ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ಮಹಾದೇವ ನಾಯಕ ಅವರು ಪುನಾರಾಯ್ಕೆಯಾಗಿದ್ದಾರೆ.
ಕೋಟೆಯಲ್ಲಿ ಕಳೆದ ಶುಕ್ರವಾರ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಹಾಗೂ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅವರ ನೇತೃತ್ವದಲ್ಲಿ ತಾಲ್ಲೂಕಿನ ರೈತ ಸಂಘದ ಸಮಿತಿ ಪುನಾರಚನೆಯಾಗಿದ್ದು, ಪ್ರಸ್ತುತ ಸಾಲಿಗೆ ಮಹಾದೇವ ನಾಯಕ ಅವರು ಮರು ಆಯ್ಕೆಯಾಗುವ ಮೂಲಕ ಮತ್ತೆ ತಾಲ್ಲೂಕಿನ ಅಧ್ಯಕ್ಷರಾಗಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದೆ ನೂತನ ತಾಲ್ಲೂಕು ಅಧ್ಯಕ್ಷರಾದ ಮಹಾದೇವ ನಾಯಕ ಜಿಲ್ಲಾ ಮತ್ತು ರಾಜ್ಯ ಸಮಿತಿ ಹಾಗೂ ತಾಲ್ಲೂಕಿನ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿ. ತಾಲ್ಲೂಕಿನಲ್ಲಿ ಇದುವರೆಗೆ ಹಿರಿಯರು ಕಟ್ಟಿ ಬೆಳೆಸಿದ ರೈತ ಸಂಘಟನೆಯನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು, ಮುಂದೆಯೂ ಸಹ ಎಲ್ಲರ ಸಹಭಾಗಿತ್ವದಲ್ಲಿ, ಎಲ್ಲರೊಟ್ಟಿಗೆ ರೈತ ಪರ ಹೋರಾಟ ನಡೆಸುವುದಾಗಿ ಹೇಳಿದರು.
ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅದರ ಜೊತೆಗೆ ರೈತರಿಗೆ ಅನ್ಯಾಯವಾಗುತ್ತಿದೆ. ಇಲಾಖೆಗಳು, ಜನಪ್ರತಿನಿದಿಗಳು ಭ್ರಷ್ಟರಾಗಿ ಜನಪರ ಕೆಲಸ ಮಾಡುತ್ತಿಲ್ಲ. ರೈತ ಸಂಘ ಚಳವಳಿ ಮೂಲಕ ಚಾಟಿ ಬೀಸಲಿದೆ. ನೊಂದವರ ಪರವಾಗಿ ಇನ್ನಷ್ಟು ಕೆಲಸ ಮಾಡಲಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹೋರಾಟಗಾರರನ್ನು ಕಳೆದುಕೊಳ್ಳುವುದು ಸಮಾಜಕ್ಕೆ ನಷ್ಟ : ಬಡಗಲಪುರ ನಾಗೇಂದ್ರ
ಪುನರಚಿತ ತಾಲ್ಲೂಕು ಸಮಿತಿಯಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ಮಹಾದೇವನಾಯಕ, ಗೌರವ ಅಧ್ಯಕ್ಷರಾಗಿ ರವಿಕುಮಾರ್, ಕಾರ್ಯದರ್ಶಿಗಳಾಗಿ ಚಲವರಾಜು, ಸಿಂಡೇನಹಳ್ಳಿ ರವಿ, ಉಪಾಧ್ಯಕ್ಷರಾಗಿ ಗೋವಿಂದೆಗೌಡ, ರಾಜಕುಮಾರ, ವೆಂಕಟೇಗೌಡ, ಶಿವಣ್ಣ, ಚಿಕ್ಕೇಗೌಡ, ಶಿವಲಿಂಗಪ್ಪ, ಬೋರೇಗೌಡ, ಕಾರ್ಯಧ್ಯಕ್ಷರಾಗಿ ವಡ್ಡರಗುಡಿ ಬಸವರಾಜು, ಚಾಮಳ್ಳಿ ಮಹದೇವು, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದರಾಮೇಗೌಡ ಅವರು ಆಯ್ಕೆಯಾಗಿದ್ದಾರೆ.