ಮೈಸೂರಿನ ಪುರಭವನ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ದಲಿತ ಮಹಾಸಭಾ ಕಾರ್ಯಕರ್ತರು ದಸರಾ ಉದ್ಘಾಟಕರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್ ವಜಾ ಮಾಡಿರುವುದನ್ನು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದರು.
ದಲಿತ ಮಹಾಸಭಾ ಅಧ್ಯಕ್ಷ ಎಸ್. ರಾಜೇಶ್ ಮಾತನಾಡಿ, “ಈ ಹಿಂದಿನ ದಸರಾ ಉದ್ಘಾಟಕರಾಗಿದ್ದ ನಿಸಾರ್ ಅಹಮ್ಮದ್ ಅವರು ಮುಸ್ಲಿಮ್ ಸಮುದಾಯವರಾಗಿದ್ದಾರೆ. ಹಂಪಾ ನಾಗರಾಜು ಜೈನ ಸಮುದಾಯದವರಾಗಿದ್ದು, ಅಂದಿನ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ವಿರೋಧ ವ್ಯಕ್ತಪಡಿಸಲಿಲ್ಲ. ಆದರೇ, ಇವಾಗ ಬೂಕರ್ ಪ್ರಶಸ್ತಿ ವಿಜೇತರಾದ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದಾಗ ವಿರೋಧ ವ್ಯಕ್ತ ಪಡಿಸಿ, ಘನ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದರು. ಆದರೇ, ಘನ ನ್ಯಾಯಾಲಯವು ಸರ್ಕಾರದ ನಿರ್ಧಾರ ಯಾವುದೇ ಕಾನೂನಾತ್ಮಕ ಅಥವಾ ಸಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆಗಿಲ್ಲ ಎಂದು ಅರ್ಜಿಗಳನ್ನು ವಜಾಗೊಳಿಸಿರುವುದು ಸ್ವಾಗತಾರ್ಹ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ | ಹುಣಸೂರು | ರೈತ ಸಂಘದ ಪಿತಾಮಹ ಎಚ್. ಎಸ್. ರುದ್ರಪ್ಪ : ಹೊಸೂರು ಕುಮಾರ್
ಮುಖಂಡರುಗಳಾದ ಮರಿದೇವಯ್ಯ, ಶಿವಣ್ಣ, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಸುನೀಲ್ ನಾರಾಯಣ, ಕುರುಬರಹಳ್ಳಿ ಪ್ರಕಾಶ್, ಅಮ್ರಾನ್ ಪಾಷ, ಮಹದೇವು, ಎಸ್. ಎ. ರಹೀಮ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.