ಉಡುಪಿ ನಗರದ ಆದಿ ಉಡುಪಿಯ ಮಸ್ಜಿದೆ ನೂರುಲ್ ಇಸ್ಲಾಮ್ ನ ಆವರಣದಲ್ಲಿ ಇಂದು ನಮ್ಮ ನಾಡ ಒಕ್ಕೂಟದ ನೂತನ ಕಮ್ಯೂನಿಟಿ ಸೆಂಟರ್ ಅನ್ನು ಆದಿ ಉಡುಪಿ ಮಸೀದಿಯ ಅಧ್ಯಕ್ಷರಾದ ಆಸಿಫ್ ಇಕ್ಬಾಲ್ ಉದ್ಘಾಟಿಸಿದರು.
ಕೇಂದ್ರ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಸಲೀಮ್ ಮೂಡುಬಿದಿರೆ ಮಾತನಾಡಿ, ಈಗಾಗಲೇ NNO ವತಿಯಿಂದ ಮೂರು ಸ್ಥಳಗಳಲ್ಲಿ ಕಮ್ಯೂನಿಟಿ ಸೆಂಟರ್ ಸ್ಥಾಪಿಸಲಾಗಿದೆ, ಒಂದು ಕುಂದಾಪುರದಲ್ಲಿ, ಎರಡನೇಯದು ಕಾರ್ಕಳದಲ್ಲಿ, ಮೂರನೇಯದು ಮಂಗಳೂರಿನ ತೊಕ್ಕಟ್ಟಿನಲ್ಲಿ, ಎಲ್ಲಾ ಕೇಂದ್ರಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳು ಪೂರ್ಣ ಅವಧಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಹಲವಾರು ಮಂದಿ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಭೇಟಿ ನೀಡುತ್ತಾರೆ. ಇದು ನಮ್ಮ ನಾಲ್ಕನೇ ಕಮ್ಯೂನಿಟಿ ಸೆಂಟರ್ ಆಗಿದೆ. ಶೀಘ್ರದಲ್ಲಿ ಪಡುಬಿದ್ರಿಯಲ್ಲಿ ಐದನೇ ಕಮ್ಯೂನಿಟಿ ಸೆಂಟರ್ ಆರಂಭವಾಗಲಿದೆ ಎಂದು ಹೇಳಿದರು.
ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ನಝೀರ್ ನೇಜಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲಾ, ಅನಿವಾಸಿ ಭಾರತೀಯರಾದ ಬಿ.ಎಮ್. ಜಾಫರ್ ದುಬೈ, ಜಿ. ಸಾದಿಕ್ ದುಬೈ, ನಝೀರ್ ಅಲ್ ಫಲಾಹ್ ಜುಬೈಲ್ ಶುಭಹಾರೈಸಿದರು. ನಮ್ಮ ನಾಡ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮುಸ್ತಾಕ್ ಬೆಳ್ವೆ, ಕಮ್ಯೂನಿಟಿ ಸೆಂಟರ್ ಉಡುಪಿಯ ಅಧ್ಯಕ್ಷರಾದ ಇಬಾದುಲ್ಲಾಹ್ ಉಸ್ಮಾನ್ ಸಂದರ್ಭೂಚಿತವಾಗಿ ಮಾತನಾಡಿದರು.
ಮಸೀದಿಯ ಇಮಾಮರಾದ ಮೌಲಾನಾ ಮುಹಮ್ಮದ್ ಆದಿಲ್ ದುಆ ಮಾಡಿದರು. ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಕೇಂದ್ರ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತ ಭಾಷಣ ಮಾಡಿದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಮ್ಯೂನಿಟಿ ಸೆಂಟರ್ ಉಡುಪಿಯ ಪ್ರಧಾನ ಕಾರ್ಯದರ್ಶಿ ಟಿ.ಎಮ್. ಝಫರುಲ್ಲಾ ಹೊಡೆ ನಿರೂಪಿಸಿದರು. ಫಾಝಿಲ್ ಆದಿ ಉಡುಪಿ ವಂದಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಕೋಶಾಧಿಕಾರಿ ಪೀರು ಸಾಹೇಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹೀರ್ ನಾಖುದಾ, ಜಿಲ್ಲಾ ಕೋಶಾಧಿಕಾರಿ ಜನಾಬ್ ನಕ್ವಾ ಯಾಹ್ಯ, NNO ಕುವೈತ್ ಅಧ್ಯಕ್ಷರಾದ ಅಶ್ರಫ್ ಹಂಗಾರಕಟ್ಟೆ, ಕಮ್ಯೂನಿಟಿ ಸೆಂಟರ್ ಕುಂದಾಪುರದ ಅಧ್ಯಕ್ಷರಾದ ಮುನಾಫ್ ಹಂಗಾರಕಟ್ಟೆ, ಉಡುಪಿ ತಾಲೂಕು ಕಾರ್ಯದರ್ಶಿ ಸಾದಿಕ್ ಉಸ್ತಾದ್, ಕಮ್ಯೂನಿಟಿ ಸೆಂಟರ್ ಉಡುಪಿಯ ಕೋಶಾಧಿಕಾರಿ ಬಿ. ಸುಲೈಮಾನ್, ಉಪಾಧ್ಯಕ್ಷರಾದ ಅನ್ಸಾರ್ ಉಡುಪಿ ಹಾಗೂ ಇತರರು ಉಪಸ್ಥಿತರಿದ್ದರು.