ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ (ಜೆಎಸ್‌ಎಸ್ ಎಹೆಚ್‌ಇಆರ್) ಮತ್ತು ಎಲ್&ಟಿ ಟೆಕ್ನಾಲಜಿ ಸರ್ವಿಸಸ್ (ಎಲ್ವಿಟಿಎಸ್) ಮೆಡೈಕ್ ಉದ್ಯಮಕ್ಕಾಗಿ ಫಿಕ್ಚರ್ ರೆಡಿ ನುರಿತ ಕಾರ್ಯಪಡೆಯನ್ನು ರಚಿಸುವ ಉದ್ದೇಶದಿಂದ ತಿಳುವಳಿಕೆ ಒಪ್ಪಂದ (ಎಂಓಯು)ಕ್ಕೆ ಸಹಿ ಹಾಕಿವೆ. ಈ ಸಹಭಾಗಿತ್ವವು ಎಲ್ಐಟಿಟಿಎಸ್ ಮೆಡೈಕ್ ವ್ಯಾಪಾರ ಘಟಕಕ್ಕೆ ನಿರ್ದಿಷ್ಟವಾಗಿ ಹೆಚ್ಚು ನುರಿತ, ಉದ್ಯಮಕ್ಕೆ ಸಿದ್ಧವಾದ ಇಂಡಸ್ಟ್ರಿ ರೆಡಿ ಪ್ರತಿಭಾ ಸಮೂಹವನ್ನು ಅಭಿವೃದ್ಧಿಪಡಿಸಲು ಇನ್ನೊವೇಶನ್ ಜಂಟಿ ಸಂಶೋಧನೆ ಮತ್ತು ತರಬೇತಿಯ ಮೇಲೆ ಕೇಂದ್ರೀಕೃತ ಕಾರ್ಯಕ್ರಮ ನಡೆಸಿದರು.
ಜೆಎಸ್‌ಎಸ್ ಎಹೆಚ್‌ಇಆರ್ ಕುಲಪತಿಗಳಾದ ಡಾ. ಬಿ. ಸುರೇಶ್ ಮಾತನಾಡಿ, “ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ಆರೋಗ್ಯ ರಕ್ಷಣೆ, ಮೆಡೈಕ್, ವೈದ್ಯಕೀಯ, ಎಐ ಸೇರಿದಂತೆ ಸಂಶೋಧನೆ ಮತ್ತು ಶಿಕ್ಷಣದಲ್ಲಿ ತನ್ನ ಸಾಮರ್ಥ್ಯಕ್ಕಾಗಿ ಗುರುತಿಸಲ್ಪಟ್ಟ ಪ್ರಮುಖ ಸಂಸ್ಥೆಯಾಗಿದೆ. ನಾವು ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಜೊತೆ ಸಹಕರಿಸಲು ಉತ್ಸುಕರಾಗಿದ್ದೇವೆ. ನಮ್ಮ ಜಂಟಿ ಉದ್ಯಮ-ಶೈಕ್ಷಣಿಕ ಸಹಯೋಗವು ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕವಾಗಿರುತ್ತದೆ ಮತ್ತು ಉದ್ಯಮಕ್ಕೆ ಸಿದ್ಧವಾದ ವಿದ್ಯಾರ್ಥಿಗಳನ್ನು ಉತ್ಪಾದಿಸುತ್ತದೆ. ಇದು ಸಮಾಜ ಮತ್ತು ಉದ್ಯಮಕ್ಕೆ ಶ್ರೇಷ್ಠತೆ ಮತ್ತು ಸಹ-ನಾವೀನ್ಯತೆಯನ್ನು ಸಕ್ರಿಯಗೊಳಿಸಲು ವೇದಿಕೆಯನ್ನು ಒದಗಿಸುವ ನಮ್ಮ ದೃಷ್ಟಿಕೋನದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ”. ಎಂದರು.
ಈ ಸಹಯೋಗವು ಎರಡೂ ಸಂಸ್ಥೆಗಳ ಪರಿಣತಿ ಮತ್ತು ಸಂಪನ್ಮೂಲಗಳನ್ನು ಒಳಗೊಂಡ ವೇದಿಕೆಯನ್ನು ರಚಿಸುವ ಮೂಲಕ ಶೈಕ್ಷಣಿಕ ವಲಯ ಮತ್ತು ಉದ್ಯಮ ವಲಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಒಪ್ಪಂದದ ಭಾಗವಾಗಿ, ಎಲ್ ಟಿ ಟಿ ಎಸ್, ವರುಣಾದಲ್ಲಿರುವ ಜೆಎಸ್‌ಎಸ್ ಎಹೆಚ್‌ಇಆರ್ ಜಾಗತಿಕ ಕ್ಯಾಂಪಸ್ಸಿನಲ್ಲಿ ಸಂಶೋಧನೆ, ಬೋಧನೆ ಮತ್ತು ಕಲಿಕಾ ಕೇಂದ್ರವನ್ನು ಸ್ಥಾಪಿಸಲಿದೆ. ಈ ಕೇಂದ್ರವು ಎರಡೂ ಸಂಸ್ಥೆಗಳ ಹೂಡಿಕೆಯೊಂದಿಗೆ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಹೊಂದಲಿದ್ದು, ಪ್ರಾಯೋಗಿಕ ತರಬೇತಿ, ಇಂಟರ್ನ್ಶಿಪ್ ಮತ್ತು ಸಂಶೋಧನಾ ಯೋಜನೆಗಳಿಗೆ ಅನುಕೂಲ ಮಾಡಿಕೊಡುತ್ತದೆ.
ಎರಡು ಸಂಸ್ಥೆಗಳು ಮೆಡ್ರೆಕ್ ಕ್ಷೇತ್ರದಲ್ಲಿ, ವಿಶೇಷವಾಗಿ ಎಐ ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದ ಪಠ್ಯಕ್ರಮ ಮತ್ತು ಕೋರ್ಸುಗಳನ್ನು ಸಹ-ಅಭಿವೃದ್ಧಿಪಡಿಸುತ್ತವೆ, ಇವುಗಳನ್ನು ಜೆಎಸ್‌ಎಸ್ ಪಠ್ಯಕ್ರಮದಲ್ಲಿ ಸಂಯೋಜಿಸಲಾಗುತ್ತದೆ. ಪಠ್ಯಕ್ರಮವನ್ನು ಸಂಯೋಜಿಸಲು ಸಹಾಯ ಮಾಡಲು ಎಲ್ಪಿಟಿಎಸ್ ತನ್ನ ಸ್ವಾಮ್ಯದ ಮೆಡೈಕ್ ಜ್ಞಾನದ ಕುರಿತು ಜೆಎಸ್‌ಎಸ್ ಎಹೆಚ್‌ಇಆರ್ ಬೋಧಕವರ್ಗಕ್ಕೆ ತರಬೇತಿಯನ್ನು ನೀಡುತ್ತದೆ.
ಈ ತಿಳುವಳಿಕೆ ಒಪ್ಪಂದವು ಇಂಟರ್ನ್ಶಿಪ್ ಮತ್ತು ನೇಮಕಾತಿ ಕಾರ್ಯಕ್ರಮವನ್ನು ಒಳಗೊಂಡಂತೆ ಪ್ರತಿಭಾ ಅಭಿವೃದ್ಧಿ ಮತ್ತು ನೇಮಕಾತಿಗೆ ಪೂರ್ವಭಾವಿ ವಿಧಾನವನ್ನು ವಿವರಿಸುತ್ತದೆ. ಎಲ್ಪಿಟಿಎಸ್ ವಿದ್ಯಾರ್ಥಿಗಳಿಗೆ ಅವರ 5ನೇ ಮತ್ತು 6ನೇ ಸೆಮಿಸ್ಟರ್ಗಳಲ್ಲಿ ಮುಕ್ತ ಆಯ್ಕೆ ಕೋರ್ಸ್ ಗಳನ್ನು ಪರಿಚಯಿಸುತ್ತದೆ. 6ನೇ ಸೆಮಿಸ್ಟರ್ ಕೊನೆಯಲ್ಲಿ, ಎಲ್ಪಿಟಿಎಸ್ನಲ್ಲಿ ಉದ್ಯೋಗಾವಕಾಶ ಬಯಸುವ ವಿದ್ಯಾರ್ಥಿಗಳು ಮೌಲ್ಯಮಾಪನದಲ್ಲಿ ಭಾಗವಹಿಸುತ್ತಾರೆ. ಎಲ್ಪಿಟಿಎಸ್ಸಿಂದ ಉದ್ಯೋಗದ ಪ್ರಸ್ತಾಪವನ್ನು ಸ್ವೀಕರಿಸುವವರಿಗೆ ಅವರ 7ನೇ ಮತ್ತು 8ನೇ ಸೆಮಿಸ್ಟರ್‌ಗಳ ಸಮಯದಲ್ಲಿ ವಿಶಿಷ್ಟವಾದ “ಎಲ್ಪಿಟಿಎಸ್ ಕಾರ್ಪೊರೇಟ್ ಸಿಟಿಜನ್ಶಿಪ್ ಮಾಡೆಲ್’ಗೆ ಪ್ರವೇಶವಿರುತ್ತದೆ.
ಈ ಮಾದರಿಯು ಭಾರತದಾದ್ಯಂತ ಇರುವ ಎಲ್ಪಿಟಿಎಸ್ ಕ್ಯಾಂಪಸ್ ಸ್ಥಳಗಳ ಆಯ್ದ ಪ್ರಯೋಗಾಲಯಗಳಿಗೆ ಭೇಟಿ ನೀಡಲು ಮತ್ತು ಕೆಲಸ ಮಾಡಲು ಅವರಿಗೆ ಅವಕಾಶ ನೀಡುತ್ತದೆ ಮತ್ತು ಅವರನ್ನು ಎಲ್ಪಿಟಿಎಸ್ ಉದ್ಯೋಗಿಗಳೊಂದಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಈ ಕಾರ್ಯಕ್ರಮದ ಭಾಗವಾಗಿ, 8ನೇ ಸೆಮಿಸ್ಟರ್ನಲ್ಲಿ ಎಲ್ಪಿಟಿಎಸ್ ಕ್ಯಾಂಪಸ್ನಲ್ಲಿ ಮೂರು ತಿಂಗಳ ಇಂಟರ್ನ್ಶಿಪ್ ಅನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವೈಸೂರು | ಸೆ.13 ರಂದು ‘ಪ್ರವಾದಿ ಮುಹಮ್ಮದ್ (ಸ) ನ್ಯಾಯದ ಹರಿಕಾರ’ ಸೀರತ್ ಸಮಾವೇಶ
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಎಹೆಚ್ಇಆರ್ ಕಡೆಯಿಂದ ಕುಲಪತಿ ಡಾ. ಬಿ. ಸುರೇಶ್, ಕುಲಪತಿ ಡಾ. ಎಚ್. ಬಸವನಗೌಡಪ್ಪ, ರಿಜಿಸ್ಟ್ರಾರ್ ಡಾ. ಬಿ. ಮಂಜುನಾಥ್, ಡೀನ್ ಡಾ. ವಿಶಾಲ್ ಕುಮಾರ್ ಗುಪ್ತಾ, ಸಂಶೋಧನಾ ವಿಭಾಗದ ಉಪ ಡೀನ್ ಡಾ. ವಿಕ್ರಮ್ ಪಾಟೀಲ್, ಎಲ್&ಟಿ ಟೆಕ್ನಾಲಜಿ ಸರ್ವಿಸಸ್ ಅನ್ನು ಮೆಡೈಕ್ ಗ್ಲೋಬಲ್ ಬಿ. ಯು. ಮುಖ್ಯಸ್ಥ ಮುರಳೀಧರ ಹೊಸಹಳ್ಳಿ, ಡಿಪಿಎಂಎನ್ ಗ್ಲೋಬಲ್ ಬಿ. ಯು. ಮುಖ್ಯಸ್ಥ ಡಾ. ನಾರಾಯಣ ರಾಮನಾಥನ್, ಗ್ಲೋಬಲ್ ಇಂಜಿನಿಯರಿಂಗ್ ಅಕಾಡೆಮಿಯ ಗ್ಲೋಬಲ್ ಮುಖ್ಯಸ್ಥ ಡಾ. ಪಿ. ಬಿ. ಕೋಟೂರ್, ಮೆಡೈಕ್ ಅಕಾಡೆಮಿಯ ಮುಖ್ಯಸ್ಥ ಡಾ. ವಿವೇಕ್ ಕೌಂಡಲ್, ಜೆಎಸ್‌ಎಸ್ ಎಹೆಚ್‌ಇಆರ್ ನ ಡಾ. ವಿಕ್ರಮ್ ಪಾಟೀಲ್, ಎಲ್ಪಿಟಿಎಸ್ ನ ಡಾ. ವಿವೇಕ್ ಕೌಂಡಲ್ ಸೇರಿದಂತೆ ಇನ್ನಿತರರು ಇದ್ದರು.