ಕೇಂದ್ರ ಸರಕಾರ ಎನ್.ಪಿ.ಎಸ್ ಹಾಗೂ ಯು.ಪಿ.ಎಸ್ ಅನ್ನು ಹಿಂಪಡೆದು ಒಪಿಎಸ್ ಅನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಸಂಘದ ನಿರ್ದೇಶನದಂತೆ ಕೇಂದ್ರ ಸರ್ಕಾರ ಎನ್.ಪಿ.ಎಸ್ ಹಾಗೂ ಯು.ಪಿ.ಎಸ್ ಅನ್ನು ಜಾರಿಗೆ ತರಲು ಉದ್ದೇಶಿಸಿರುವ ಕ್ರಮವನ್ನು ಹಿಂಪಡೆಯಬೇಕು ಮತ್ತು ಒ.ಪಿ.ಎಸ್ ಜಾರಿಗೊಳಿಸಬೇಕು ಎಂದು ಪ್ರತಿಭಟಿಸಿದರು.
ಸುಮಾರು ವರ್ಷಗಳಿಂದ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವಂತೆ ನಿರಂತರ ಹೋರಾಟ ಮಾಡಿದರು. ಕೇಂದ್ರ ಹಾಗೂ ರಾಜ್ಯ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕೇಂದ್ರ ಸರ್ಕಾರವು ಎನ್.ಪಿ.ಎಸ್ ಯೋಜನೆಯನ್ನು ಬದಲಾಯಿಸಿ, ಏಕೀಕೃತ ಪಿಂಚಣಿ ಯೋಜನೆಯನ್ನು ಯು.ಪಿ.ಎಸ್ ಜಾರಿಗೆ ತರಲು ತೀರ್ಮಾನಿಸಿದೆ. ಸದರಿ ಯೋಜನೆಯು ಸಹ ಷೇರು ಮಾರುಕಟ್ಟೆ ಆಧಾರಿತವಾಗಿದ್ದು, ಸರ್ಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ ಯಾವುದೇ ಭದ್ರತೆಯನ್ನು ಒದಗಿಸುವ ಅಂಶಗಳನ್ನು ಹೊಂದಿರುವುದಿಲ್ಲ ಎಂದು ದೂರಿದರು.
ಈ ಕೂಡಲೇ ಎನ್.ಪಿ.ಎಸ್ ಹಾಗೂ ಯು.ಪಿ.ಎಸ್ ಹಿಂಪಡೆದು, ಹಳೆಯ ಪಿಂಚಣಿ ಜಾರಿಗೊಳಿಸುವಂತೆ ಆಗ್ರಹಿಸಿದರು. ಇಲ್ಲವಾದಲ್ಲಿ ಸಂಘಟನೆ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಸ್ನಾತಕೋತ್ತರ ಪದವಿ ಪ್ರವೇಶ ಶುಲ್ಕ ಕಡಿತಗೊಳಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಮನವಿ
ಈ ಸಂದರ್ಭದಲ್ಲಿ ರಾಯಚೂರು ಎನ್.ಪಿ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆನಂದಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲೀಪ್ ಐನೋರಹಳ್ಳಿ, ತಾಲೂಕು ಅಧ್ಯಕ್ಷ ಮುಜೀಬ್ ರೆಹಮಾನ್, ತಾಲೂಕು ಕಾರ್ಯದರ್ಶಿ ಮಡಿವಾಳಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ರೆಡ್ಡಿ, ತಾಲೂಕು ಅಧ್ಯಕ್ಷ ಮಲ್ಲೇಶ್ ನಾಯಕ್, ಭಿಮೇಶ್ ನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಯ್ಯ ಕ್ಷಿರಲಿಂಗಪ್ಪ, ಸತ್ಯಪ್ಪ ಉಪಾಧ್ಯಕ್ಷ ಸುರೇಶ್, ಕೆಪಿಟಿಸಿಎಲ್ ಶರೀಫ್ , ಪುಷ್ಪಾ, ಭೀಮಾ ನಾಯಕ, ಶಿವರಾಜ, ವೀರೇಶ್, ಕೃಷ್ಣ, ಸಿದ್ಧಲಿಂಗೇಶ, ಚಂದ್ರು ಹಾಗೂ ವಿವಿಧ ಇಲಾಖೆಗಳ ಎನ್.ಪಿ.ಎಸ್ ನೌಕರರು ಇದ್ದರು.
