ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆಯ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ತಾಲ್ಲೂಕು ಮಟ್ಟದ ‘ಸ್ವಸ್ಥ ನಾರಿ- ಸಶಕ್ತ ಪರಿವಾರ’ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಅನಿಲ್ ಚಿಕ್ಕಮಾಧು ಚಾಲನೆ ನೀಡಿದರು.
” ‘ಸ್ವಸ್ಥ ನಾರಿ- ಸಶಕ್ತ ಪರಿವಾರ’ ಅಭಿಯಾನವನ್ನೂ ರಾಜ್ಯ ಸರ್ಕಾರವು ಯೋಜನೆಯನ್ನಾಗಿ ಮಾಡಿದೆ. ಭಾರತದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಆರೋಗ್ಯದ ಮೇಲೆ ಗಮನಹರಿಸುವ ಒಂದು ಅಭಿಯಾನವಾಗಿದ್ದು, ಇದನ್ನು 2025ರ ಸೆಪ್ಟೆಂಬರ್. 17ರಂದು ಪ್ರಾರಂಭಿಸಲಾಯಿತು. ಈ ಅಭಿಯಾನದ ಉದ್ದೇಶ, ವಿವಿಧ ಕಾಯಿಲೆಗಳನ್ನು (ಉದಾಹರಣೆಗೆ ಮಧುಮೇಹ, ಕ್ಯಾನ್ಸರ್) ಮುಂಚಿತವಾಗಿ ಪತ್ತೆಹಚ್ಚಲು ಆರೋಗ್ಯ ಶಿಬಿರಗಳನ್ನು ನಡೆಸುವುದು, ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ತನ್ಮೂಲಕ ಬಲಿಷ್ಠ ಕುಟುಂಬಗಳು ಹಾಗೂ ಸಮಾಜವನ್ನು ನಿರ್ಮಿಸುವುದು”.
“ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವುದು. ಪೌಷ್ಟಿಕಾಂಶ ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು. ಆರೋಗ್ಯವಂತ ಮಹಿಳೆಯರು ಸಮಾಜದ ಬಲವರ್ಧನೆಗೆ ಕೊಡುಗೆ ನೀಡುತ್ತಾರೆ ಎಂಬುದು ಈ ಅಭಿಯಾನದ ಮುಖ್ಯ ಸಿದ್ಧಾಂತವಾಗಿದೆ”.

“ಅಭಿಯಾನ ಪ್ರಾರಂಭವಾದಾಗಿನಿಂದ ದೇಶಾದ್ಯಂತ ದೊಡ್ಡ ಸಂಖ್ಯೆಯ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಲಕ್ಷಾಂತರ ನಾಗರಿಕರು ಈ ಅಭಿಯಾನದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರಿ ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯಿಂದ ಇದು ಯಶಸ್ವಿಯಾಗುತ್ತಿದೆ” ಎಂದರು.
ಆರೋಗ್ಯವಂತ ಮಹಿಳೆ, ಬಲಿಷ್ಠ ಕುಟುಂಬ ಎಂಬ ಸಂಕಲ್ಪದೊಂದಿಗೆ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುವುದು. ಮಹಿಳೆಯರಿಗೆ ಅಧಿಕ ರಕ್ತದ ಒತ್ತಡ ,ಮಧುಮೇಹ ಮತ್ತು ಕ್ಯಾನ್ಸರ್ ಕಾಯಿಲೆಗಳ ತಪಾಸಣೆ.ರಕ್ತ ಹೀನತೆ ,ಕ್ಷಯರೋಗ ಮತ್ತು ಸಿಕಲ್ ಸೆಲ್ ಕಾಯಿಲೆಗಳ ಪರೀಕ್ಷೆಗಳು. ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ. ಮಕ್ಕಳುಗಳಿಗೆ ಲಸಿಕಾ ಸೌಲಭ್ಯ ಇತ್ಯಾದಿ ಮಾಹಿತಿ ಶಿಬಿರದಲ್ಲಿ ಒದಗಿಸುವುದಾಗಿದೆ.
- ಬೊಜ್ಜು ತಡೆ ಗಟ್ಟಲು ,ಸಕ್ಕರೆ ಮತ್ತು ಖಾದ್ಯ ತೈಲ ಗಳ ಸೇವನೆಯನ್ನು ಕಡಿಮೆ ಮಾಡಲು ಒತ್ತು ನೀಡುವುದು. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಮತ್ತು ಪೋಷಣೆ ಶಿಕ್ಷಣ.
- ಶಿಶು ಮತ್ತು ಎಳೆಯ ಮಕ್ಕಳ ಆಹಾರ ಪದ್ಧತಿಗಳು.
- ಪೋಷಣೆ ಮತ್ತು ಮಕ್ಕಳ ಆರೈಕೆಯಲ್ಲಿ ಪುರುಷರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು.
- ಸ್ಥಳೀಯ ಪೌಷ್ಟಿಕ ಆಹಾರ ಸಂಪನ್ಮೂಲಗಳಿಗೆ ಉತ್ತೇಜನ.
- ಸಮ್ಮಿಲನ ಕ್ರಮ ಮತ್ತು ಡಿಜಿಟಲೀಕರಣ
- ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಿಶೇಷ ನೊಂದಣಿ ಆಂದೋಲನ.
ಈ ಮೇಲಿನ ಎಲ್ಲ ಸೇವೆಗಳನ್ನು ಪಡೆಯಲು. ಮತ್ತು ಮಕ್ಕಳು ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಬೇಟಿ ನೀಡಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸುವಲ್ಲಿ ಎಲ್ಲರೂ ಕೈಜೋಡಿಸಿ : ಡಾ ಮಂತರ್ ಗೌಡ
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್, ಮುಖಂಡರಾದ ಶಂಭುಲಿಂಗ ನಾಯಕ, ಕೃಷ್ಣ ನಾಯ್ಕ, ಪುರದ ಕಟ್ಟೆ ಬಸವರಾಜು, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ, ರಾಜು, ಸಿದ್ದರಾಮು, ವನಸಿರಿ ಉಮೇಶ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಸೇರಿದಂತೆ ಇನ್ನಿತರರು ಇದ್ದರು.