ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಏ.29ರಂದು ಬೃಹತ್ ರ‍್ಯಾಲಿ, ಹಕ್ಕೊತ್ತಾಯ ಸಮಾವೇಶ

Date:

Advertisements

ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಎಲ್ಲ ಜನವಿಭಾಗಗಳ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಏಪ್ರಿಲ್ 29ರಂದು ಬೆಳಿಗ್ಗೆ 10.30ಕ್ಕೆ ದೇರಳಕಟ್ಟೆ ಜಂಕ್ಷನ್‌ನಲ್ಲಿ ಹಕ್ಕೊತ್ತಾಯ ಸಮಾವೇಶ ಜರುಗಲಿದೆ ಎಂದು ಸಿಪಿಐ(ಎಂ) ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್ ತಿಳಿಸಿದ್ದಾರೆ.

ಸಮಾವೇಶದ ಕುರಿತು ಪೂರ್ವಭಾವಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಏಪ್ರಿಲ್‌ 29ರ ಬೆಳಿಗ್ಗೆ 10ಕ್ಕೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆ ಜಂಕ್ಷನ್ ಹಾಗೂ ನಾಟೆಕಲ್ ಜಂಕ್ಷನ್‌ನಿಂದ ಎರಡು ಬೃಹತ್ ರ‍್ಯಾಲಿಗಳು ಹೊರಡಲಿವೆ. ಹಕ್ಕೊತ್ತಾಯ ಸಮಾವೇಶವನ್ನು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿಯವರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.

“ಉಳ್ಳಾಲ ತಾಲೂಕು ರಚನೆಯಾಗಿ ಐದು ವರ್ಷ ದಾಟಿದೆ. ದೇಶದ ಯಾವುದೇ ತಾಲೂಕಿನಲ್ಲಿ ಇಲ್ಲದಷ್ಟು ಖಾಸಾಗಿ ಮೆಡಿಕಲ್ ಕಾಲೇಜುಗಳು, ಕಾರ್ಪೊರೇಟು ಆಸ್ಪತ್ರೆಗಳು, ವೃತ್ತಿಪರ ಕಾಲೇಜುಗಳು ಉಳ್ಳಾಲ ಒಂದೇ ತಾಲೂಕಿನಲ್ಲಿವೆ. ಖಾಸಗಿ ಶಿಕ್ಷಣ, ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ತುಂಬಿ ತುಳುಕುತ್ತಿರುವ ಉಳ್ಳಾಲ ತಾಲೂಕು ಅಭಿವೃದ್ಧಿಯ ನಾಗಾಲೋಟದಲ್ಲಿ ಇದ್ದಂತೆ ಭಾಸವಾಗುತ್ತಿದೆ. ಆದರೆ ಈ ಕಣ್ಣುಕೋರೈಸುವ ಅಭಿವೃದ್ದಿಯ ಹಿಂದೆ ಅಗಾಧವಾದ ಸಮಸ್ಯೆಗಳಿವೆ. ಜನಸಾಮಾನ್ಯರ ತೀರದ ಬವಣೆಗಳಿವೆ. ಈ ಗಾಢ ಕತ್ತಲಿನಂತಹ ಸಮಸ್ಯೆಗಳ ಮೇಲೆ ಬೆಳಕು ಹಾಯಿಸುವ ಯತ್ನ ನಡೆಸಿದರೆ ಉಳ್ಳಾಲ ತಾಲೂಕಿನ ಅಭಿವೃದ್ದಿಯ ಟೊಳ್ಳುತನ ಬಯಲಾಗುತ್ತದೆ” ಎಂದರು.

Advertisements

ಸಮೃದ್ಧ ಕೃಷಿ ಭೂಮಿ, ಶ್ರಮಜೀವಿ ರೈತರಿಂದ ತುಂಬಿದ್ದ ಉಳ್ಳಾಲದ ಗ್ರಾಮಗಳು ಈಗ ರಿಯಲ್ ಎಸ್ಟೇಟ್ ದಾಳಿಯಿಂದ ಕಂಗೆಟ್ಟಿವೆ. ವಿವಿಧ ಮಸಲತ್ತುಗಳ ಮೂಲಕ ರೈತರಿಂದ ಅಗ್ಗದ ಬೆಲೆಗೆ ಭೂಮಿ ಕಿತ್ತುಕೊಂಡು ನವ ಭೂಮಾಲೀಕರ ವರ್ಗ ಸೃಷ್ಟಿಸಲಾಗಿದೆ. ಮೆಡಿಕಲ್, ಶಿಕ್ಷಣ ಲಾಬಿಗಳಿಂದಾಗಿ ಭೂಮಿಯ ಬೆಲೆ ಗಗನಕ್ಕೇರಿದೆ. ಈ ಲಾಬಿಗಳದ್ದೇ ಹೊಸ ಸಾಮ್ರಾಜ್ಯ ರಚನೆಯಾಗಿದೆ. ಮನೆ ಬಾಡಿಗೆ ಆಕಾಶಕ್ಕೆ ತಲುಪಿದೆ. ತುಂಡು ಭೂಮಿ ಖರೀದಿಸಿ ಮನೆ ಕಟ್ಟುವುದು, ಮನೆ ಬಾಡಿಗೆ ಪಾವತಿಸುವುದು ಜನಸಾಮಾನ್ಯರ ಪಾಲಿಗೆ ಅಸಾಧ್ಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮರಳು ಮಾಫಿಯಾ, ಕೆಂಪು ಮಣ್ಣು ಮಾಫಿಯಾ ಉಳ್ಳಾಲದ ನೆಲ, ಜಲವನ್ನು ಅಕ್ಷರಶಃ ದೋಚುತ್ತಿದೆ. ಮಾತ್ರವಲ್ಲ ಭೂಮಿಯನ್ನು ಬರಡಾಗಿಸುತ್ತಿದೆ. ಪ್ರಕೃತಿ ಸೌಂದರ್ಯದ ಕಣಜದಂತಿರುವ ನೇತ್ರಾವತಿ ನದಿ ನಡುವಿನ ಕುದ್ರುಗಳು ಮರಳು ಮಾಫಿಯಾದ ದುರಾಸೆಗೆ ಕಳಚಿ ಬೀಳುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಪಾಳುಬಿದ್ದಿವೆ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಪಾಲಾಗಿವೆ. ತಾಲೂಕು ರಚನೆಯಾಗಿ ಐದು ವರ್ಷ ದಾಟಿದರೂ, ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಇರುವ ಸುಸಜ್ಜಿತವಾದ ತಾಲೂಕು ಕಚೇರಿ/ಮಿನಿ ವಿಧಾನ ಸೌಧ ಹೊಂದುವ ಭಾಗ್ಯ ಇನ್ನೂ ಉಳ್ಳಾಲಕ್ಕೆ ಒದಗಿಬಂದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ತಾಲೂಕು ಮಟ್ಟದ ನೂರು ಹಾಸಿಗೆಗಳ ಆಸ್ಪತ್ರೆ, ಸುಸಜ್ಜಿತವಾದ ಮಾರುಕಟ್ಟೆ, ತಾಲೂಕು ನ್ಯಾಯಾಲಯ, ಸಬ್ ರಿಜಿಸ್ಟಾರ್ ಕಚೇರಿ ತಾಲೂಕು ಮಟ್ಟದ ಕ್ರೀಡಾಂಗಣ, ರಂಗ ಮಂದಿರ, ಪುರಭವನ, ಸರ್ಕಾರಿ ಪದವಿ ಕಾಲೇಜು, ಐಟಿಐ, ಪಾಲಿಟೆಕ್ನಿಕ್ ಹೀಗೆ ನಿಯಮದ ಪ್ರಕಾರ ತಾಲೂಕು ಒಂದಕ್ಕೆ ಇರಬೇಕಾದ ಯಾವುದೇ ಇಲಾಖೆ ಕಚೇರಿಗಳು ಇಲ್ಲಿಗೆ ಮಂಜೂರಾಗಿಲ್ಲ. ಮಂಜೂರು ಮಾಡುವ ಯೋಚನೆಯೂ ಸಂಬಂಧಪಟ್ಟವರಿಗೆ ಇಲ್ಲ. ತಾಲೂಕಿನ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ದಿವಾಳಿಯ ಅಂಚಿಗೆ ಬಂದುನಿಂತಿದೆ. ʼಖಾಸಾಗಿ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳು ಹಾಗೂ ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕುದಾದ ಮೂಲಭೂತ ಸೌಲಭ್ಯ ಒದಗಿಸುವುದೇ ತಾಲೂಕಿನ ಅಭಿವೃದ್ಧಿ’ ಎಂಬುದು ಉಳ್ಳಾಲ ತಾಲೂಕಿನ ನೀತಿಯಾಗಿದೆ. ಇಂತಹ ಅಸಮಾನ ಅಭಿವೃದ್ದಿಯ ಬದಲಿಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ದಿ ಹಾಗೂ ಜನಸಾಮಾನ್ಯರ ಬವಣೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತುವುದು ಇಂದಿನ ಅಗತ್ಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹಕ್ಕೊತ್ತಾಯದ ಸಮಾವೇಶ ಸಂದೇಶವನ್ನು ಮನೆಮನೆಗೆ ತಲುಪಿಸಲು ಈಗಾಗಲೇ 150ರಷ್ಟು ತಂಡಗಳು ರಚನೆಯಾಗಿದ್ದು, ಆ ಮೂಲಕ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ಏಪ್ರಿಲ್ 21, 22ರಂದು ಎರಡು ದಿನಗಳ ಕಾಲ ಉಳ್ಳಾಲ ತಾಲೂಕಿನಾದ್ಯಂತ ಸಂಚರಿಸಲಿರುವ ವಾಹನ ಪ್ರಚಾರ ಜಾಥಾವು ಏಪ್ರಿಲ್ 21ರಂದು ಬೆಳಿಗ್ಗೆ 9.30ಕ್ಕೆ ಮುಡಿಪು ಜಂಕ್ಷನ್‌ನಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳರವರಿಂದ ಉದ್ಘಾಟನೆಗೊಳ್ಳಲಿದ್ದು, ಅಂದು ಸಂಜೆ 6ಕ್ಕೆ ಹರೇಕಳ ಕಡವಿನ ಬಳಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿಯವರಿಂದ ಸಮರೋಪಗೊಳ್ಳಲಿದೆ” ಎಂದರು.

“22ರಂದು ಬೆಳಿಗ್ಗೆ 9.30ಕ್ಕೆ ಕುತ್ತಾರ್ ಜಂಕ್ಷನ್‌ನಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಯಾದವ ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿದ್ದು, ಸಂಜೆ 5.30ಕ್ಕೆ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್‌ರವರಿಂದ ಸಮಾರೋಪಗೊಳ್ಳಲಿದೆ. 2 ದಿನಗಳ ಕಾಲ ಸುಮಾರು 25ರಷ್ಟು ಸ್ಥಳಗಳಲ್ಲಿ ಜಾಥಾ ಕಾರ್ಯಕ್ರಮವು ಜರುಗಲಿದ್ದು, ಪಕ್ಷದ ಜಿಲ್ಲಾ ನಾಯಕರಾದ ಬಿ ಎಂ ಭಟ್, ಜಯಂತಿ ಶೆಟ್ಟಿ, ಬಿ ಕೆ ಇಮ್ತಿಯಾಝ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಜೆ ಬಾಲಕೃಷ್ಣ ಶೆಟ್ಟಿ, ಈಶ್ವರೀ ಬೆಳ್ತಂಗಡಿಯವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ಬೇಂದ್ರೆ ಅವರ ಆಳವಾದ ಸಾಹಿತ್ಯವನ್ನು ಕೀರ್ತಿನಾಥ ಕುರ್ತಕೋಟಿ ಅವರು ಅಧ್ಯಯನ ಮಾಡಿದ್ದರು: ದತ್ತಪ್ರಸನ್ನ ಪಾಟೀಲ

“ಏಪ್ರಿಲ್ 29ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ವಿವಿಧ ವಿಭಾಗದ ಜನತೆ ಅವರ ನಿರ್ದಿಷ್ಟ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾಗವಹಿಸಲಿದ್ದಾರೆ. ಬೀಡಿ, ಕಟ್ಟಡ, ಬಿಸಿಯೂಟ, ಆಟೋರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರು, ರೈತರು, ವಿದ್ಯಾರ್ಥಿ ಯುವಜನರು, ಮಹಿಳೆಯರು, ದಲಿತ-ಆದಿವಾಸಿ ಬಂಧುಗಳು, ದ್ವೀಪವಾಸಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇಂತಹ ನ್ಯಾಯಪರ ಹೋರಾಟದಲ್ಲಿ ಉಳ್ಳಾಲ ತಾಲೂಕಿನ ಸಮಸ್ತ ಜನತೆ ಜಾತಿ ಧರ್ಮ, ಪಕ್ಷ ಭೇದ ಮರೆತು ಭಾಗವಹಿಸುವ ಮೂಲಕ ಉಳ್ಳಾಲ ತಾಲೂಕಿನ ಅಭಿವೃದ್ಧಿಗಾಗಿ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಹಿರಿಯ ನಾಯಕರು ಕೃಷ್ಣಪ್ಪ ಸಾಲ್ಯಾನ್, ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ, ದ.ಕ. ಜಿಲ್ಲಾ ಸಮಿತಿ ಸದಸ್ಯ ಶೇಖರ್ ಕುಂದರ್, ಮುಡಿಪು ವಲಯ ಸಮಿತಿ ಸದಸ್ಯ ರಿಝ್ವಾನ್ ಹರೇಕಳ ಇದ್ದರು.

    eedina
    ಈ ದಿನ ಡೆಸ್ಕ್‌
    Website |  + posts

    ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

    ಪೋಸ್ಟ್ ಹಂಚಿಕೊಳ್ಳಿ:

    LEAVE A REPLY

    Please enter your comment!
    Please enter your name here

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

    ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

    ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

    ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

    ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

    ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

    ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

    "ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

    Download Eedina App Android / iOS

    X