ಅನುಮತಿ ಪಡೆದು ಅಳವಡಿಸಿದ್ದ ಬ್ಯಾನರ್ ಅನ್ನು ಹರಿದು ಹಾಕಿದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಫರಂಗಿಪೇಟೆಯ ಮದ್ಯಪಾನ ವ್ಯಸನಿಯೊಬ್ಬನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ವ್ಯಸನಿಯಾದ ಹೈದರ್ ಎಂಬಾತ ಬ್ಯಾನರ್ ಹರಿದ ಆರೋಪಿ ಎಂದು ಗುರುತಿಸಲಾಗಿದೆ. ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ ಅವರು, ಸೇವಾಂಜಲಿ ಭವನದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಶುಭ ಕೋರುವ ಬ್ಯಾನರ್ ಅನ್ನು ಅಗತ್ಯವಿರುವ ಇಲಾಖೆಯಿಂದ ಪೂರ್ವಾನುಮತಿ ಪಡೆದು ಕುಂಪನಮಜಲು ಕ್ರಾಸ್ ಬಳಿ ಅಳವಡಿಸಿದ್ದರು. ಬುಧವಾರ ತಡರಾತ್ರಿ ಈ ಬ್ಯಾನರ್ ಅನ್ನು ಹರಿದು ಹಾಕಿ ರೂ.3,500 ನಷ್ಟ ಮಾಡಿದ್ದಲ್ಲದೆ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮಂಗಳೂರು | 9 ವರ್ಷಗಳ ಬಳಿಕ ಕಲಶ ಮರುಸ್ಥಾಪನೆ
ಸಾರ್ವಜನಿಕರು ಪ್ರಚೋದನೆಗೊಂಡು ಗಲಭೆ ಏಳಬಹುದೆಂದು ತಿಳಿದಿದ್ದರೂ, ಉದ್ದೇಶ ಪೂರ್ವಕವಾಗಿ ಕೃತ್ಯ ನಡೆಸಿ ಸಾರ್ವಜನಿಕ ವಲಯದಲ್ಲಿ ಅಶಾಂತಿಯುಂಟು ಮಾಡಿದ ಕಾರಣಕ್ಕೆ ಹೈದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
