ಮುಂಡಗೋಡ | ತಾಲ್ಲೂಕು ಕೇಂದ್ರದ ಅಂಚಿನಲ್ಲೇ ಮೂಲಸೌಕರ್ಯಗಳಿಲ್ಲದ ಹಳ್ಳಿಗಳು; ಅಭಿವೃದ್ಧಿಗಾಗಿ ಡಿಸಿಗೆ ಮನವಿ

Date:

Advertisements

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೊಗೇಶ್ವರಹಳ್ಳ ಹಾಗೂ ನಂದಿಗಟ್ಟಾ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಎಂಬೆರಡು ಹಳ್ಳಿಗಳು ಇಂದಿಗೂ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿವೆ. ತಾಲೂಕು ಕೇಂದ್ರದಿಂದ ಕೇವಲ ಐದು ಕಿ.ಮೀ. ದೂರದಲ್ಲಿದ್ದರೂ ಈ ಹಳ್ಳಿಗಳಲ್ಲಿ ಇಂದಿಗೂ ಸಿಸಿ ರಸ್ತೆ ಇರಲಿ ಡಾಂಬರು ರಸ್ತೆಯೂ ಇಲ್ಲ, ಚರಂಡಿ ವ್ಯವಸ್ಥೆ, ಶಾಲೆಗೊಂದು ಕಾಂಪೌಂಡ್‌.. ಯಾವುದೂ ಇಲ್ಲ. ಈ ಹಳ್ಳಿಗಳಲ್ಲಿ ಜೀವನ ದೂಡುತ್ತಿರುವ ಬಡ ಗ್ರಾಮಸ್ಥರು ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಜೋಗೇಶ್ವರಹಳ್ಳದಲ್ಲಿ ಗೌಳಿ ಸಮುದಾಯದ ಸುಮಾರು 28 ಕುಟುಂಬಗಳು ವಾಸವಾಗಿದ್ದು, ಬಹುತೇಕರು ಅನಕ್ಷರಸ್ಥರು ಹಾಗೂ ಬುಡಕಟ್ಟು ಜನಾಂಗಕ್ಕೆ ಸೇರಿದವರೇ ಆಗಿದ್ದಾರೆ. ಇವರ ಮೂಲ ಜೀವನೋಪಾಯ ಹೈನುಗಾರಿಕೆ. ಕಾಡಂಚಿನಲ್ಲಿ ವಾಸಿಸುವ ಕಾರಣದಿಂದ ದಿನನಿತ್ಯ ಕಾಡು ಪ್ರಾಣಿಗಳ ಹಾವಳಿಯೂ ಕಡಿಮೆಯಿಲ್ಲ. ಒಬ್ಬ ವ್ಯಕ್ತಿಗೆ ವಾಸಿಸಲು ಅಗತ್ಯವಿರುವ ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಬದುಕಿಗೆ ತೀರಾ ಅಗತ್ಯವಾದ ವ್ಯವಸ್ಥೆಗಳಿಲ್ಲದೆ ಈ ಗ್ರಾಮಗಳ ಜನರು ನರಳುತ್ತಿದ್ದಾರೆ.

ಈ ಹಳ್ಳಿಗಳ ಅಭಿವೃದ್ಧಿಗೆ ಗ್ರಾಮಸ್ಥರು ಸ್ವತಃ ಮುಂದೆ ಬಂದು ತಾವೇ ಗ್ರಾಮಾಭಿವೃದ್ಧಿ ಸಮಿತಿಯೊಂದನ್ನು ರಚಿಸಿಕೊಂಡು, ಸಂಘಟಸಿ, ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಎಲ್.ವಿ.ಕೆ. ಸೇರಿದಂತೆ ಹಲವಾರು ಸಮಾನ ಮನಸ್ಕ ಸಂಘಟನೆಗಳು ಇವರ ಹೋರಾಟಕ್ಕೆ ಬೆಂಬಲ ನೀಡುತ್ತಿವೆ.

ಹಾಗೂ ಇದೇ ಸಂದರ್ಭದಲ್ಲಿ ಈ ಭಾಗದ ನರೇಗಾ ಕೂಲಿ ಕಾರ್ಮಿಕರ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಎರಡು ಊರಿನ ಗ್ರಾಮಸ್ಥರು ಮನವಿ ಪತ್ರದಲ್ಲಿ ತಿಳಿಸಿದರು.

ಇದನ್ನೂ ಓದಿ: ಉತ್ತರ ಕನ್ನಡ | ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

“ನಾವು ಬದುಕಲು ಅಗತ್ಯವಿರುವ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿದ್ದೇವೆ. ದಶಕಗಳಿಂದ ನಿರ್ಲಕ್ಷ್ಯಗೊಂಡಿರುವ ನಮ್ಮ ಹಳ್ಳಿಗಳ ಕಡೆ ಅಧಿಕಾರಿಗಳು ತಿರುಗಿ ನೋಡಬೇಕು. ಸಿಸಿ ರಸ್ತೆ, ಗಟಾರ, ಸಮುದಾಯ ಭವನ, ಶಾಲಾ ಕಾಂಪೌಂಡ್, ವಸತಿ ಮತ್ತು ಭೂಮಿ ಹಕ್ಕು ನಿರ್ವಹಣೆ, ಕಾಡು ಪ್ರಾಣಿಗಳ ಹಾವಳಿಗೆ ಪರಿಹಾರ ಇತ್ಯಾದಿಗಳನ್ನು ಶೀಘ್ರ ಒದಗಿಸಬೇಕು” ಎಂದು ಗ್ರಾಮಸ್ಥರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜೋಗೇಶ್ವರಹಳ್ಳ ಹಾಗೂ ರಾಮಾಪುರ ಹಳ್ಳಿಯ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು, ಜನ ವೇದಿಕೆ ನಾಯಕರು, ಯುವಕರು, ಸ್ವಸಹಾಯ ಸಂಘದ ಮಹಿಳೆಯರು, ಕಾಯಕ ಬಂಧುಗಳು ಹಾಗೂ ಎಲ್.ವಿ.ಕೆ. ಸಿಬ್ಬಂದಿಗಳಾದ ಮಂಗಲಾ ಮೊರೆ, ಶ್ರೀದೇವಿ ಭದ್ರಾಪುರ ಹಾಗೂ ಡಿಮ್ನಾ ಥೋಮಸ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

ಉಡುಪಿ | ಮೈಸೂರು ದಸರಾ ಮೆರವಣಿಗೆಯಲ್ಲಿ ಬಿರ್ತಿಯ ಅಂಕದಮನೆ ತಂಡದ “ಕಂಗೀಲು ನೃತ್ಯ” ಆಯ್ಕೆ

ಅಕ್ಟೋಬರ್ 2 ರಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೈಸೂರು...

ಹುಬ್ಬಳ್ಳಿ | ಮಹಾನಗರ ಪಾಲಿಕೆ ಕಲಾಪಕ್ಕೆ 18 ಮಾರ್ಷಲ್‌ಗಳ ನೇಮಕ

ಸಾಮಾನ್ಯವಾಗಿ ವಿಧಾನಸಭೆ ಕಲಾಪದಲ್ಲಿ ಮಾರ್ಷಲ್‌ಗಳು ಕಾರ್ಯನಿರ್ವಹಿಸುತ್ತಾರೆ. ಆ ಮಾದರಿಯಲ್ಲಿ ಇದೀಗ ಪ್ರಥಮ‌...

Download Eedina App Android / iOS

X