ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಸೆಂಟ್ರಲ್ ಶಾಪ್ ನ 28 ಲೆವಲ್ ( ಅಡಿಯಲ್ಲಿ) ಏರ್ ಬ್ಲಾಸ್ಟ್ ಆಗಿ ಕಲ್ಲು ಅದಿರು ಕುಸಿದುಬಿದ್ದು ಇಬ್ಬರು ಕಾರ್ಮಿಕ ಸಿಲುಕಿದ್ದು ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಶರಣಬಸವ ವೀರಾಪುರ (35) ಸಾವನ್ನಪ್ಪಿದ ಕಾರ್ಮಿಕ ಎಂದು ಹೇಳಲಾಗಿದೆ.ಮಣ್ಣಿನಲ್ಲಿ ಇನ್ನೊಬ್ಬ ಸಿಲುಕಿ ಗಂಭೀರ ಗಾಯಗೊಂಡ ನಿರೂಪಾದಿ ಪಾಮನಕಲ್ಲೂರ ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಬೆಂಗಳೂರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಚ್ಚತಾ ಅಭಿಯಾನಕ್ಕೆ, ಸಾರ್ವಜನಿಕರ ಸಹಕಾರದಿಂದ ನಗರ ಸ್ವಚ್ಛವಾಗಿರುತ್ತದೆ ; ಜಯಣ್ಣ
ಕಲ್ಲು ಅದಿರು ಕುಸಿದು ಬಿದ್ದು ಸಿಲುಕಿರುವ ಮೃತ ದೇಹವನ್ನು ಹೊರ ತರಲು ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗಿದೆ.ಕಳೆದ ವರ್ಷ ಚಿನ್ನದ ಗಣಿ ಕಂಪನಿಯ ಆವರಣದಲ್ಲೇ ಇರುವ ಮಲ್ಲಪ್ಪ ಶಾಫ್ಟ್‌ನ ಭೂಮಿಯ ಕೆಳಮೈ ವಿಭಾಗದಲ್ಲಿ ಬೆಳಗಿನ ಜಾವ 3.30ಕ್ಕೆ ಭೂಕುಸಿತವಾಗಿ ಒಬ್ಬ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.ಪ್ರತಿ ವರ್ಷ ಕಂಪನಿಯಲ್ಲಿ ದುಡಿಯುವ ಕಾರ್ಮಿಕರು ಸಾವು ನೋವುಗಳು ಸಂಭವಿಸಿದರೂ ಕಂಪನಿ ಆಡಳಿತ ಜಾಗೃತ ವಹಿಸುತ್ತಿಲ್ಲ.ಕಾರ್ಮಿಕರಿಗೆ ಯಾವುದೇ ರಕ್ಷಾ ಕವಚಗಳು ಇಲ್ಲದಾಗಿದೆ.ಕಾರ್ಮಿಕನ ಸಾವಿಗೆ ಕಂಪನಿಯ ಆಡಳಿತ ನಿರ್ಲಕ್ಷ್ಯವೇ ಕಾರಣವೆಂದು ಕಂಪನಿ ಕಾರ್ಮಿಕ ಮಾಹಿತಿ ನೀಡಿದರು.

ಮೃತಪಟ್ಟ ಕಾರ್ಮಿಕ