ಮಂಗಳೂರು | ಬಹರೈನ್‌ನಲ್ಲಿ ಏಷ್ಯನ್ ಯೂತ್ ಗೇಮ್ಸ್: ಹಿರಾ ಕಾಲೇಜಿನ ವಿದ್ಯಾರ್ಥಿನಿ ಆಯಿಶಾ ಹೈಫಾ ಆಯ್ಕೆ

Date:

ಬಹರೈನ್‌ನಲ್ಲಿ ನಡೆಯಲಿರುವ 3ನೇ ಏಷ್ಯನ್ ಯೂತ್ ಗೇಮ್ಸ್‌ನಲ್ಲಿ ಪೆಂಕಾಕ್ ಸಿಲಾತ್ ಕ್ರೀಡೆಯಲ್ಲಿನ ಆಯ್ಕೆಗಾಗಿ ನಡೆದ ಟ್ರಯಲ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ವಿದ್ಯಾರ್ಥಿನಿ ಆಯಿಶಾ ಹೈಫಾ ಆಯ್ಕೆಯಾಗಿದ್ದಾರೆ.

- Advertisement -

ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಆಯಿಶಾ ಹೈಫಾ ಏಷ್ಯನ್ ಯೂತ್ ಗೇಮ್ಸ್‌ಗೆ ಆಯ್ಕೆಯಾಗಿರುವ ಪ್ರತಿಭಾನ್ವಿತೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸೆ.30ರಂದು ಜಮ್ಮು- ಕಾಶ್ಮೀರದ ಶ್ರೀನಗರದ ಎಸ್.ಕೆ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಆಯ್ಕೆ ಟ್ರಯಲ್‌ನಲ್ಲಿ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಬಹರೈನ್‌ನಲ್ಲಿ ನಡೆಯಲಿರುವ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ.

1002554582

ಮಂಜನಾಡಿ ಸಮೀಪದ ಕಿನ್ಯ ಗ್ರಾಮದ ಮೊಯ್ದಿನ್ ಹನೀಫ್ ಹಾಗೂ ಫಾತಿಮಾ ದಂಪತಿಯ ಪುತ್ರಿಯಾಗಿರುವ ಆಯಿಷಾ ಹೈಫಾ, ಈ ಹಿಂದೆ ಪೆಂಕಾಕ್ ಸಿಲಾತ್ ಯೂತ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು.

1002554694

ಇವರಿಗೆ ಟೀಂ ಎಂ. ಟೈಗರ್ಸ್‌ನ ಮಾಸ್ಟರ್ ಆಶಿಫ್, ಮಾಸ್ಟರ್ ಅಯಾಝ್ ಬರುವಾ ತರಬೇತಿ ನೀಡುತ್ತಾ ಬಂದಿದ್ದಾರೆ.

ಪೆಂಕಾಕ್ ಸಿಲಾತ್ ಕ್ರೀಡೆ ಅಂದರೆ ಏನು?

ಪೆಂಕಾಕ್ ಸಿಲಾತ್ (Pencak Silat) ಎಂದರೆ ಇಂಡೋನೇಷಿಯಾದ ಮೂಲದ ಕರಾಟೆ ಶೈಲಿಗಳ ಸಮೂಹವಾಗಿದೆ. ಇದು ದಕ್ಷಿಣ ಪೂರ್ವ ಏಷ್ಯಾದ ಮಲಯ್ ಆರ್ಚಿಪೆಲಾಗೋದಿಂದ ಬಂದಿದೆ. ಈ ಕ್ರೀಡೆ ಸಂಪೂರ್ಣ ದೇಹದ ಹೋರಾಟದ ರೂಪವಾಗಿದ್ದು, ಹೊಡೆತಗಳು, ಹಿಡಿತಗಳು, ಎಸೆತಗಳು ಮತ್ತು ಆಯುಧಗಳನ್ನು ಕೂಡ ಬಳಸಲಾಗುತ್ತದೆ. ಪ್ರತಿ ಭಾಗವನ್ನೂ ದಾಳಿ ಮಾಡಲು ಬಳಸುತ್ತದೆ ಮತ್ತು ದೇಹದ ಎಲ್ಲಾ ಭಾಗಗಳನ್ನು ಉಪಯೋಗಿಸಲಾಗುತ್ತದೆ.

ಇದು ಕೇವಲ ದೈಹಿಕ ರಕ್ಷಣೆಗಾಗಿಯೇ ಮಾತ್ರವಲ್ಲದೆ, ಕಲೆ, ಸ್ವ-ರಕ್ಷಣೆಯಾಗಿಯೂ ಬಳಸಬಹುದು‌.

ಯುನೆಸ್ಕೋ ಪೆಂಕಾಕ್ ಸಿಲಾತ್ ಕ್ರೀಡೆಯನ್ನು 2019ರಲ್ಲಿ ‘ಮಾನವತೆಯ ಅಗೋಚರ ಸಾಂಸ್ಕೃತಿಕ ಪರಂಪರೆ’ಯ ಪಟ್ಟಿಗೆ ಸೇರಿಸಿದೆ. ಕ್ರೀಡೆಯಾಗಿ, ಇದು SEA ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆಯೋಜಿಸಲಾಗುತ್ತಿದೆ. ಇದು ಇಂಡೋನೇಷಿಯಾ, ಮಲೇಷಿಯಾ, ಬ್ರುನೈ, ಸಿಂಗಾಪುರ್ ಮತ್ತು ಇತರ ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಸಾಮಾನ್ಯವಾಗಿದೆ. ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ‌. ಈ ಕ್ರೀಡೆಯನ್ನು ಇಂಡೋನೇಶಿಯಾದ ಶಾಲೆಗಳಲ್ಲಿ ಸ್ವ-ರಕ್ಷಣೆ ಕಾರ್ಯಕ್ರಮವಾಗಿ ತರಬೇತಿ ನೀಡಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...