ಉಪ್ಪಿನಂಗಡಿ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಕೀಟಲೆ ಮಾಡುತ್ತಿದ್ದ ಅಪರಿಚಿತ ಯುವಕನನ್ನು ಸಾರ್ವಜನಿಕರು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ.
ಇದನ್ನೂ ಓದಿ: ಮಂಗಳೂರು | ಅಪ್ರಾಪ್ತ ಬಾಲಕ ಸ್ಕೂಟರ್ ಚಾಲನೆ; ಹೆತ್ತವರಿಗೆ ದಂಡ ವಿಧಿಸಿದ ನ್ಯಾಯಾಲಯ
ಮಹಿಳೆಯರೂ ಸೇರಿದಂತೆ ಹಲವಾರು ಜನರಿಗೆ ವ್ಯಕ್ತಿಯೊಬ್ಬ ಕೀಟಲೆ ನೀಡುತ್ತಿರುವ ಹಿನ್ನೆಲೆ ಆತನನ್ನು ಸ್ಥಳೀಯರು ಹಿಡಿಯಲು ಯತ್ನಿಸಿದ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಬಳಿಕ ಸಾರ್ವಜನಿಕರು ಆತನ ಕೈ ಕಾಲು ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.