ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಚಿಕ್ಕ ಗಡಿಯಾರದ ಮುಂಭಾಗದಲ್ಲಿ ಸಾರ್ವಜನಿಕರಿಗೆ ‘ಸ್ವಚ್ಛತೆಯೇ ಸೇವೆ’ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಮೈಸೂರು ದಸರಾ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯವಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದಾಗುವ ಸಮಸ್ಯೆ, ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತಾಗಿ ಮನವರಿಕೆ. ಮೈಸೂರು ನಗರ ವಿಶ್ವದಲ್ಲಿ ಮೂರನೇ ಸ್ವಚ್ಛ ನಗರದ ಸ್ಥಾನ ಹೊಂದಿದ್ದು, ಆ ಗೌರವವನ್ನು ಕಾಪಾಡಿಕೊಳ್ಳಬೇಕಿದೆ ಎನ್ನುವ ಮಹತ್ವವನ್ನು ಸಾರಿದರು.

ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು. ನೇಪಥ್ಯ ರಂಗ ತಂಡದವರು ಬೀದಿ ನಾಟಕವನ್ನು ಪ್ರದರ್ಶಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು ದಸರಾ | ಡ್ರೋನ್ ಮೂಲಕ ಹುಲಿಯ ಕಲಾಕೃತಿ; ವಿಶ್ವದಾಖಲೆ

ಮೈಸೂರು ದಸರಾ ಸ್ವಚ್ಛತೆ ಮತ್ತು ವ್ಯವಸ್ಥೆಯ ಉಪ ಸಮಿತಿಯ ಅಧ್ಯಕ್ಷ ಸುಭಾನ್, ಉಪಾಧ್ಯಕ್ಷ ವಸಂತ್ ಕುಮಾರ್, ಸದಸ್ಯರುಗಳಾದ ಮೊಹಮದ್ ಶರೀಫ್, ಮಲ್ಲಜ್ಜಮ್ಮ, ಸಾಕಮ್ಮ,ರಾಮಚಂದ್ರ, ಸಿದ್ದಪ್ಪ , ಮರಿಯಪ್ಪ , ಸುರೇಶ್, ಮೈಸೂರು ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಮಂಜು ಕುಮಾರ್, ಕೃಷ್ಣ, ಪ್ರಭಾಕರ್ ಹಾಗೂ ಸಿಬ್ಬಂದಿ ವರ್ಗದವರು ಬೀದಿ ನಾಟಕ ಪ್ರದರ್ಶನ ವೇಳೆ ಇದ್ದರು.