ಕೋಳಿ ಪಂದ್ಯ ಜೂಜಾಟ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 15 ಜನರನ್ನು ಬಂಧಿಸಿ ರೂ.7350 ನಗದು ಹಾಗೂ 3 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಸೀಮಾದ ಗುಡ್ಡದಲ್ಲಿ ಕೋಳಿ ಪಂದ್ಯ ದಾಳಿಯ ವೇಳೆ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಕೆಲವರನ್ನು ಬಂಧಿಸಿ, ಸ್ಥಳದಿಂದ ಸಾಕ್ಷ್ಯ ವಶಪಡಿಸಿಕೊಂಡಿದ್ದಾರೆ. ಅಕ್ರಮ ಜೂಜಾಟಕ್ಕೆ ಬಳಸಲಾಗುತ್ತಿದ್ದ ಕೋಳಿಗಳನ್ನೂ ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಈ ಸುದ್ದಿ ಓದಿದ್ದೀರಾ? ರಾಯಚೂರು |ಒಳ ಮೀಸಲಾತಿ ಜಾರಿ : ಮಾದಿಗ ಸಮುದಾಯದ ಸಂಭ್ರಮ
ಲಿಂಗಸುಗೂರು ಪಿಎಸ್ ಐ ರಂಗಯ್ಯ ನೇತೃತ್ವದಲ್ಲಿ ದಾಳಿ ನಡೆಸಿದ್ದು ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
