ಉಡುಪಿ | ಬೋಟ್ ಮಾಲೀಕನ ಪಾತ್ರವಿಲ್ಲ, ಆದರೂ ಸಿಕ್ಕಿಸಿದ್ದಾರೆ- ದಯಾನಂದ್ ಸುವರ್ಣ

Date:

ಮಲ್ಪೆ ಬಂದರಿನ ನಿರ್ವಹಣೆಯ‌ನ್ನು ಸಂಘ ಸಂಸ್ಥೆಗೆ ಕೊಡಬೇಕು. ಸಂಘ ಸಂಸ್ಥೆಗಳ ಕೈಗೆ ನೀಡಿದರೆ ನಿಸ್ವಾರ್ಥ ಸೇವೆ ಮಾಡುತ್ತಾರೆ. ಖಾಸಗಿಯವರಿಗೆ ನೀಡುವುದರಿಂದ ಕೇವಲ ಲಾಭ ಮಾತ್ರ ನೋಡುತ್ತಾರೆ. ಮಲ್ಪೆ ಬಂದರಿನಲ್ಲಿ 30 ಸೆಕ್ಯುರಿಟಿ ಗಾರ್ಡ್ ಇರಬೇಕಿತ್ತು. ಆದರೆ ಇಲ್ಲ. ಸರಿಯಾದ ಸಿಸಿ ಕ್ಯಾಮರ ಕೂಡ ಇಲ್ಲ. ಪ್ರತಿದಿನ ಬೋಟ್ ಬ್ಯಾಟರಿ ಕಳ್ಳತನ, ಮೀನು ಕಳ್ಳತನ ನಡೆಯುತ್ತಲೇ ಇರುತ್ತದೆ. ಇದರ ಬಗ್ಗೆ ಹಲವಾರು ಬಾರಿ ಪೊಲೀಸ್ ಕೇಸುಗಳು ಕೂಡ ದಾಖಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ್ ಸುವರ್ಣ ಹೇಳಿದರು.

- Advertisement -
1004779112

ಅವರು ಇಂದು ಮಲ್ಪೆ ಬಂದರಿನಲ್ಲಿ ನಡೆದ ಮಲ್ಪೆ ಬಂದರಿನ ಮೀನುಗಾರರ ಬಗ್ಗೆ ಆದ ಅಪಪ್ರಚಾರದ ವಿರುದ್ಧ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಮೊನ್ನೆ ನಡೆದ ಘಟನೆಯನ್ನು ಸಂಘವಾಗಲಿ, ಮೀನುಗಾರರಾಗಲಿ ಯಾರೂ ಕೂಡ ಸಮರ್ಥನೆ ಮಾಡುವುದಿಲ್ಲ. ಆ ಘಟನೆಯಲ್ಲಿ ಬೋಟಿನ ಮಾಲೀಕನ ಯಾವುದೇ ಪಾತ್ರವಿಲ್ಲ, ಆದರೂ ಇದರಲ್ಲಿ ಸಿಕ್ಕಿಸಿದ್ದಾರೆ.

1004779123

ಮೊದಲನೇ ದಿನ ರಾಜಿಪಂಚಾಯ್ತಿ ಮೂಲಕ ಮಲ್ಪೆ ಪೊಲೀಸ್ ಠಾಣೆಯಲ್ಲಿ ಇತ್ಯರ್ಥ ಆಗಿತ್ತು. ಆದರೆ ಮಾರನೇ ದಿನ ಯಾವುದೋ ಕಾಣದ ಕೈಗಳು ವೀಡಿಯೋವನ್ನು ವೈರಲ್ ಮಾಡಿ ಹರಿಯ ಬಿಟ್ಟರು. ಕೇವಲ ವೀಡಿಯೋ ನೋಡಿ ಕಾನೂನು ಕ್ರಮ ಮಾಡುವುದಾ? ಸಣ್ಣ ಪುಟ್ಟ ಕಾನೂನು ಕ್ರಮ ಆದರೆ ಓಕೆ, ಆದರೆ ಇದು ದೊಡ್ಡ ಮಟ್ಟದ ಕ್ರಮ ಸರಿಯಲ್ಲ. ವಿಡಿಯೋದಲ್ಲಿ ಒಂದು ಮುಖ ಮಾತ್ರ ನೋಡಬಹುದು. ಆದರೆ ನಿಜವಾಗಿ ಮಲ್ಪೆ ಬಂದರಿನಲ್ಲಿ ಇರುವ ಸೌಹಾರ್ದತೆ ಬಗ್ಗೆ ಯಾರು ತೋರಿಸುತ್ತಿಲ್ಲ.

ಮೊನ್ನೆ ಆದ ಘಟನೆಯಿಂದ ಮೀನುಗಾರರ ಸಮುದಾಯಕ್ಕೆ ಒಂದು ಕಳಂಕ ತರುವಂತೆ ಬಿಂಬಿಸಿದ್ದಾರೆ. ಇದು ನಮಗೆ ಬಹಳಷ್ಟು ಬೇಸರವಾಗಿದೆ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...