ದೇವದುರ್ಗ ವ್ಯಾಪ್ತಿಯ ಕಲ್ಮಲಾ – ತಿಂಥಿಣಿ ಹೋಗುವ ರಾಜ್ಯ ಹೆದ್ದಾರಿಯ ಮಧ್ಯೆ ಅವೈಜ್ಞಾನಿಕವಾಗಿ ಎರಡು ಟೋಲ್ ಗೇಟ್ ಗಳನ್ನು ನಿರ್ಮಿಸಿ ಕ್ಷೇತ್ರದ ಜನರ ವಸೂಲಿ ಮಾಡುತ್ತಿದ್ದಾರೆ. ಟೋಲ್ ಗೇಟ್‌ಗಳನ್ನು ತೆರವು ಮಾಡುವಂತೆ ಆಗ್ರಹಿಸಿ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟಿಸಿದರು.
ದೇವದುರ್ಗ ಕ್ಷೇತ್ರದಲ್ಲಿ 40 ಕಿಮೀ ಮಧ್ಯೆ ಎರಡು ಟೋಲ್ ಅಳವಡಿಸಲಾಗಿದೆ. ಟೋಲ್ ಗೇಟ್ ತೆರವುಗೊಳಿಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದ್ದೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದರೂ ಟೋಲ್ ತೆಗೆದಿಲ್ಲ ಎಂದು ಅಸಮಾಧಾನಗೊಂಡು ಆಗ್ರಹಿಸಿದರು.
ಟೋಲ್ ಗೇಟ್ ವಿರುದ್ಧ ಹೋರಾಟ ಮಾಡಿದರು ಸ್ಪಂದಿಸಿಲ್ಲ. ನನ್ನ ಬೆಂಬಲಿಗರು ಹೋರಾಟ ಮಾಡಿದರೆ ಕೇಸ್ ದಾಖಲಿಸಲಾಗುತ್ತಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಇವರ ಒತ್ತಾಯದ ಮೇರೆಗೆ ಟೋಲ್ ಗೇಟ್ ತೆರವು ಗೊಳಿಸಲಾಗಿದೆ. ಆದರೆ ದೇವದುರ್ಗ ತಾಲೂಕಿನ ಟೋಲ್ ರದ್ದು ಗೊಳಿಸದೆ ಸರಕಾರ ತಾರತಮ್ಯ ಮಾಡುತ್ತಿದೆ. ಕಲ್ಬುಗಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಿಸಿಲ್ಲ. ದೇವದುರ್ಗ ಕ್ಷೇತ್ರದಲ್ಲಿ 40 ಕಿಮೀ ಮಧ್ಯೆ ಎರಡು ಟೋಲ್ ಅಳವಡಿಸಿ ನನ್ನ ಹೆಸರಿಗೆ ಮಸಿ ಬಳೆಯಲು ದುರುದ್ದೇಶದಿಂದ ಟೋಲ್ ಹಾಕಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ‘ಕೆಸರಲ್ಲಿ ಶಾಲೆಯೋ, ಶಾಲೆಯಲ್ಲಿ ಕೇಸರೋʼ
ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಕೂಡಲೇ ಟೋಲ್ ತಾತ್ಕಲಿಕವಾಗಿ ಬಂದ್ ಮಾಡಲು ಡಿಸಿಗೆ ಸೂಚಿಸಿದರು. ಸಂಬಂದಿಸಿದ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ಭರವಸೆ ನೀಡಿದರು.
