ನಗರದ ಗದ್ವಾಲ್ ರಸ್ತೆಯ ಮಡ್ಡಿಪೇಟೆಯ ಬಳಿ ಕಾಕಿನ ಕೆರೆ ಸಮೀಪದ ಚನ್ನಪ್ಪ ಪೆಟ್ರೋಲ್ ಬಂಕ್ ಹಿಂಭಾಗದ ಬಡಾವಣೆಯಲ್ಲಿ ಸಂಜೆ ಸಿಡಿಲು ಆಘಾತದಿಂದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬಡಾವಣೆಯ ನಿವಾಸಿ ಲಕ್ಷ್ಮಿ ವೆಂಕಟೇಶ ಕಬ್ಬೆರ್ ಇವರ ಕಿವಿಗೆ ಸಿಡಿಲಿನ ಪರಿಣಾಮ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೆ ಭಾರೀ ಪ್ರಮಾಣದ ಗುಡುಗು-ಮಿಂಚಿನೊಂದಿಗೆ ಸುರಿದ ಮಳೆಯ ವೇಳೆ ಸಿಡಿಲು ಬಡಿದ ಪರಿಣಾಮ ಮನೆಯೊಂದಕ್ಕೆ ಹಾನಿಯಾಗಿದೆ, ಹಾಗೂ ಸಮೀಪದ ಮರಕ್ಕೂ ಸಹ ಸಿಡಿಲಿನಿಂದ ಹಾನಿಗೊಂಡಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಐಪಿಎಲ್ ಘರ್ಷಣೆ; ಇಬ್ಬರ ಬಂಧನ, 14 ಜನರ ವಿರುದ್ದ ಕೇಸ್ ದಾಖಲು
ಮನೆಯ ಹತ್ತಿರವಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಸಿಡಿಲು ಬಡಿದು ಹಾನಿಯುಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಡಿಲಿನ ಆಘಾತದಿಂದ ಸ್ಥಳೀಯರು ಕೆಲಕಾಲ ಆತಂಕಕ್ಕೊಳಗಾದರು. ಹಾನಿಗೊಳಗಾದ ಮನೆ ಮತ್ತು ನೀರಿನ ಘಟಕದ ಪರಿಶೀಲನೆ ನಡೆಸಿ ಅಗತ್ಯ ನೆರವು ನೀಡುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.





