ಮೈಸೂರು | ಬೇಸಿಗೆಯ ತಾಪ ಹೆಚ್ಚಳ; ಬೆಂಕಿ ಅವಘಡ ಪ್ರಕರಣಗಳ ಏರಿಕೆ

Date:

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಹಳೇ ಮೈಸೂರು ಭಾಗಗಳಲ್ಲಿ ಬೆಂಕಿಯ ಕಾವು ಏರುತ್ತಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಅಗ್ನಿಶಾಮಕ ಕರೆಗಳಿಗೆ ಸ್ಪಂದಿಸುವ ಕಠಿಣ ಕೆಲಸವನ್ನು ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಹೊಂದಿದ್ದಾರೆ.

- Advertisement -

ಅಗ್ನಿಶಾಮಕ ಸಿಬ್ಬಂದಿಗೆ ಹಗಲಿನಲ್ಲಿ ಸರಾಸರಿ 30ರಿಂದ 35 ಕರೆಗಳು ಬರುತ್ತಿದ್ದು, ರಾತ್ರಿಯಲ್ಲಿ ಈ ಸಂಖ್ಯೆ 10 ರಷ್ಟಿರುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

“ಸಾರ್ವಜನಿಕರು, ರೈತರು ಮತ್ತು ವ್ಯಾಪಾರ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಬೆಂಕಿ ಸಂಭವಿಸುತ್ತಿದೆ. ಕಡಿಮೆ ತೇವಾಂಶದಿಂದಾಗಿ ಬೇಸಿಗೆಯಲ್ಲಿ ದಹನಕಾರಿ ವಸ್ತುಗಳ ಸಾಮಾನ್ಯ ಬೆಂಕಿ ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳ ಬಳಿ ಬೆಂಕಿ ಕಾಣಿಸಿಕೊಳ್ಳುವುದು ಸವಾಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಅಗ್ನಿಶಾಮಕ ಕರೆಗಳಿಗೆ ಸ್ಪಂದಿಸಲು ಅಗ್ನಿಶಾಮಕ ವಾಹನಗಳ ಕೊರತೆ ಉಂಟಾಗಿದ್ದು, ಇಲಾಖೆ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಇಲಾಖೆಯ ಒಡೆತನದ ಹೆಚ್ಚಿನ ಅಗ್ನಿಶಾಮಕ ಎಂಜಿನ್ ವಾಹನಗಳು 15 ವರ್ಷಗಳಿಗಿಂತ ಹಳೆಯವು ಮತ್ತು ಅಂತಹ ವಾಹನಗಳನ್ನು ಬಳಸದಂತೆ ಕೇಂದ್ರ ಸರ್ಕಾರದ ನಿರ್ದೇಶನದಿಂದಾಗಿ ಫಿಟ್ನೆಸ್ ಪ್ರಮಾಣಪತ್ರದ ನಂತರ ಮರು ನೋಂದಣಿಯಾಗಿಲ್ಲ. ಆ ವಾಹನಗಳನ್ನು ಅಗ್ನಿಶಾಮಕ ಕೇಂದ್ರಗಳಲ್ಲಿ ನಿಲ್ಲಿಸಲಾಗಿದ್ದು, ಕೆಲವು ಮಾತ್ರ ಕರೆಗಳಿಗೆ ಸ್ಪಂದಿಸಲು ಬಳಸಲಾಗುತ್ತಿದೆ” ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಆಗಾಗ್ಗೆ ಬೆಂಕಿಯ ಕರೆಗಳು ಬರುತ್ತಿರುವುದರಿಂದ ಸಿಬ್ಬಂದಿಗಳು ಸದಾ ಎಚ್ಚರವಾಗಿರುವಂತಾಗಿದೆ.

“ಸಾರ್ವಜನಿಕರು ಮತ್ತು ಸಂಬಂಧಪಟ್ಟ ಜನರಲ್ಲಿ ಅಗ್ನಿ ಸುರಕ್ಷತಾ ಜಾಗೃತಿಯ ಕೊರತೆಯಿಂದ ಬೆಂಕಿ ಘಟನೆಗಳಿಗೆ ಕಾರಣವಾಗುತ್ತಿದೆ” ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಚಂದನ್ ಪಿ ಹೇಳುತ್ತಾರೆ.

“ನಿವಾಸಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ಜಾಗೃತಿ ಇಲ್ಲ. ಏಕೆಂದರೆ ಅವರು ತಮ್ಮ ನಿವಾಸಗಳ ಬಳಿ ಕಸಕ್ಕೆ ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಇದು ನೆರೆಯ ಅಥವಾ ಪಕ್ಕದ ಪ್ರದೇಶಗಳಿಗೆ ಬೆಂಕಿಯನ್ನು ಹರಡುತ್ತದೆ. ಕೆಲವು ರೈತರೂ ಕೂಡ ತಮ್ಮ ಹೊಲಗಳಲ್ಲಿ ಕಬ್ಬನ್ನು ಸುಡುವುದನ್ನು ನಿಲ್ಲಿಸಿಲ್ಲ. ಇಂತಹ ನಿರ್ಲಕ್ಷ್ಯಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಬೆಂಕಿ ಅವಘಡ ಪ್ರಕರಣಗಳಿಗೆ ಕಾರಣವಾಗುತ್ತಿದೆ” ಎಂದು ಹೇಳಿದರು.

“ಇದಲ್ಲದೆ, ನಾವು ನೆಲದ ಬೆಂಕಿ ಎಂದು ಕರೆಯುವುದು “ರಸ್ತೆ ಬದಿಯಲ್ಲಿ ಒಣಗಿದ ಹುಲ್ಲು ಮತ್ತು ಎಲೆಗಳ ಮೇಲೆ ಎಸೆಯುವ ಸಿಗರೇಟ್/ಬೀಡಿಗಳಿಂದ ಬೆಂಕಿ ಹೊತ್ತಿಕೊಳ್ಳುತ್ತದೆ. ಇಂತಹ ಘಟನೆಗಳು ಅರಣ್ಯ ಪ್ರದೇಶಗಳ ಸಮೀಪದಲ್ಲಿ ನಡೆದರೆ, ಬೇಸಿಗೆ ಕಾಲಾವಾಗಿರುವುದರಿಂದ ಬೆಂಕಿ ಕಾಡಿಗೆ ಹರಡಬಹುದು. ಆದ್ದರಿಂದ, ಸಾರ್ವಜನಿಕರು ಜಾಗರೂಕರಾಗಿರಬೇಕು. ನಿರ್ಲಕ್ಷ್ಯ ವಹಿಸಬಾರದು” ಎಂದು ಅಧಿಕಾರಿ ಸಲಹೆ ನೀಡಿದರು.

“ಇತ್ತೀಚೆಗೆ, ಕೈಗಾರಿಕೆಗಳಲ್ಲಿ ಎರಡು ಬೆಂಕಿ ಘಟನೆಗಳು ವರದಿಯಾಗಿವೆ. ನಾವು ಗಮನಿಸಿರುವುದು ಏನೆಂದರೆ, ಬೆಂಕಿಯ ಕರೆಗಳಿಗೆ ಹಾಜರಾಗಲು ಅವರು ಸಾಕಷ್ಟು ನೀರಿನ ಸಂಗ್ರಹವನ್ನು ಮಾಡಲಿಲ್ಲ. ಬಿಸಾಡಲಾದ ಗಾಜಿನ ಬಾಟಲಿಗಳಿಗೆ ಸೂರ್ಯನ ಕಿರಣಗಳು ಗೋಚರವಾಗುವುದರಿಂದ ಶಾಖಕ್ಕೆ ಬಾಟಲಿ ಸಿಡಿದು ಕೂಡ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ. ಬೇಸಿಗೆಯಲ್ಲಿ ಕಸದ ರಾಶಿಗಳಲ್ಲಿ ಬೆಂಕಿ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ, ಬೇಸಿಗೆಯಲ್ಲಿ ಬೆಂಕಿಯನ್ನು ನಿಭಾಯಿಸುವಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವ ಮೂಲಕ ಸಹಕರಿಸಬೇಕು” ಎಂದು ಅಧಿಕಾರಿ ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಎಕ್ಸ್‌ಪ್ರೆಸ್‌ ಕೆನಾಲ್‌ಗೆ ಮಾಧುಸ್ವಾಮಿ ವಿರೋಧ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರ್‌ಎಫ್‌ಒ, “ಹಳೆಯ ಅಗ್ನಿಶಾಮಕ ಎಂಜಿನ್ ವಾಹನಗಳನ್ನು ಬಳಸುತ್ತಿಲ್ಲ” ಎಂದು ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಭೀಕರ ರಸ್ತೆ ಅಪಘಾತ: ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರನ ಪುತ್ರ ಮಲ್ಲು ವಜ್ಜಲ್‌ಗೆ ಗಂಭೀರ ಗಾಯ

ಲಿಂಗಸುಗೂರು ತಾಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ ಬುಧವಾರ ಸಂಭವಿಸಿದ ಭೀಕರ ರಸ್ತೆ...

ಉಡುಪಿ | ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ನವೀಕೃತ ಶೋರೂಂ ಲೋಕಾರ್ಪಣೆ

ಉಡುಪಿ ನಗರದ ಹೃದಯ ಭಾಗದಲ್ಲಿರುವ ಸಿಬಿ ರಸ್ತೆಯಲ್ಲಿ 1935 ರಲ್ಲಿ ಆರಂಭಗೊಂಡಿದ್ದ...

ವಿಜಯಪುರ |ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರ ಬದುಕಿಗೆ ಬೆಳಕಾದ ಎಂ.ಎಸ್. ಖೇಡ: 10ನೇ ಪುಣ್ಯಸ್ಮರಣೆ

ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರಿಗೆ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ವಿಜಯಪುರ...

ಹಾಸನ | ಅಕ್ರಮ ಪೋಡಿ ದುರಸ್ತಿ: ರದ್ದು ಪಡಿಸಲು ನ್ಯಾಯಾಲಯ ಆದೇಶ 

ಸಕಲೇಶಪುರ ತಾಲೂಕಿನ ಸರ್ವೆಯರ್ ಹಾಗೂ ಸೂಪರ್‌ವೈಸರ್ ಸೇರಿ ಅಕ್ರಮವಾಗಿ ಕಿರುಹುಣಸೆ ಗ್ರಾಮದ...