300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿರುವ ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ. ‘ವಿವಾದವನ್ನು ಪರಿಹರಿಸಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದೆ.
ಮೈಸೂರಿನಲ್ಲಿರುವ ಇನ್ಫೋಸಿನ್ ಕ್ಯಾಪಂಸ್‌ನಲ್ಲಿ ಹಲವು ತಿಂಗಳುಗಳ ಕಾಲ ಮೂಲಭೂತ ತರಬೇತಿ ಪಡೆದ 300ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ಸಾಮಾಜಿಕವಾಗಿ ವಜಾಗೊಳಿಸಲಾಗಿದೆ. ಈ ಬಗ್ಗೆ ಇನ್ಫೋಸಿಸ್ ಕೂಡ ಒಪ್ಪಿಕೊಂಡಿದೆ. ಇನ್ಫೋಸಿಸ್‌ನ ಧೋರಣೆಯ ವಿರುದ್ಧ ಐಟಿ ವಲಯದ ಸಂಘಟನೆಯಾದ ‘ನಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಉದ್ಯೋಗಿಗಳ ಸೆನೆಟ್’ (NITES) ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದೆ. ಮಾತ್ರವಲ್ಲದೆ, ವಜಾಗೊಳಿಸಲಾಗಿರುವ ಉದ್ಯೋಗಿಗಳ ಸಂಖ್ಯೆ 300 ಅಲ್ಲ, 700 ಎಂದು ವಾದಿಸಿದೆ.
ದೂರಿನಲ್ಲಿ, “ಇತ್ತೀಚೆಗಷ್ಟೇ ಇನ್ಫೋಸಿಸ್‌ಗೆ ಸೇರ್ಪಡೆಗೊಂಡ ಕ್ಯಾಂಪಸ್ ನೇಮಕಾತಿದಾರರನ್ನು ಬಲವಂತವಾಗಿ ವಜಾಗೊಳಿಸಲಾಗಿದೆ. ಈ ಎಲ್ಲ ಉದ್ಯೋಗಿಗಳು ಸುಮಾರು 2 ವರ್ಷಗಳ ಹಿಂದೆಯೇ ಆಫರ್ ಲೆಟರ್‌ಗಳನ್ನು ಪಡೆದಿದ್ದರು. ಅದಾಗ್ಯೂ, ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಲ್ಲಿ ಸಂಸ್ಥೆಯು ಎರಡು ವರ್ಷ ವಿಳಂಬ ಮಾಡಿದೆ. ಇದೀಗ, ಎಲ್ಲರನ್ನೂ ಕೆಲಸದಿಂದ ವಜಾ ಮಾಡಿದೆ” ಎಂದು ಆರೋಪಿಸಿದೆ.
“ಇನ್ಫೋಸಿಸ್ ವಿರುದ್ಧ ತನಿಖೆ ನಡೆಸಬೇಕು. ಈ ರೀತಿಯ ವಜಾಗೊಳಿಸುವಿಕೆಯನ್ನು ತಡೆಯಲು ಇನ್ಫೋಸಿಸ್ ವಿರುದ್ಧ ತಡೆಯಾಜ್ಞೆ ಹೊರಡಿಸಬೇಕು. ಜೊತೆಗೆ ವಜಾಗೊಳಿಸಲ್ಪಟ್ಟ ಎಲ್ಲ ಉದ್ಯೋಗಿಗಳಿಗೆ ಮತ್ತೆ ಉದ್ಯೋಗ ನೀಡಬೇಕು. 1947ರ ಕೈಗಾರಿಕಾ ವಿವಾದ ಕಾಯ್ದೆ ಮತ್ತು ಇತರ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗೆ ದಂಡ ವಿಧಿಸಬೇಕು” ಎಂದು ಎನ್‌ಐಟಿಇಎಸ್ ಆಗ್ರಹಿಸಿದೆ.
ಈ ವರದಿ ಓದಿದ್ದೀರಾ?: 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು
ಎನ್‌ಐಟಿಇಎಸ್ ದೂರಿನ ಅನ್ವಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ರಾಜ್ಯಕ್ಕೆ ಸೂಚಿಸಿದೆ. ಕೇಂದ್ರದ ಸೂಚನೆ ಹಿನ್ನಲೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ತಡರಾತ್ರಿ ಕಂಪನಿಗಳ ಬೆಂಗಳೂರು ಮತ್ತು ಮೈಸೂರು ಕ್ಯಾಂಪಸ್‌ಗಳಿಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.
People got fired in early stage of careers in this case, what if if they had fired after your age of 35 or 40+ , Narayan murthy telling in advance to look for another job ,in IT any other software engineer will suffer after 40+ that without any prior notice, they still they could fire , giving the performance is the reason, and any other IT company since 25 years following the same, but no Law that suits IT labour, no one did amend in law, but just govt benefits from income tax of IT engineers
There is no surprise; it is not a strange or isolated incident. Without following the law of the land and the rule of law, most companies terminate the services of their employees, thinking they are heavenly bodies to which no law is applicable. There is no sustainability; the stakeholders’ principle is beyond their imagination. Only when we check the balance sheets of these companies do we find that the rate of return is more than 3000 percent, yet they behave poorly.
Correct, no rules and regulations followed by many corporate companies
Reality is that IT company is behaving like bosses and
according to their will employee’s could dance and act
this culture should go other wise families of their old parents defended on them will be in difficult position, the central govt should look in to the matter and early solution to be find out amicably