ಯಲಗಟ್ಟಾ ಗ್ರಾಮದಿಂದ ಊಟಿ ಚಿನ್ನದ ಗಣಿ ಕಂಪನಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ಗ್ರಾಮಸ್ಥರು ಹಾಗೂ ರೈತ ಕೂಲಿ ಕಾರ್ಮಿಕರಿಗೆ ಸಂಚಾರದಲ್ಲಿ ಭಾರೀ ಅಸೌಕರ್ಯ ಉಂಟಾಗಿದೆ. ಕಂಪನಿಯ ಅಧಿಕಾರಿಗಳ ವಾಹನಗಳು ಮಾತ್ರ ಸಂಚರಿಸಲು ಅನುಕೂಲವಾಗುತ್ತಿದ್ದರೆ, ಸಾಮಾನ್ಯ ಜನರಿಗೆ ರಸ್ತೆ ಇಲ್ಲದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಲಿಂಗಸಗೂರು ತಾಲೂಕು ಸಮಿತಿಯ ಯಲಗಟ್ಟಾ ಘಟಕದ ವತಿಯಿಂದ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಖ್ಯ ಏಜೆಂಟ್ ಹಾಗೂ ಪ್ರಭಾರಿ ಉಪ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ ಕಡ್ಲೇರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಸ್ತೆಯನ್ನು ತಕ್ಷಣ ದುರಸ್ತಿ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದ್ದು, ರಸ್ತೆ ಸಮಸ್ಯೆ ಬಗೆಹರಿಯದಿದ್ದಲ್ಲಿ ತೀವ್ರ ಹೋರಾಟ ಕೈಗೊಳ್ಳುವುದಾಗಿ ರೈತ ಸಂಘ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈಲಿನಿಂದ ಇಳಿಯುವಾಗ ಬಿದ್ದು : ಕಾರ್ಮಿಕ ಸಾವು
ಈ ವೇಳೆ ಕೆಪಿಆರ್ ಎಸ್ ಲಿಂಗಸೂಗೂರು ತಾಲೂಕು ಸಂಚಾಲರಾದ ನಿಂಗಪ್ಪ ಎಂ ವೀರಾಪೂರು, ತಾಲ್ಲೂಕು ಮುಖಂಡರು ಮಹಾಂತೇಶ, ಗೋಪಾಲ್ ಬಂಡೋಳ್ಳಿ, ಕಾರ್ಮಿಕ ಸಂಘದ ಕಾರ್ಯದರ್ಶಿ ಯಂಕೋಬ ಮಿಯ್ಯಾಪುರ,ಯಲಗಟ್ಟಾ ಗ್ರಾಮದ ಕೆಪಿಆರ್ ಎಸ್ ಅಧ್ಯಕ್ಷರಾದ ನಾಗಪ್ಪ, ಕಾರ್ಯದರ್ಶಿ ಅಂಬಣ್ಣ ಮಾಲಿ ಪಾಟೀಲ್, ಖಜಾಂಚಿಯಾದ ಅಲೇಸಾಬ ಪೂಜಾರಿ, ಭೀಮೇಶ್ ಯಲಗಟ್ಟಾ, ಇತರರು ಇದ್ದರು.