ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸ್ಥಳೀಯ ಡಾ. ಬಿ ಆರ್ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲ್ಯಾಪ್‌ಟಾಪ್ ಮತ್ತು ಗಣಕಯಂತ್ರಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿ ಎಸ್‌ಡಿಎಂಸಿ ಅಧ್ಯಕ್ಷ ಗುಂಡಪ್ಪ ಚಲವಾದಿ ನೇತೃತ್ವದಲ್ಲಿ ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
ಆ ಶಾಲೆಯಲ್ಲಿ 60ಕ್ಕೂ ಹೆಚ್ಚು ದಲಿತ ಸಮುದಾಯದ ವಿದ್ಯಾರ್ಥಿಗಳು ಓದುತ್ತಿದ್ದು, ಮೂಲ ಸೌಕರ್ಯಗಳ ಕೊರತೆ ಇದೆ. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಈವರೆಗೂ ಈ ಶಾಲೆಗ ತಲುಪುತ್ತಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಶೀಘ್ರವೇ 2 ಲ್ಯಾಪ್ ಟಾಪ್ ಮತ್ತು 2 ಗಣಕಯಂತ್ರಗಳನ್ನು ಪೂರೈಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ವಿಜಯಪುರ | ಪರಿಹಾರ ನೀಡದೇ ಭೂ ಕಬಳಿಕೆ ಮಾಡಿದ ಅಧಿಕಾರಿಗಳ ವಜಾಕ್ಕೆ ರೈತರ ಆಗ್ರಹ
ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ, ಮುಖ್ಯಶಿಕ್ಷಕಿ ಎಸ್.ಡಿ.ಹೊಸಗೌಡ್ರ, ಶರಣಪ್ಪ ಇಲಕಲ್, ಮಂಜುನಾಥ ಕಟ್ಟಿಮನಿ, ಗಂಗಪ್ಪ, ಹುಚ್ಚಯ್ಯಪ್ಪ, ಆರ್.ವೈ. ಕಟ್ಟಿಮನಿ, ಎಂ.ಎಸ್.ಶಾಂತಗಿರಿ, ರಾಘು, ಚಂದ್ರಶೇಖರ ಶಹಪೂರ, ಬಸು ಶಾಂತಗಿರಿ, ವಿರೇಶ ಚಲವಾದಿ, ಮುದಕಪ್ಪ ಚಲವಾದಿ, ಗಂಗಪ್ಪ ಮಾದರ ಇದ್ದರು.