ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ರಾ.ಹೆದ್ದಾರಿ 66ರ ಎಕ್ಕೂರಿನಲ್ಲಿ ನಡೆದಿದೆ. ಲಾರಿ ಪಲ್ಟಿಯಾದ್ದರಿಂದ ಹೆದ್ದಾರಿಯಲ್ಲಿ ಮರದ ದಿಮ್ಮಿಗಳು ಬಿದ್ದಿದ್ದ ಹಿನ್ನೆಲೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: ‘ಧರ್ಮಸ್ಥಳದಲ್ಲಿ ನೂರು ಕಳೇಬರ ಸಿಗೋದು ಪಕ್ಕಾ’: ವಿಠ್ಠಲಗೌಡ ಬಿಚ್ಚಿಟ್ಟ ಸ್ಫೋಟಕ ಸತ್ಯಗಳೇನು?
ಈ ಘಟನೆಯಿಂದ ನಗರದಿಂದ ಉಳ್ಳಾಲ ಕಡೆಗೆ ತೆರಳುವ ವಾಹನಗಳು ಕಿಲೋ ಮೀಟರ್‌ಗಟ್ಟಲೇ ನಿಂತಿದ್ದವು. ಇತ್ತ ಎಕ್ಕೂರಿನಿಂದ ಪಂಪ್‌ವೆಲ್‌ವರೆಗೂ ವಾಹನಗಳ ಸಾಲು ಮುಂದುವರಿದಿತ್ತು. ಈ ಟ್ರಾಫಿಕ್‌ನಲ್ಲಿ ಎರಡು ಆಂಬುಲೆನ್ಸ್ ಗಳೂ ಸಿಲುಕಿಕೊಂಡವು. ಬಳಿ ವಾಹನ ಸವಾರರು ಪಕ್ಕಕ್ಕೆ ಸರಿದು ಆಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಟ್ಟರು.