ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಐತಿಹಾಸಿಕವಾಗಿ, ಪಾರಂಪರಿಕವಾಗಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಅದರಲ್ಲೂ ಸಾಮ್ರಾಟ ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾರ್ಯ ಕ್ಷೇತ್ರವಿದು.
ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀರಂಗಪಟ್ಟಣ ಮುಖ್ಯ ರಸ್ತೆಯಲ್ಲಿ ಹುದುಗಿದ್ದ ಮಣ್ಣು ಗುಡ್ಡೆಯಲ್ಲಿ ಎರಡು ನೆಲಮಾಳಿಗೆ ಪತ್ತೆಯಾಗಿದ್ದು. ಸುಸ್ಥಿತಿಯಲ್ಲಿದೆ. ಸರಿ ಸುಮಾರು ಆರು ಅಡಿ ಅಗಲ, 15 ಅಡಿ ಉದ್ದವಿರುವ ಚುಕ್ಕಿ ಗಾರೆ ಬೃಹತ್ ಕಲ್ಲುಗಳಿಂದ ನಿರ್ಮಾಣವಾಗಿದ್ದು, ಈಗಲು ಯಾವುದೇ ಮಳೆ, ಗಾಳಿಗೆ ಜಗ್ಗದೆ ಶಿಥಿಲಗೊಳ್ಳದೆ ಇರುವುದು ವಿಶೇಷ.
ಶ್ರೀರಂಗಪಟ್ಟಣದ ಹೆಜ್ಜೆ ಹೆಜ್ಜೆಯಲ್ಲೂ ,ಮಣ್ಣಿನ ಕಣ ಕಣ ಟಿಪ್ಪುವಿನ ಇತಿಹಾಸ ಸಾರುತ್ತದೆ. ಸಮ ಸಮಾಜದ ಕಲ್ಪನೆಯ ಹರಿಕಾರ, ಬ್ರಿಟೀಷರಿಗೆ ಸಿಂಹ ಸ್ವಪ್ನನಾಗಿ “ಮೈಸೂರು ಹುಲಿ” ಎಂದೇ ಬಿರುದಾಂಕಿತ ಕೂಡ ಆಗಿದ್ದಾರೆ.
ಹಿಂದೂ ಮುಸಲ್ಮಾನ ಒಟ್ಟಿಗೆ ಬೆರೆತು ಬಾಳಿ ಬದುಕುತ್ತಿರುವ ಶ್ರೀರಂಗಪಟ್ಟಣ ನೂರಾರು ಪಾರಂಪರಿಕ ಕಟ್ಟಡಗಳಿಗೆ, ಕುರುಹುಗಳಿಗೆ ಸಾಕ್ಷಿ. ಅಗೆದಂತೆಲ್ಲ ಇತಿಹಾಸ ಮರುಕಳಿಸುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲ ಒಂದಲ್ಲ ಒಂದು ಟಿಪ್ಪುವಿನ ಆಳ್ವಿಕೆಯ ಸಾಮ್ರಾಜ್ಯದ ವಿಶೇಷತೆಗಳು ಗೋಚರವಾಗುತ್ತದೆ.
ಇದೇ ನಿಟ್ಟಿನಲ್ಲಿ ಇತ್ತೀಚೆಗೆ ಎರಡು ನೆಲ ಮಾಳಿಗೆಗಳು ಸುಸ್ಥಿತಿಯಲ್ಲಿ ಕಂಡು ಬಂದಿವೆ. ಸ್ಥಳೀಯರು ಅಂದಾಜಿಸುವ ಪ್ರಕಾರ, ರಾತ್ರಿ ಪಾಳಿಯ, ಗಸ್ತು ಸೈನಿಕರ ವಿಶ್ರಾಂತಿ ಕೊಠಡಿ ಇಲ್ಲವೇ, ಮಳೆಗೆ ಮದ್ದು, ಗುಂಡುಗಳು ನೆನೆಯದಂತೆ ಸಂಗ್ರಹಿಸಿಡುವ ಸಂಗ್ರಹಾಗಾರ ಇದ್ದಿರಬೇಕು ಎನ್ನುತ್ತಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಡಾ ಸುಜಯ್ ಕುಮಾರ್, “ಶ್ರೀರಂಗಪಟ್ಟಣ ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಪಾರಂಪರಿಕವಾಗಿ ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರದು. ಈಗ ಕಂಡು ಬಂದಿರುವ ನೆಲ ಮಾಳಿಗೆ ಸುಮಾರು 45 ವರ್ಷಗಳ ಹಿಂದೆ ನಾನು ಚಿಕ್ಕವನಿದ್ದಾಗ ಅಲ್ಲೆಲ್ಲ ಆಟ ಆಡಿರುವೆ. ಈಗಿನ ಹಾಗೆ ಇರಲಿಲ್ಲ. ಬಹಳ ಕಠಿಣವಾಗಿ ಇತ್ತು. ಆ ಕಡೆ ತೆರಳಲು ಕೂಡ ಆಗುತ್ತಿರಲಿಲ್ಲ. ಸೈನಿಕರು ಇಲ್ಲಿ ನಡೆದಾಡಿರುವಂತಹಾ ದಾರಿ ಇದೆ. ಈ ಗುಡ್ಡೆಗಳ ಮೇಲೆ ರಾತ್ರಿ ಪಾಳಿಯವರು ಗಸ್ತಿಗೆ ಬಳಸಿರಬೇಕು.ಅವರಿಗೆ ಅಗತ್ಯ ಇರುವ ವಸ್ತುಗಳ ಸಂಗ್ರಹಕ್ಕೆ ಇದ್ದಿರಬೇಕು ಅನಿಸುತ್ತದೆ” ಎಂದರು.
ವಕೀಲರಾದ ವೆಂಕಟೇಶ್ ಮಾತನಾಡಿ, “ನಗರಗಳನ್ನ, ಮಹಾ ನಗರಗಳನ್ನ ಯಾರು ಬೇಕಾದರೂ ಹುಟು ಹಾಕಬಹುದು. ಮುಂದಿನ ಪೀಳಿಗೆಗೆ ಇಂತಹ ಅಮೂಲ್ಯವಾದ ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕಾದ ಕರ್ತವ್ಯ ನಮ್ಮದು” ಎಂದರು.
“ಶ್ರೀರಂಗಪಟ್ಟಣದ ಇತಿಹಾಸದ ಮೇಲೆ ಹೆಚ್ಚು ಹೆಚ್ಚು ಸಂಶೋಧನೆ ಆಗಬೇಕಿದೆ. ಈಗ ಕಂಡು ಬಂದಿರುವ ನೆಲ ಮಾಳಿಗೆ ಇರುವ ಜಾಗದಲ್ಲಿ ಒಟ್ಟು ಎಂಟು ಮಣ್ಣು ಗುಡ್ಡೆಗಳಿವೆ. ಅಲ್ಲೆಲ್ಲ ಮತ್ತೇನೋ ಇರುವ ಸಾಧ್ಯತೆ ಇದ್ದು ಈಗ ಮುಳ್ಳು, ಗಿಡಗಳಿಂದ ಆವೃತವಾಗಿದೆ. ಇದನ್ನೆಲ್ಲ ಸ್ವಚ್ಛ ಮಾಡಿ, ಇದರ ಬಗ್ಗೆ ಹೆಚ್ಚು ತಿಳಿಯುವ ಕೆಲಸ ಮಾಡಬೇಕು. ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುವ ಕೆಲಸವನ್ನು ಜಿಲ್ಲಾಡಳಿತ ,ಸರ್ಕಾರ,ಕೇಂದ್ರ ಸರ್ಕಾರ, ಪುರಾತತ್ವ ಇಲಾಖೆ ಮಾಡಬೇಕಿದೆ” ಎಂದರು.
ಗ್ರಾಮ ಪಂಚಾಯತ್ ಸದಸ್ಯ ಜಯಶಂಕರ್ ಮಾತನಾಡಿ, “ಸಂಶೋಧಕ ಡಾ ಹರ್ಷವರ್ಧನ್ ಅವರ ಮಾರ್ಗದರ್ಶನದಲ್ಲಿ ಈ ನೆಲಮಾಳಿಗೆಗಳ ಬಗ್ಗೆ ಡಾ ಸುಜಯ್ ಕುಮಾರ್ ಅವರನ್ನು ಕೇಳಿದ್ದರಿಂದ ಅವರು ಮಾಹಿತಿ ನೀಡಿದರು. ಕೂಡಲೆ ಆ ಸ್ಥಳಕ್ಕೆ ಭೇಟಿ ಕೊಟ್ಟಾಗ, ಒಂದು ನೆಲ ಮಾಳಿಗೆ ಚುಕ್ಕಿ ಗಾರೆಯಿಂದಲೂ, ಇನ್ನೊಂದು ಕಲ್ಲುಗಳಿಂದ ನಿರ್ಮಿತವಾಗಿದೆ. ಈಗಲೂ ಯಾವುದೇ ಹಾನಿಗೆ ಒಳಗಾಗದೆ ಗಿಡಗಂಟೆಗಳು ಬೆಳೆದುಕೊಂಡಿವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | RSS ನಿಷೇಧ ತೆರವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆಯೇ?
“ಹಂದಿಗಳು ವಾಸ ಮಾಡಲು ಜಾಗ ಮಾಡಿಕೊಂಡಿವೆ. ಇದನ್ನೆಲ್ಲ ಸ್ವಲ್ಪ ಸ್ವಚ್ಛ ಮಾಡಿ,
ನಡೆದಾಡುವಷ್ಟು ದಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾತ್ ವೇ ನಿರ್ಮಾಣ ಮಾಡಿ ನೆಲ ಮಾಳಿಗೆ ಸುತ್ತಮುತ್ತ ಸಂಪೂರ್ಣವಾಗಿ ಗಿಡಗಂಟಿಗಳನ್ನು ತೆಗೆದು ಜನರು ಬರುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುವುದು. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಿದೆ. ಸೈನಿಕರು ಓಡಾಟ ಮಾಡಿದ ದಾರಿಯ ಕುರುಹು ಕೂಡ ಪತ್ತೆಯಾಗಿದೆ. ಇದು ಶ್ರೀರಂಗಪಟ್ಟಣದ ಟಿಪ್ಪು ಆಳ್ವಿಕೆಯ ಗತ ವೈಭವ. ಇದನ್ನೆಲ್ಲ ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ” ಎಂದರು.

Congratulations for your valuable work 😊
ಅದು ಟಿಪ್ಪು ಸುಲ್ತಾನ್ ರ ಇತಿಹಾಸ ಹೇಳುವುದು ಅಲ್ಲಾ ಮೈಸೂರ್ ಮಹಾರಾಜರ ಒಂದು ಇತಿಹಾಸ ಸ್ವಾಮಿ. ಅವರ ಆಳ್ವಿಕೆಯಲ್ಲಿ ಮಾಡಿದ ಅಭಿರುದ್ದಿ ಕೆಲಸಗಳು ಇಂದಿಗೂ ನಮಗೆ ಸ್ಫೂರ್ತಿ. ದಯವಿಟ್ಟು ಇತಿಹಾಸ ತಿರುಚಿ ಹೇಳಬೇಡಿ.
Itihaas sariyagi tilidukolli. Vyamohadinda maathanaduvudannu bidi.
Get your mindset revaluated. Don’t add communal angle to history.
ನಮ್ಮ ಶಾಲೆಯಲ್ಲಿ ನಮಗೆ ನಿಜವಾದ ಇತಿಹಾಸ ಕಳಿಸದೇ ಶಾಲೆಯ ಪಠ್ಯ ಪುಸ್ತಕ ದಲ್ಲಿ ಮೊಗಲರೆ ನಿಜವಾದ ವೀರರು ಎಂದು ಬಿಂಬಿಸಿದ ಪರಿಣಾಮ ಇದು… ಎಲ್ಲರೂ ಸತ್ಯ ವಾದ ಇತಿಹಾಸ ವನ್ನು ಓದಲೇ ಬೇಕು ಆವಾಗಲೇ ಯಾರು ನಿಜವಾದ ಇತಿಹಾಸಕರಾರು ಎಂದು ತಿಳಿಯುತ್ತೆ…
ಟಿಪ್ಪು ಸುಲ್ತಾನ್ ನಮ್ಮ ಹೆಮ್ಮೆ ಕೆಲವು ಹೊಟ್ಟೆ ಉರಿ ಜನ ಮೈಸೂರು ರಾಜರ ಕಾಲದ್ದು ಎಂದು ಗಲಾಟೆ ಎಬ್ಬಿಸುವ ಸಾಧ್ಯತೆ ಇರುತ್ತದೆ ಇದು ಅಲ್ಲಿ ಇರುವ ಶಾಸನ ಓದಿ ಯಾವ ಕಾಲದ್ದು ಎಂದು ಪರಿಶೀಲನೆ ಮಾಡಿ ಸರಿಯಾದ ಮಾಹಿತಿ ಜನಗಳಿಗೆ ತಿಳಿಸಿ ಹೇಳಬೇಕು ಸರ್ಕಾರ ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು
ಭಾರತಕ್ಕೆ ಬ್ರಿಟಿಷ್ ಆಡಳಿತ ನೇರ ಪ್ರವೇಶಿಸಿಲ್ಲ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಎಂಬ ಕಾರ್ಪೊರೇಟ್ ಕಂಪನಿ ರಾಜ ಪ್ರಭತ್ವದ ಸಂಸ್ಥಾನಗಳನ್ನ ತನ್ನ ಅಧೀನಕ್ಕೆ ಒಳ ಪಡಿಸಿಕೊಳ್ಳುದರ ವಿರುದ್ಧ ಸಂಸ್ಥಾನದ ರಾಜರು ಆ ಕಂಪನಿಯ ವಿರುದ್ಧ ಹೋರಾಟ ನಡೆಸಿ ಸ್ವತಂತ್ರ ಸಂಸ್ಥಾನ ನಡೆಸಲು ಅವಣಿಸುತ್ತಿದ್ದರು.ಮೈಸೂರು ರಾಜ ಚಿಕ್ಕ ವಯಸ್ಸು ಯುದ್ಧ ಅನುಭವವಿಲ್ಲದ ಕಾರಣ ಟಿಪ್ಪು ಅದರ ಜವಾಬ್ದಾರಿ ಹೊತ್ತು ಹೋರಾಟ ನಡೆಸಿದ ಹಾಗೆ ಕಿತ್ತೂರು ಸಂಗೊಳ್ಳಿ ರಾಯಣ್ಣ ರಾಜನೇ ಮುಖ್ಯಸ್ಥನಾಗಿ ಕಂಪನಿ ವಿರುದ್ಧ ಹೋರಾಟ ಮಾಡಲಿಲ್ಲವೇ, ಮಾತೃ ಭೂಮಿಗಾಗಿ ಇವೆಲ್ಲ ಹೋರಾಟ. ಜಾತಿ, ಧರ್ಮಕ್ಕಾಗಿ ಅಲ್ಲ, ಬ್ರಿಟಿಷ್ ವಿರುದ್ಧ ಒಬ್ಬ ಭಿಕ್ಷುಕ ಹೋರಾಟ ನಡೆಸಿದರು ಅದು ಸ್ವಾತಂತ್ರ ಹೋರಾಟವೇ ಅಲ್ಲವೇ.