ರೈಲಿನಿಂದ ಇಳಿಯುವಾಗ ಬಿದ್ದು ಯುವಕ ಪ್ರಾಣ ಕಳೆದುಕೊಂಡ ಘಟನೆ ಇಂದು ಬೆಳಿಗ್ಗೆ ನಗರದ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಲ್ಲಿಕಾರ್ಜುನ ತಿಮ್ಮಾಪುರ ಸಿದ್ದಪ್ಪ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತಿಮ್ಮಾಪುರ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.
ಯಶವಂತಪುರ – ನಾಂದೇಡ ರೈಲು ರಾಯಚೂರು ನಗರದ ರೈಲು ನಿಲ್ದಾಣದಲ್ಲಿ ತಲುಪಿದಾಗ ಕಾರ್ಮಿಕ ಇಳಿಯಲು ಯತ್ನಿಸಿದ್ದು, ಅಷ್ಟರಲ್ಲೇ ರೈಲು ಮುಂದೆ ಸಾಗಿದ ಕಾರಣ ಸಮತೋಲನ ಕಳೆದುಕೊಂಡು ಹಳಿ ಮೇಲೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಿರಿಯರ ಆತ್ಮನಿರ್ಭರತೆಗೆ ಚರಕ ಕಲಿಕೆಯ ಆರಂಭ
ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
