ಉತ್ತರ ಕನ್ನಡ: ಹೆಸ್ಕಾಂ ವ್ಯಾಪ್ತಿಯ ವಿವಿಧ ವಿದ್ಯುತ್ ಮಾರ್ಗಗಳು ಹಾಗೂ ಸ್ವೀಕರಣಾ ಕೇಂದ್ರಗಳಲ್ಲಿ ನಿರ್ವಹಣೆ ಮತ್ತು ತುರ್ತು ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ಜಿಲ್ಲೆಯ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಕುಮಟಾ: ಕುಮಟಾ ಹೆಸ್ಕಾಂ ಉಪವಿಭಾಗ ವ್ಯಾಪ್ತಿಯ 33 ಕೆ.ವಿ. ಗೋಕರ್ಣ ಮಾರ್ಗದಲ್ಲಿ ಜಂಗಲ್ ಕಟ್ಟಿಂಗ್ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸೆಪ್ಟೆಂಬರ್ 2ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಗಂಗಾವಳಿ, ಓಂ ಬೀಚ್, ಮಿರ್ಜಾನ್, ಕೋಡ್ಕಣಿ, ನಾಗೂರು, ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ ಹಾಗೂ ದಿವಗಿ ಮಾರ್ಗದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಹೊನ್ನಾವರ: ಪಟ್ಟಣ ಶಾಖೆ ವ್ಯಾಪ್ತಿಯ ಎಲ್ಐಸಿ ಫೀಡರ್ 11 ಕೆ.ವಿ. ಮಾರ್ಗದ ನಿರ್ವಹಣೆ ಹಾಗೂ ಗೇರುಸೊಪ್ಪ ಶಾಖೆಯ ಮಾಗೋಡ ಫೀಡರ್ 11 ಕೆ.ವಿ. ಮಾರ್ಗದ ನಿರ್ವಹಣಾ ಕಾಮಗಾರಿಯ ನಿಮಿತ್ತ ಸೆಪ್ಟೆಂಬರ್ 2ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಸುದ್ದಿ ಓದಿದ್ದೀರಾ? ಹಳಿಯಾಳ | ವರ್ಗಾವಣೆ ಕಮಿಷನ್, ‘ಮಂತ್ಲಿ ಹಪ್ತಾ’ ಕುರಿತ ಆಡಿಯೋ ವೈರಲ್: ಮೂವರು ಪಿಎಸ್ಐ ಅಮಾನತು
ದಾಂಡೇಲಿ: 11 ಕೆ.ವಿ. ಮಾರ್ಗದ ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನವಗ್ರಾಮ, ಗಾಂಧಿನಗರ, ಪಟೇಲನಗರ, ಹಳೇ ದಾಂಡೇಲಿ, ಬೈಲಪಾರ್, ಕೋಗಿಲಬನ, ಜನತಾ ಕಾಲೋನಿ, ಕುಳಗಿ ರಸ್ತೆ ಹಾಗೂ ಜೆ.ಎನ್. ರಸ್ತೆ (ಪಟೇಲ್ ಸರ್ಕಲ್ನಿಂದ ಬಸ್ ನಿಲ್ದಾಣದವರೆಗೆ) ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ ಸೆಪ್ಟೆಂಬರ್ 3ರಂದು ಅಂಬೇವಾಡಿ, ಕೈಗಾರಿಕಾ ಪ್ರದೇಶ, ಗಣೇಶ ನಗರ, ಸಾಯಿನಗರ, ಮಾರುತಿ ನಗರ, ಗಾಂಧಿನಗರ, 14ನೇ ಬ್ಲಾಕ್, ಗಾಂವಟನ್, ಟೌನ್ಶಿಪ್, ವನಶ್ರೀ ನಗರ, ವಿಜಯನಗರ, ಇವಿಎಸ್, ಕೆಎಚ್ಬಿ ಕಾಲೋನಿ ಹಾಗೂ ಬಸವೇಶ್ವರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರವಾರದ 220 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರವಾರ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಿಗದಿತ ಸಮಯದಲ್ಲಿ ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ಬಳಿಕ ವಿದ್ಯುತ್ ಸರಬರಾಜು ಪುನರಾರಂಭಿಸಲಾಗುವುದು. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕುಮಟಾ, ಹೊನ್ನಾವರ, ದಾಂಡೇಲಿ ಮತ್ತು ಕಾರವಾರ ಹೆಸ್ಕಾಂ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಮನವಿ ಮಾಡಿದ್ದಾರೆ.




