ನ್ಯಾಯಾಲಯಕ್ಕೆ ಹಾಜರಾಗದೆ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ದ.ಕ. | ರಸ್ತೆ ಹೊಂಡ ಗುಂಡಿಯಿಂದ ಅನಾಹುತವಾದರೆ ಇಂಜಿನಿಯರ್‌ಗಳ ಮೇಲೆ ಕೇಸ್: ಖಾದರ್
ಬೆಂಗಳೂರಿನ ಶಿವಾಜಿನಗರದ ಇಮ್ರಾನ್ ಖಾನ್ ಬಂಧಿತ ಆರೋಪಿ. ಈತನು ಉಪ್ಪಿನಂಗಡಿ ಪೊಲೀಸ್ ಠಾಣಾಯಲ್ಲಿ ದಾಖಲಾದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈತನ ಬಂಧನಕ್ಕೆ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.