ಬೆಳಗಾವಿ ತಾಲೂಕಿನ ಉಪ್ಪಾರಗಲ್ಲಿ ಮೂಲದ ಹಾಗೂ ಪ್ರಸ್ತುತ ಮುಂಡಗೋಡ ನಂದೀಶ್ವರನಗರದಲ್ಲಿ ವಾಸವಾಗಿರುವ ಅದಿತಿ ಆನಂದ ಬಸ್ತಾವಾಡ(29 ವರ್ಷ) ಅವರು ಮಾರ್ಚ್ 2025ರ 7ರಂದು ಕಾಣೆಯಾಗಿದ್ದು, ಇವರ ಗುರುತು ಕಂಡುಬಂದಲ್ಲಿ ಮುಂಡಗೋಡು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಮನೆಯವರು ತಮ್ಮ ಹೋಟೆಲ್‌ಗೆ ತೆರಳಿದಾಗ, ಮನೆಯಲ್ಲಿ ಅಡುಗೆ ಮಾಡಿಕೊಂಡು ಹೋಟೆಲ್‌ಗೆ ತಂದು ಕೊಡುತ್ತೇನೆಂದು ಹೇಳಿ ಹೋದ ಮಹಿಳೆ ಸಂಜೆ 4 ಗಂಟೆಯಾದರೂ ಹೋಟೆಲ್‌ಗೆ ಬಾರದೇ ಇರುವುದನ್ನು ಕಂಡು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದಿರುವುದು ತಿಳಿದುಬಂದಿದೆ. ಮನೆಯಿಂದ ಕಾಣೆಯಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಹಿಳೆಯ ವಿವರಗಳು:
ಚಹರೆ: ಗೋಧಿ ಮೈ ಬಣ್ಣ
ಮೈಕಟ್ಟು: ಸಾಧಾರಣ
ಮುಖ : ಉದ್ದವಾದ ಮುಖ
ಉಡುಪು : ಕಪ್ಪು-ಬಿಳಿ ಮಿಶ್ರಿತ ಟೀ ಶರ್ಟ್ ಹಾಗೂ ನೈಟ್ ಪ್ಯಾಂಟ್
ಭಾಷೆ : ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಲೆಮಾರಿಗಳ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ: ಡಾ. ಎಸ್ ಬಾಲಾಜಿ
ಸಾರ್ವಜನಿಕರಿಗೆ ಕಾಣಿಸಿಕೊಂಡಲ್ಲಿ ಮುಂಡಗೋಡ ಪೊಲೀಸ್ ಠಾಣೆ(ದೂ.ಸಂ: 08301-222211), ಎಸ್‌ಡಿಪಿಒ (08384-226424), ಡಿಪಿಒ(08382-226233), ರೇಂಜ್ ಕಚೇರಿ (82422-20501)ಯನ್ನು ಸಂಪರ್ಕಿಸುವಂತೆ ಮುಂಡಗೋಡ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.