ರಾಯಚೂರು |ಬಿಲ್ ಪಾವತಿಯಲ್ಲಿ ವಿಳಂಬ ; ಶಾಸಕ ಮಾನಪ್ಪ ವಜ್ಜಲ ಮನೆ ಮುಂದೆ ಉಪವಾಸ ಸತ್ಯಾಗ್ರಹ

Date:

Advertisements

ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯ ಉಪಗುತ್ತಿಗೆ ಕೆಲಸ ಪೂರ್ಣಗೊಂಡಿರುವುದರ ನಡುವೆಯೂ ಬಿಲ್ ಪಾವತಿಯಲ್ಲಿ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್ 15 ರಂದು ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ದೇವದುರ್ಗ ತಾಲೂಕು ಸಣ್ಣ ಸಿವಿಲ್ ಗುತ್ತೇದಾರರ ಸಂಘದ ಅಧ್ಯಕ್ಷ ಶರಣೇಗೌಡ ಸುಂಕೇಶ್ವರಹಾಳ ಅವರು ಹೇಳಿದರು.

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯ ಎರಡು ಪ್ಯಾಕೇಜುಗಳ ಒಟ್ಟು 1466 ಕೋಟಿ ಮೊತ್ತದ ಗುತ್ತಿಗೆ ಎನ್.ಡಿ.ವಡ್ಡರ್ ಕಂಪನಿಗೆ ಆಗಿದ್ದು, ಅದರಲ್ಲಿ ದೇವದುರ್ಗ ತಾಲ್ಲೂಕಿನ 17 ಡಿ ಡಿಸ್ಟ್ರಿಬ್ಯೂಟ‌ರ್ ಕಾಲುವೆ ಒಟ್ಟು 13.5 ಕಿ.ಮೀ ಆಧುನೀಕರಣ ಕಾಮಗಾರಿಯನ್ನು ತುಕಾರಾಮ್ ರಾಮಣ್ಣ ಜಿನ್ನಾಪುರ ಅವರಿಗೆ ಎನ್. ಡಿ.ವಡ್ಡರ್ ಕಂಪನಿ ಉಪಗುತ್ತಿಗೆ ನೀಡಿ ಒಪ್ಪಂದ ಮಾಡಿಕೊಳ್ಳಲಾಗಿದೆ. 2024 ಏ.24 ರಂದು 4.87 ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಕಾಮಗಾರಿಗೆ ಒಪ್ಪಂದಕ್ಕೆ ಸಹಿ ಹಾಕಿ ಕಾಮಗಾರಿ ಪೂರ್ಣಗೊಳಿಸಿದರು ಪಾವತಿ ಮಾಡಲು ಸುಮಾರು ಏಳು ತಿಂಗಳಿಂದ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೃಷ್ಣಾ ಭಾಗ್ಯ ಜಲನಿಗಮದ ಅಂದಾಜು ವೆಚ್ಚ ಹಾಗೂ ಎನ್.ಡಿ.ವಡ್ಡ‌ರ್ ಕಂಪನಿಯ ಸಮೇತ ಶರಣೇಗೌಡ ಸುಂಕೇಶ್ವರಹಾಳ, ಪರಮಾನಂದ ಸುಂಕೇಶ್ವರಹಾಳ, ಶಿವು ಸಾಹುಕಾರ, ಅಂಜನೇಯ ಬಡಿಗೇರ್, ವೀರೇಶ ಹೂವಿನಬಾಡು, ಅಮರೇಶ ಕೂಡಿಕೊಂಡು ಉಪಗುತ್ತಿಗೆ ಈಗಾಗಲೇ ಸರ್ಕಾರದಿಂದ ಎನ್.ಡಿ. ಕೆಲಸ ಪೂರ್ಣಗೊಳಿಸಿ ವಡ್ಡ‌ರ್ ಕಂಪನಿಗೆ ಬಿಲ್ ಪಾವತಿಸಲಾಗಿದೆ ಎಂದರು.

ಉಪಗುತ್ತಿಗೆದಾರರಿಗೆ ಕಳೆದ ಏಳು ತಿಂಗಳಿಂದ ಒಂದು ರೂಪಾಯಿ ಬಿಲ್ ನೀಡಿಲ್ಲ. ಕಳೆದ ವರ್ಷಗಳಿಂದ ಕಂಪನಿಯ ಮಾಲೀಕರಾದ ಕರಿಯಪ್ಪ ವಜ್ಜಲ್ ಹಾಗೂ ಶಾಸಕ ಮಾನಪ್ಪ ವಜ್ಜಲ್ ಅವರನ್ನು ಹತ್ತಾರು ಬಾರಿ ಭೇಟಿ ನೀಡಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದರು ಸ್ಪಂದಿಸಲಿಲ್ಲ. ನಮ್ಮ ಕ್ಷೇತ್ರದ ದೇವದುರ್ಗ ಶಾಸಕಿ ಕರಿಯಮ್ಮ ಅವರಿಂದ ನಾಲೈದು ಭಾರಿ ಶಾಸಕ ವಜ್ಜಲ್ ರಿಗೆ ಹೇಳಿಸಿದರೂ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡದೇ ಸುಳ್ಳು ಹೇಳುತಾ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಬಿಲ್ ಪಾವತಿಯಾಗದಿದ್ದರೆ ಶಾಸಕ ಮಾನಪ್ಪ ವಜ್ಜಲ್ ಅವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಧರಣಿ ನಡೆಯಲಿದೆ ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಈ ವೇಳೆ ಸಣ್ಣಸಿವಿಲ್ ಗುತ್ತಿಗೆದಾರರ ಪದಾಧಿಕಾರಿಗಳಾದ ಸಂಘದ ತುಕಾರಾಮ ಜಿನ್ನಾಪುರ, ಅಂಜಿನೇಯ ಬಡಿಗೇರ, ವಿರೇಶ, ಪರಮಾನಂದ ಇನ್ನಿತರರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X