ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ, ಭಗೀರಥ ಮಹರ್ಷಿ ಹಾಗೂ ಕನಕದಾಸರ ಪುತ್ಥಳಿಗಳನ್ನು ಅಯೋಧ್ಯೆಯ ಶ್ರೀರಾಮಲಲ್ಲಾ ಶಿಲ್ಪದ ನಿರ್ಮಾತೃ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಲಿದ್ದು, ಪುತ್ಥಳಿ ನಿರ್ಮಾಣಕ್ಕೆ ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಸನ್ಮಾನಿಸುವ ಮೂಲಕ ಮಹರ್ಷಿ ವಾಲ್ಮೀಕಿ, ಭಗೀರಥ ಮಹರ್ಷಿ ಹಾಗೂ ಕನಕದಾಸರ ಪುತ್ಥಳಿಗಳ ನಿರ್ಮಾಣಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ, ಭಗೀರಥ ಮಹರ್ಷಿ ಹಾಗೂ ಕನಕದಾಸರ ಪುತ್ಥಳಿಗಳ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಆಕ್ಸಿಜನ್ ದುರಂತ; ಸಂತ್ರಸ್ತ ಕುಟುಂಬದ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಚಿವ ಕೆ ವೆಂಕಟೇಶ್ ಸಭೆ – ಚರ್ಚೆ
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಸಮುದಾಯಕ್ಕೊಂದು ಪುತ್ಥಳಿ ಯೋಜನೆಯನ್ನೆ ರೂಪಿಸಿದರೆ ಎಲ್ಲಾ ಸಮುದಾಯದ ಶ್ರೇಷ್ಠರನ್ನು ಗೌರವಿಸಿದಂತಲ್ಲವೇ!! ಸಂವಿಧಾನದ ಪ್ರಾಸ್ತಾವಿಕ ನುಡಿಯನ್ನು ಮಾತಲ್ಲಿ ಹೇಳಿದರೆ ಸಾಲದು ಗೋಡೆಗೆ ಅಂಟಿಸಿದರೆ ಮಾತ್ರ ಗೌರವಿಸಿದಂತೆ ಇವರ ಆಶಯ.
ಸ್ವಾರ್ಥಿಗಳ ನಡುವಿನ ಸಮಾಜದಲ್ಲಿ ಪ್ರಾಸ್ತಾವಿಕ ನುಡಿಯ ನಗಣ್ಯ.
ಕೋಮುವಾದದ ಮೂಲ ರಾಜಕೀಯ ಪ್ರತಿನಿಧಿಗಳು. ಇವರ ಹಿಂಬಾಲಕರಂತೆ ಸರ್ಕಾರೀ ಅಧಿಕಾರಿಗಳು ಭ್ರಷ್ಟರಾದ ನೌಕರರು