​ಮಳವಳ್ಳಿ | ರಾಷ್ಟ್ರಧ್ವಜ ನಿರ್ವಹಣೆಯಲ್ಲಿ ನಿರ್ಲಕ್ಷ್ಯ; ಸಾರ್ವಜನಿಕರ ಆಕ್ಷೇಪ

Date:

​ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮ ಪಂಚಾಯತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜದ ಮೇಲೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಕ್ರಾಂತಿ ಹಬ್ಬದಂದು (ಜ.15) ರಾತ್ರಿ 7 ಗಂಟೆಯಾದರೂ ಧ್ವಜಸ್ತಂಭದ ಬಳಿ ಕತ್ತಲೆ ಇದ್ದರೂ ಧ್ವಜವನ್ನು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
​
ಭಾರತದ ಧ್ವಜ ಸಂಹಿತೆಗೆ ತಂದ 2022ರ ಜುಲೈ 20ರ ತಿದ್ದುಪಡಿ ಪ್ರಕಾರ, ಸಾರ್ವಜನಿಕರು ಅಥವಾ ಸರ್ಕಾರಿ ಕಚೇರಿಗಳು ಹಗಲು ಮತ್ತು ರಾತ್ರಿ (24 ಗಂಟೆ) ಧ್ವಜವನ್ನು ಹಾರಿಸಲು ಅವಕಾಶವಿದೆ. ಆದರೆ, ರಾತ್ರಿಯಿಡೀ ಧ್ವಜ ಹಾರಿಸುವಾಗ ಧ್ವಜವು ಸ್ಪಷ್ಟವಾಗಿ ಕಾಣುವಂತೆ ಅದರ ಮೇಲೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಬೇಕು ಎಂಬುದು ಕಡ್ಡಾಯ ನಿಯಮವಾಗಿದೆ. ಬೆಂಡರವಾಡಿ ಗ್ರಾಮ ಪಂಚಾಯತಿ ಕಚೇರಿಯ ಮೇಲೆ ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ರಾತ್ರಿ 7 ಗಂಟೆಯಾದರೂ ಇಳಿಸಿರಲಿಲ್ಲ. ಹೊಸ ನಿಯಮದಂತೆ 24 ಗಂಟೆ ಹಾರಿಸಲು ಅವಕಾಶವಿದ್ದರೂ, ಅಲ್ಲಿ ಧ್ವಜದ ಮೇಲೆ ಯಾವುದೇ ಬೆಳಕಿನ ವ್ಯವಸ್ಥೆ ಇರಲಿಲ್ಲ. ಧ್ವಜವು ಕತ್ತಲೆಯಲ್ಲಿರುವುದು ಧ್ವಜ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

​ಈ ದೃಶ್ಯವನ್ನು ವೀಡಿಯೊ ಮಾಡಿರುವ ವ್ಯಕ್ತಿಯೊಬ್ಬರು, “ರಾತ್ರಿಯಾದರೂ ಬಾವುಟ ಇಳಿಸಿಲ್ಲ, ಕನಿಷ್ಠ ಬೆಳಕಿನ ವ್ಯವಸ್ಥೆಯನ್ನೂ ಮಾಡಿಲ್ಲ. ಇದೊಂದು ಅನಾಥಾಲಯದಂತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ” ಎಂದು ಕಿಡಿಕಾರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಚಾಯತಿ ಸಿಬ್ಬಂದಿ ಧ್ವಜವನ್ನು ಇಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಇದನ್ನೂ ಓದಿ: ಮಂಡ್ಯ | ಸೌಜನ್ಯ ಕೊಲೆ ಪ್ರಕರಣ; ಜಾಗೃತ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

​ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜವನ್ನು ಕತ್ತಲೆಯಲ್ಲಿ ಬಿಡುವುದು ಅಪಮಾನಕ್ಕೆ ಸಮಾನ. ​ಧ್ವಜವು ಹರಿದಿರಬಾರದು ಅಥವಾ ಬಣ್ಣ ಮಾಸಿರಬಾರದು.​ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಅಧಿಕಾರಿಯ ಕರ್ತವ್ಯವಾಗಿದೆ. ​ನಿಯಮಗಳ ಅರಿವಿದ್ದರೂ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ರಾಷ್ಟ್ರಧ್ವಜವನ್ನು ಕತ್ತಲೆಯಲ್ಲಿ ಬಿಟ್ಟ ಬೆಂಡರವಾಡಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಅಂಬೇಡ್ಕರ್ ಅವಹೇಳನ ಆರೋಪ: ವೇದಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಅವಹೇಳನಕಾರಿ ಹೇಳಿಕೆ...

ತಮಿಳು ಕಾಲೊನಿ ನಿವಾಸಿಗಳನ್ನು ‘ಭಯೋತ್ಪಾದಕರು’ ಎಂದಿರುವ ಆರೋಪ: ರವೀಂದ್ರ ವಿರುದ್ಧ FIR ದಾಖಲಿಸಲು ಆಗ್ರಹ

ಮಂಡ್ಯ ನಗರದ ತಮಿಳು ಕಾಲೊನಿ ನಿವಾಸಿಗಳನ್ನು ‘ತಮಿಳುನಾಡಿನಿಂದ ಬಂದವರು’, ‘ಭಯೋತ್ಪಾದಕರು’ ಎಂದು...

ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?

ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ...

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ...