ಮಂಗಳೂರು ನಗರದ ಹೊರವಲಯದ ಕುಡುಪು ಬಳಿ ಏ.27ರಂದು ನಡೆದ ಕೇರಳದ ವಯನಾಡಿನ ಮುಹಮ್ಮದ್ ಆಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರವೀಂದ್ರ ನಾಯ್ಕಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಈಗಾಗಲೇ ಹತ್ಯೆಗೆ ಸಂಬಂಧಿಸಿದಂತೆ ಕುಡುಪು ಮತ್ತು ಸುತ್ತಮುತ್ತಲಿನ ಪರಿಸರದ ಸಚಿನ್ ಟಿ., ದೇವದಾಸ್ ಅಂಚನ್, ಮಂಜುನಾಥ್, ನಟೇಶ್ ಕುಮಾರ್, ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ವಿವಿಯನ್ ಆಲ್ವಾರಿಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್, ರಾಹುಲ್, ಪ್ರದೀಪ್ ಕುಮಾರ್, ಮನೀಷ್ ಶೆಟ್ಟಿ, ಸಾಯಿದೀಪ್, ಸಂದೀಪ್ ಬಸವರಾಜ್, ದೀಕ್ಷಿತ್ ಯಾನೆ ಮುನ್ನ, ಅನಿಲ್, ಯತಿರಾಜ್ ಯಾನೆ ಯತಿನ್, ಆದರ್ಶ್ ಪಂಡಿತ್, ಸಚಿನ್, ಕೆ. ಸುಶಾಂತ್, ಅನಿಲ್ ಕುಮಾರ್ ಸಹಿತ 21 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ 6 ಮಂದಿಗೆ ಜಾಮೀನು ಲಭಿಸಿದೆ. 15 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.