ ಕೊಲೆ ಸಂಬಂಧಿಸಿದಂತೆ ಯಾರೆ ಅಪರಾಧಿಗಳಾದರೂ ಅವರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಎನ್ ಮಹೇಶ್ ಆಗ್ರಹಿಸಿದರು.
ಮಧುಗಿರಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಸಮೀಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೃತಪಟ್ಟಿರುವ ಯುವಕನ ಕುಟುಂಬಕ್ಕೆ ಸರಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ಅವರ ಕುಟುಂಬದವರಿಗೆ ಸಕಾಲಕ್ಕೆ ದೊರೆಯಬೇಕು. ಹಾಗೂ ಮೃತನ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಬೇಕು. ಪ್ರಕರಣದಲ್ಲಿ ಕೆಲವರ ಹೆಸರುಗಳು ಬಿಟ್ಟು ಹೋಗಿದ್ದು ಅವರುಗಳನ್ನು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿಪಂ ಸದಸ್ಯ ಹೆಚ್ ಡಿ ಕೃಷ್ಣ ಪ್ಪ,ವಕೀಲ ನರಸಿಂಹಮೂರ್ತಿ, ದೊಡ್ಡೇರಿ ಕಣಿಮಯ್ಯ, ತೊಂಡೊಟಿ ರಾಮಾಂಜಿ,ರಾಧಕೃಷ್ಣ,ಎಂ.ವೈ ಶಿವಕುಮಾರ್,ಕದರಪ್ಪ,ರಂಗನಾಥ್,ನರಸೀಯಪ್ಪ, ಕೊರಟಗೆರೆ ನಾಗರಾಜು ಹಾಗೂ ಮತ್ತಿತರರು ಇದ್ದರು.