ನಮ್ಮ ಮನಸ್ಸಿನಲ್ಲಿ ಬಂಧುತ್ವದ ಭಾವನೆ ಬೆಳೆಸಿಕೊಂಡರೆ ಅದು ಸಮಾಜದಾದ್ಯಂತ ಹರಡಿ, ಇಡೀ ದೇಶವೇ ಸಹೋದರತ್ವದ ಸಂದೇಶ ಸಾರುವಂತಾಗುತ್ತದೆ. ಸಮಾನತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮನೋಭಾವದಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲೆಯ ಸಿರವಾರ ತಾಲ್ಲೂಕು ಮಲ್ಲಟ ಗ್ರಾಮದಲ್ಲಿ ಆಯೋಜಿಸಿದ್ದ ಮಾನವ ಬಂಧುತ್ವ ವೇದಿಕೆ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿರುವ ಪ್ರತಿಯೊಬ್ಬರೂ ಮೌಢ್ಯದಿಂದ ಹೊರಬಂದು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಮೇಲು-ಕೀಳು ಎಂಬ ಅಸಹನೆ ಮತ್ತು ಭೇದಭಾವವನ್ನು ತೊರೆದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಮನುಷ್ಯರ ನಡುವೆ ಜಾತಿ, ಧರ್ಮ ಹಾಗೂ ಮೇಲು-ಕೀಳು ಎಂಬ ಭಾವನೆಗಳಿಗೆ ಅವಕಾಶ ನೀಡದೆ, ವೈಜ್ಞಾನಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಕರೆ ನೀಡಿದರು.
ನಂತರ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಯುವ ಮುಖಂಡ ಮೇಶಕ್ ದೊಡ್ಮನಿ, ದೇಶದಲ್ಲಿ ಸಮಾನತಾವಾದಿ ವಿಚಾರಧಾರೆಯನ್ನು ಕುಂಠಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಸಮಾಜದಲ್ಲಿರುವ ಮೌಢ್ಯವನ್ನು ತೊರೆದು ಪ್ರತಿಯೊಬ್ಬರೂ ವೈಚಾರಿಕತೆಯತ್ತ ಸಾಗಬೇಕು. ಶಿಕ್ಷಣದ ಮೂಲಕ ಸ್ವಾಭಿಮಾನವನ್ನು ಬೆಳೆಸಿಕೊಂಡು ಸಮಾನತೆ, ಸಹೋದರತೆ ಹಾಗೂ ಮಾನವ ಬಂಧುತ್ವದ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸಬೇಕು ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸುಲ್ತಾನಪುರದಲ್ಲಿ ಕ್ಷೀರಭಾಗ್ಯ ಯೋಜನೆಯ 37 ಹಾಲಿನ ಪಾಕೆಟ್‌ಗಳ ಸಂಗ್ರಹ: ತನಿಖೆಗೆ ಅಧಿಕಾರಿಗಳ ಸೂಚನೆ
ಈ ವೇಳೆ ಜಿಲ್ಲಾಧ್ಯಕ್ಷ ಶಿವರಾಜ್ ಹರವಿ, ಮಲ್ಲಿಕಾರ್ಜುನ್ ಚಿತ್ರನಾಳ, ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.





