ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ರಾಜಕೀಯ ಒಳಮೀಸಲಾತಿ ನೀಡಬೇಕೆಂದು ದಲಿತ ಸಂಘಟನೆ ಒಕ್ಕೂಟ ಸಂಚಾಲಕ ಎಸ್.ಮಾರೆಪ್ಪ ವಕೀಲ ಆಗ್ರಹಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಪ್ರವರ್ಗವಾರು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆದರೆ ಪರಿಶಿಷ್ಟಜಾತಿಗಳಿಗೆ ರಾಜಕೀಯ ಒಳಮೀಸಲಾತಿ ಜಾರಿಗೊಳಿಸುವ ಅವಶ್ಯಕತೆಯಿದೆ. ರಾಜ್ಯದಲ್ಲಿ 1997 ರಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಬರುವ ಮೂಲಕ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಹಿಂದುಳಿದ ಪ್ರವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಯಿತು. ಆದರೆ ಮೂಲ ಅಸ್ಪೃಶ್ಯರು ಮಾತ್ರ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗುವಂತಾಯಿತು.
ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ವ್ಯವಸ್ಥಿತವಾಗಿ ಸಮೂದಾಯಗಳಿಗೆ ರಾಜಕೀಯ ಅಧಿಕಾರದಿಂದ ವಂಚಿತಗೊಳಿಸುವ ಹುನ್ನಾರಗಳು ನಡೆಯುತ್ತಲೇ ಇವೆ. ನಿರ್ದೇಶನವೆಂಬಂತೆ ರಾಯಚೂರು ತಾಲೂಕಿನ ಬಾಯಿದೊಡ್ಡಿ, ಬಾಪುರು, ಕಮಲಾಪುರು, ಗಣಮೂರು ಸೇರಿದಂತೆ ಅನೇಕ ಪಂಚಾಯ್ತಿಗಳಲ್ಲಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೇಟ್ ನೀಡಿ ಮಾದಿಗ, ಛಲವಾದಿ ಸಮೂದಾಯಗಳಿಗೆ ಅಧಿಕಾರದಿಂದ ದೂರ ಇಡುವ ಕೆಲಸಗಳು ನಡೆದಿವೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿಯೂ ಎಸ್ಸಿ ಮೀಸಲು ಕ್ಷೇತ್ರವಾದರು ಅಸ್ಪೃಶ್ಯರಿಗೆ ಟಿಕೇಟ್ ನೀಡದೆ ವಂಚಿಸಲಾಗಿದೆ. ಜಿಲ್ಲಾ, ತಾಲೂಕ ಮತು ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಳಮೀಸಲು ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುತ್ತದೆ ಎಂದರು.
ಮತ್ತೋರ್ವ ಸಂಚಾಲಕ ರವೀಂದ್ರನಾಥ ಪಟ್ಟಿ ಮಾತನಾಡಿ, ಮೀಸಲಾತಿ ಅವಕಾಶವಿದ್ದರೂ ಹಕ್ಕು ಕಸಿದುಕೊಳ್ಳುವ ಕೆಲಸ ಎಲ್ಲ ರಾಜಕೀಯ ಪಕ್ಷಗಳು ಮಾಡುತ್ತಲೇ ಬಂದಿವೆ. ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಅಸ್ಪೃಶ್ಯರಿಗೆ ಟಿಕೆಟ್ ನೀಡಿ ರಾಜಕೀಯ ಅಧಿಕಾರವೇ ಇಲ್ಲದಂತೆ ಮಾಡಿರುವ ಅನೇಕ ನಿದರ್ಶನಗಳಿವೆ. ಕೆಲವಡೆ ನಮ್ಮವರೇ ಸಚಿವರಾಗಿದ್ದರೂ ಸಮೂದಾಯಗಳಿಗೆ ನ್ಯಾಯಕೊಡಿಸುವ ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ಘಟನೆಗಳು ನಡೆದರೂ ಗೃಹಸಚಿವರು ಭರವಸೆ ನೀಡುತ್ತಿದ್ದಾರೆ ಹೊರತು ಕೆಲಸ ಮಾಡುತ್ತಿಲ್ಲ. ಸರ್ಕಾರ ರಾಜಕೀಯ ಒಳಮೀಸಲಾತಿ ನೀಡುವ ಮೂಲಕ ಸಂವಿಧಾನ ಆಶಯ ಪಾಲಿಸಬೇಕೆಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಸರಾ ವೇಳೆ ದಲಿತ ಸಚಿವರನ್ನು ತಡೆದ ಆರೋಪ: ಮೈಸೂರು ಎಸ್‌ಪಿ ವಿರುದ್ಧ ಕ್ರಮಕ್ಕೆ ಹನುಮಂತಪ್ಪ ಮನ್ನಾಪುರಿ ಆಗ್ರಹ
ಈ ಸಂದರ್ಬದಲ್ಲಿ ಮುಖಂಡರುಗಳಾದ ಹೇಮರಾಜಅಸ್ಕಿಹಾಳ, ನರಸಿಂಹಲ ಮರ್ಚಟ್ಹಾಳ, ನರಸಿಂಹಲು ನೆಲಹಾಳ, ಆಂಜಿನೇಯ್ಯ ಕುರಬದೊಡ್ಡಿ, ಆಂಜಿನೇಯ್ಯ ಉಟ್ಕೂರು, ವಿಶ್ವನಾಥ ಪಟ್ಟಿ, ಲಕ್ಷ್ಮಣ ಕಲ್ಲೂರು ಇದ್ದರು.





