ಕೊಪ್ಪಳದಲ್ಲಿ ನಡೆದ ಪ್ರೀತಿ ವಿಚಾರಕ್ಕೆ ಸಂಬಂಧಿಸಿದ ಕೊಲೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಿಂಧನೂರು ಘಟಕದ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಮಾನವೀಯ ಮೌಲ್ಯಗಳನ್ನು ಹಾಳುಮಾಡುವ ಇಂತಹ ಕ್ರೂರ ಘಟನೆಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ. ಇಂತಹ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.
ಆರೋಪಿಗಳು ಗಾಂಜಾ ಸೇವನೆಯ ನಶೆಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಇಂತಹ ಘಟನೆಯಿಂದ ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ, ಪ್ರಚೋದನೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಸಮಾಜದಲ್ಲಿ ಮೇಲಾಗುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ನಿಗಾ ಹಾಗೂ ಭದ್ರತೆ ವಹಿಸಬೇಕು ಎಂದು ಸಂಘಟನಾಕಾರರು ಆಕ್ರೋಶಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಒತ್ತಾಯ – ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ
ಈ ವೇಳೆ ಸಂಘಟನೆ ತಾಲ್ಲೂಕು ಮುಖಂಡ ಅಬುಸಲೈ ನಾಯ್ಕ , ಇಮ್ತಿಯಾಜ್, ಮನ್ಸೂರು ಅತ್ತಾರ, ಮೆಹಬೂಬ್ ಖಾನ್, ಕರ್ನಾಟಕ ಜನಶಕ್ತಿ ಮುಖಂಡ ಬಸವರಾಜ್ ಬಾದರ್ಲಿ, ಚಿಟ್ಟಿಬಾಬು, ಮಹಾವೀರ ಜೈನ್, ಬಾಬರ ಪಾಷಾ, ಜಾಫರ್ ಅಲಿ, ನದೀಮುಲ್ಲಾ , ಡಾ.ವಸೀಂ, ನೈಮ ಇರ್ಫಾನ್ ,ಇನ್ನಿತರರು ಇದ್ದರು.
