ಮಾದಿಗರು ಬೇರೆ ಅಲ್ಲ ನಾಯಕರು ಬೇರೆ ಅಲ್ಲ ನಾವೆಲ್ಲರೂ ಒಂದೇ ನಮ್ಮನಿಮ್ಮ ಬೆಡಗುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ನಮ್ಮ ಎರಡು ಜಾತಿಗಳಲ್ಲಿ ಮಾತ್ರ ಬೆಡಗುಗಳು ಒಂದೆಯಾಗಿರುವುದನ್ನು ಕಾಣಬಹುದು. ಪುರಾತನ ಕಾಲದಲ್ಲಿ ನಾವೆಲ್ಲರೂ ಒಟ್ಟಿಗೆ ಬದುಕುತ್ತಿದ್ದೆವು.ಈಗಲೂ ಅದನ್ನೆ ಮುಂದುವರೆಸಿಕೊಂಡು ಸಹಬಾಳ್ವೆ ಬದುಕು ನಡೆಸೋಣ ಎಂದು ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.
ಮಧುಗಿರಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿ ತಾಲ್ಲೂಕಿನ ಪೋಲೇನಹಳ್ಳಿ ಹಾಗೂ ಪಾವಗಡದ ಬೆಳ್ಳಿಬಟ್ಲು ಗ್ರಾಮಗಳಲ್ಲಿ ನಡೆದ ದಲಿತರ ಕಗ್ಗೊಲೆ ಘಟನೆಗಳನ್ನು ಖಂಡಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ, ದಲಿತ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಇತಿಹಾಸ ಪರಂಪರೆಯಲ್ಲಿ ಮಾದಿಗರು ,ನಾಯಕರು ಜೊತೆಯಾಗಿದ್ದು ದೇಶವನ್ನು ಅಳಿದ ಅರಸರುಗಳು ಈ ಎರಡು ಜಾತಿಗಳಲ್ಲಿ ಯಾವುದೇ ದ್ವೇಷ, ಅಸೂಯೆ ಬೆಳಸಿಕೊಳ್ಳದೆ ಅಣ್ಣ-ತಮ್ಮ ನೆಂಟರಿಷ್ಟರಂತೆ ಬದುಕಿ ಸಹಬಾಳ್ವೆ ನಡೆಸಿ ಊರುಗಳಲ್ಲಿ, ನಿಮಗೆ ಆಗಿರುವ ಅನ್ಯಾಯಕ್ಕೆ ಹೊರಾಟ ಮಾಡುತ್ತ ನ್ಯಾಯ ಕೇಳುವುದರಲ್ಲಿ ತಪ್ಪಿಲ್ಲ ನಾನು ಸಹ ದಲಿತರ ಪರವಾಗಿ ಐವತ್ತು ವರುಷಗಳಿಂದ ಹೋರಾಟ ಮಾಡಿ ನ್ಯಾಯ ಕೊಡಿಸಿ ಬಂದವನು ಬರೀ ನೀವು ಮಾತ್ರ ದಲಿತರಲ್ಲ ನಾನು ಸಹ ದೊಡ್ಡ ದಲಿತ ಎಡಗೈ ಜನಾಂಗದ ಪರವಾಗಿ ಹೆಚ್ಚು ಕಾಳಜಿಯಿಟ್ಟು ನಿಮ್ಮಯ ಕಷ್ಟಸುಖಃಗಳಲ್ಲಿ ಜೊತೆಯಾಗಿ ನಿಂತವನು
ಇಡೀ ಜಿಲ್ಲೆಯಲ್ಲಿಯೇ ಎಡಗೈ ಜನಾಂಗಕ್ಕೆ ನಾನು ಮಾಡಿದಷ್ಟು ಅನುಕೂಲಗಳನ್ನು ಬೇರೆ ಯಾರಾದರೂ ಮಾಡಿದ್ದರೆ ತೋರಿಸಿ ಎಂದು ಹೋರಾಟಗಾರರನ್ನು ಪ್ರಶ್ನಿಸಿದರು.
ಪೋಲೆನಹಳ್ಳಿ ಗ್ರಾಮದ ಕೊಲೆಯಾದ ಮೃತ ಕುಟುಂಬಕ್ಕೆ ತಾವು ಯಾಕೆ ಭೇಟಿ ನೀಡಲ್ಲಿಲ್ಲ ಎಂಬ ದಲಿತ ಮುಖಂಡರ ಪ್ರಶ್ನೆಗೆ ಉತ್ತರಿಸುತ್ತಾ ಘಟನೆಯ ಬಗ್ಗೆ ಪೋಲಿಸರಿಂದ ಸಂಪೂರ್ಣ ಮಾಹಿತಿ ಪಡೆದು ತಪ್ಪಿತಸ್ಥರು ಯಾರೆ ಇರಲಿ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡು ನೊಂದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಹಾಗೂ ಎರಡು ಜಾತಿಗಳು ದಲಿತರಾಗಿದ್ದು ನಾನು ಇಂತಹ ವೇಳೆ ಭೇಟಿ ನೀಡಿದರೆ ಅವರಿಗೆ ಅದು ಹೇಳುದ್ರು ಇವರಿಗೆ ಇನ್ನೇನೂ ಹೇಳುದ್ರು ಅಂಥಾ ಇಲ್ಲಸಲ್ಲದ ಅಪವಾದಗಳು ಸೃಷ್ಟಿಸುತ್ತಾರೆಂಬ ಕಾರಣಕ್ಕೆ ಭೇಟಿ ನೀಡಲ್ಲಿಲ್ಲ. ಘಟನೆ ತಿಳಿಯಾದ ಮೇಲೆ ನಿಮ್ಮೆಲ್ಲರನ್ನು ಕರೆದುಕೊಂಡು ಮೃತರ ಕುಟುಂಬಕ್ಕೆ ಭೇಟಿ ನೀಡುವ ಜೊತೆಗೆ ಸರ್ಕಾರದಿಂದ ಹಾಗೂ ವೈಯುಕ್ತಿಕವಾಗಿ ಅ ಕುಟುಂಬಕ್ಕೆ ನ್ಯಾಯ ಕೊಡಿಸುವ ಜೊತೆಗೆ ಅರ್ಥಿಕ ಭದ್ರತೆ ನೀಡುತ್ತೇನೆ ಎಂದ ಅವರು ನಿಮ್ಮ ಪರವಾಗಿ ನಿಂತು ಅಭಿವೃದ್ಧಿ ಕೆಲಸ ಮಾಡುತ್ತಾ ಎಡಗೈ ಸಮುದಾಯ ಆರ್ಥಿಕವಾಗಿ ಮುಂದೆ ತರಲು ನಾನು ಶ್ರಮಿಸುತ್ತಿರುವೆ ಇನ್ನೂ ಕೆಲವರು ನಿಮ್ಮ ಪರವಾಗಿ ನಿಲ್ಲುವುದು ಇಲ್ಲ ಕೆಲಸ ಸಹ ಮಾಡುವುದಿಲ್ಲ ಈಗ ವಿಚಾರ ತಿಳಿದು ಬಂದಿರುವೆ ಬೇರೆ ಯಾರಾದರೂ ಬಂದ್ರ ನೀವು ಇದನ್ನೆ ಮುಂದಿಟ್ಟುಕ್ಕೊಂಡು ನನ್ನ ವಿರುದ್ದ ದಿಕ್ಕಾರ ಕೂಗುವುದು ಯಾವ ನ್ಯಾಯ ನಿಮ್ಮ ಜನಾಂಗದ ಜೊತೆಯಲ್ಲೇ ನಾನು ಸದಾ ಬೆಂಬಲವಾಗಿ ನಿಂತವನು ನಿಮ್ಮಗಳ ವಿರುದ್ದ ಇರುವವರಿಗೆ ದಿಕ್ಕಾರ ಕೂಗಿ ಅದಕ್ಕೊಂದು ಅರ್ಥವಿರುತ್ತದೆ ಎಂದರು.
ಪಾವಗಡ ಮತ್ತು ಮಧುಗಿರಿ ತಾಲೂಕಿನ ಎರಡು ಕೃತ್ಯಗಳನ್ನು ಖಂಡಿಸುವ ಜೊತೆಗೆ ನೊಂದ ಕುಟುಂಬಗಳ ಬಗ್ಗೆ ನನಗೂ ನೋವಿದೆ ನಮ್ಮ ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಇಲ್ಲಿಂದ ತೆರಳಿದ ಬಳಿಕ ಗೃಹಸಚಿವರನ್ನು ಭೇಟಿಯಾಗಿ ಘಟನೆಗೆ ಸಂಬಂಧಪಟ್ಟಂತೆ ಚರ್ಚಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನೊಂದ ಕುಟುಂಬಗಳ ಜೊತೆ ನಿಲ್ಲುವುದಾಗಿ ಭರವಸೆ ನೀಡಿದರು.
ವಿಧಾನಸಭಾ ಚುನಾವಣೆಯಲ್ಲಿ 35 ಸಾವಿರ ಬಹುಮತದಲ್ಲಿ ಗೆಲ್ಲಲು ಎಡಗೈ ಸಮುದಾಯವೇ ಕಾರಣ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿರುವ ಜನಾಂಗ ನೀವುಗಳು. ಶೇ. 90 ಪರ್ಸೆಂಟ್ ನನಗೆ ಮತ ಹಾಕಿದ ಕಾರಣ ಈ ಗೆಲುವು ಸಾಧ್ಯವಾಗಿದ್ದು. ನಿಮ್ಮ ಈ ಬಹುದೊಡ್ಡ ಋಣ ನನ್ನ ಮೇಲಿದೆ ಇದನ್ನು ಎಂದಿಗೂ ಮರೆಯಲ್ಲ. ನೀವು ಯಾವುದೇ ಸಮಯದಲ್ಲಿ ಬಂದರು ಸಹಾಯ ಮಾಡಿ ನಿಮ್ಮ ಋಣ ತೀರಿಸಲು ಸಿದ್ದನಿದ್ದೇನೆ ನನ್ನ ಕ್ಷೇತ್ರದಲ್ಲಿ ಮಾದಿಗರು-ನಾಯಕರು ಅನ್ಯೋನ್ಯವಾಗಿ ಬದುಕುವುದನ್ನು ನಿಮ್ಮೆಲ್ಲರಿಂದ ನಿರೀಕ್ಷಿಸುತ್ತೆನೆ ಎಂದರು.
ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಸಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮಧುಗಿರಿ ಉಪವಿಭಾಗದ ಪಾವಗಡ,ಕೊರಟಗೆರೆ, ಶಿರಾ ನಾಲ್ಕು ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರು ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ ನೊಂದ ದಲಿತ ಕುಟುಂಬಗಳಿಗೆ 50 ಲಕ್ಷ ಪರಿಹಾರ,ಐದು ಎಕರೆ ಭೂಮಿ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು
ಪ್ರತಿಭಟನೆಯಲ್ಲಿ ಹಿರಿಯೂರು ಆದಿಜಾಂಭವ ಮಠದ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದರಬೆಟ್ಟದ ಆದಿಜಾಂಭವ ಮಠದ ಸಿದ್ದಗಂಗ ಶಿವಯೋಗಿ ಸ್ವಾಮೀಜಿ, ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಕೇಶವಮೂರ್ತಿ, ದಲಿತ ನೌಕರರ ಒಕ್ಕೂಟದ ಅದ್ಯಕ್ಷ ಎಂ.ಸಿ.ರಾಮಣ್ಣ, ದಸಂಸ ಜಿಲ್ಲಾ ಸಂಚಾಲಕ ಬೆಲ್ಲದಮಡು ಕೃಷ್ಣಪ್ಪ, ದಸಂಸ ತಾಲ್ಲೂಕು ಸಂಚಾಲಕ ಎಸ್.ಕೆ.ರಂಗನಾಥ್,ಶ್ರೀರಾಮಪ್ಪ, ತಿಪ್ಪಾಪುರ ಗಂಗಾಧರ್, ಪಾವಗಡ ನಾರಾಯಣಪ್ಪ,
ಎಂ.ವೈ.ಶಿವಕುಮಾರ್, ರೈತಸಂಘದ ಸುನಿಲ್,ದೊಡ್ಡೇರಿ ಮಹಾಲಿಂಗ,ಮುದ್ದೆನೇರಳಕೆರೆ ರಾಜು, ಸಪಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಸಿದ್ದಗಂಗಪ್ಪ,ಭರತ್ ಕುಮಾರ್,ಸತ್ಯಪ್ಪ, ಕರಿಯಣ್ಣ,ರವಿ,ಶಿವಣ್ಣ,ರಾಜಣ್ಣ,ಗಂಗಾಧರ್,ಗೋವಿಂದಪ್ಪ,ನಲ್ಲೆಕಾಮನಹಳ್ಳಿ ನಾರಾಯಣಪ್ಪ, ಹಾಗೂ ನಾಲ್ಕು ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.