ಮಾದಿಗ ಸಮುದಾಯದಲ್ಲಿ ರಾಜಕೀಯವಾಗಿ ಬೆಳೆಯುತ್ತಿರುವ ಯುವ ನಾಯಕ ರೋನಾಲ್ಡ್ ಅಗಸ್ಟೀನ್ (ಸನ್ನಿ) ಅವರನ್ನು ರಾಯಚೂರು ವಿಭಾಗೀಯ ದಂಡಾಧಿಕಾರಿ (ಸಹಾಯಕ ಆಯುಕ್ತರು) ಗಡಿಪಾರು ಮಾಡಿ ಆದೇಶ ಹೊರಡಿಸಿದ್ದು ರಾಜಕೀಯ ಪ್ರೇರಿತ ದುರುದ್ದೇಶದಿಂದ ಕೂಡಿದೆ ಇದರ ವಿರುದ್ಧ ಕಾನೂನು ಹಾಗೂ ಹೋರಾಟ ರೂಪಿಸುತ್ತೇವೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಜೆ.ಬಿ.ರಾಜು ತಿಳಿಸಿದರು.
ನಗರದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಗುಂಡಾ ಕಾಯಿದೆಯಡಿ ಗಡಿಪಾರು ಮಾಡುವ ಅಧಿಕಾರಿ ಸಹಾಯಕ ಆಯುಕ್ತರಿಗಿಲ್ಲ. ಅಲ್ಲದೆ, ಜಿಲ್ಲಾ ದಂಡಾಧಿಕಾರಿ ಆದೇಶ ಮಾಡಬೇಕಿತ್ತು. ಕೆಲ ಪ್ರಕರಣಗಳಲ್ಲಿ ದುರುದ್ದೇಶದಿಂದ ಸನ್ನಿ ಅವರ ಹೆಸರು ಸೇರಿಸಿದ್ದಾರೆ. ರಾಜಕೀಯ ಪ್ರೇರಿತ ಆದೇಶವಾಗಿದೆ. ಇದರ ಹಿಂದೆ ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಕೈವಾಡವಿದೆ ಎಂದು ಆರೋಪಿಸಿದರು.
ರವಿಬೋಸರಾಜು ಯಾರು ಅವರೇನು ಜನಪ್ರತಿನಿಧಿಯೇ 2014ರಲ್ಲಿ ನಡೆದ ಘಟನೆಯ ವರದಿ ಪೂರ್ಣ ಓದಿ ಪರಿಶೀಲಿಸದೆ ಇಲ್ಲಿನ ಅಧಿಕಾರಿಗಳು ಅವರ ಕೈಗೊಂಬೆಯಂತೆ ಕರ್ತವ್ಯನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದರು.
ಈ ಆದೇಶದ ವಿರುದ್ಧ ವಿವಿಧ ಜಿಲ್ಲೆಗಳಲ್ಲಿರುವ ಮಾನದಂಡ, ರಾಯಚೂರು ಜಿಲ್ಲೆಯಲ್ಲಿ ಈ ಪ್ರಕರಣದಲ್ಲಿ ಮಾಡಿದ ಮಾನದಂಡಗಳನ್ನು ಪರಿಶೀಲಿಸಲು ಹೈಕೋರ್ಟ್‍ನಲ್ಲಿ ಕಾನೂನು ಹೋರಾಟ ಆರಂಭಿಸಿದ್ದೇವೆ. ಅಲ್ಲದೆ, ಸಹಾಯಕ ಆಯುಕ್ತರ ಕಚೇರಿ ಮುಂದೆ ಒಕ್ಕೂಟದಿಂದ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗೊಬ್ಬರ ಕಾಳಸಂತೆ ; 79 ಟನ್ ಯೂರಿಯಾ ಮಾರಾಟ ಆರೋಪ
ಒಕ್ಕೂಟದ ಪದಾಧಿಕಾರಿಗಳಾದ ಕೆ.ಪಿ ಅನಿಲಕುಮಾರ್, ಜನಾರ್ಧನ ಹಳ್ಳಿಬೆಂಚಿ,ಶಿವರಾಜ ಅಕ್ಕರಕಿ, ಹನುಮಂತ ಮನ್ನಾಪುರ ಇದ್ದರು.
