ಬಳ್ಳಾರಿಯ ತೋರಣಗಲ್ ಗ್ರಾಮದ ಸರ್ವೆ ನಂಬರ್ 60ರಲ್ಲಿ ಪೊಲೀಸ್ ಇಲಾಖೆಗೆ ಭೂಮಿ ನೀಡುವುದು ಸರಿಯಲ್ಲ, ಬದಲಾಗಿ ಆ ಜಾಗದಲ್ಲಿ ಐಟಿಐ ಹಾಗೂ ಪಿಯುಸಿ ಕಾಲೇಜು ನಿರ್ಮಾಣ ಮಾಡಿಕೊಡಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ.
ಸಂಡೂರು ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಪೋಲೀಸ್ ಇಲಾಖೆಗೆ ಕೊಡಲು ಯೋಜಿಸಿರುವ ಜಾಗದಲ್ಲಿ ಕಾಲೇಜು ನಿರ್ಮಿಸಬೇಕೆಂದು ಒತ್ತಾಯಿಸಿರುವ ಎಸ್‌ಎಫ್‌ಐ ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಎಸ್‌ಎಫ್‌ಐ ರಾಜ್ಯ ಸಮಿತಿ ಸದ್ಯಸ್ಯ ಶಿವರೆಡ್ಡಿ ಮಾತನಾಡಿ, “ತೋರಣಗಲ್ಲು ಗ್ರಾಮದಲ್ಲಿ ಬೃಹತ್ ಕೈಗಾರಿಕೆಗಳು ನೆಲೆಯೂರಿದ್ದು, ಶಿಕ್ಷಣಕ್ಕಾಗಿ ಸುತ್ತ ಮುತ್ತ ಇರುವ ವಿದ್ಯಾರ್ಥಿಗಳು ಬಳ್ಳಾರಿ ಮತ್ತು ಹೊಸಪೇಟೆಯಂತ ದೂರದ ಊರುಗಳಿಗೆ ಹೋಗುವ ಅನಿವಾರ್ಯ ಎದುರಾಗಿದೆ. ಇದನ್ನ ಗಮನಸಿ ಎಸ್‌ಎಫ್‌ಐ ಸರ್ಕಾರಿ ಐಟಿಐ ಹಾಗೂ ಪಿಯುಸಿ ಕಾಲೇಜು ಸ್ಥಾಪಿಸಬೇಕೆಂದು ಪತ್ರ ಬರೆದಿದೆ. ಅದರ ಭಾಗವಾಗಿ ಸರಕಾರ ತೋರಣಗಲ್ ಗ್ರಾಮಕ್ಕೆ ಐಟಿಐ ಸ್ವತಂತ್ರ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿದೆ. ಕಾಲೇಜು ಕಟ್ಟಡವನ್ನು ಸಂಡೂರಿನ ಮುಖ್ಯ ರಸ್ತೆ ಹೋಗುವ ಸರ್ವೆ ನಂಬರ್ 60ರಲ್ಲಿ ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.
ಎಸ್‌ಎಫ್ಐ ಕಾಲೇಜು ಘಟಕದ ಅಧ್ಯಕ್ಷ ಗುಣಶೇಖರ್ ಮಾತನಾಡಿ, “ಸರ್ಕಾರ ಈಗಾಗಲೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜನ್ನು ಗ್ರಾಮದಲ್ಲಿ 2.85 ಎಕರೆ ಜಮೀನನ್ನು ನೀಡಿದ್ದು ಈಗ ಸರ್ಕಾರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜ್‌ಗೆ ನೀಡಿದ್ದು, ಅದನ್ನು ರದ್ದು ಪಡಿಸಿ, ಪೊಲೀಸ್ ಇಲಾಖೆಗೆ ನೀಡಬಬೇಕೆನ್ನುವ ಒಳ ಸಂಚು ನಡೆಸುತ್ತಿದೆ. ಸರಕಾರ ಈ ಕೂಡುಲೆ ಅಂತ ನಿರ್ಧಾರ ಕೈಬಿಟ್ಟು ಗ್ರಾಮದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ ಪೊಲೀಸ್ ಇಲಾಖೆಗೆ ಕೊಡುಲು ನಿರ್ಧರಿಸಿರುವ ಸ್ಥಳದಲ್ಲೇ ಕಾಲೇಜನ್ನು ನಿರ್ಮಾಣ ಮಾಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಳ್ಳಾರಿ | ಸರ್ಕಾರಿ ವೈದ್ಯಕೀಯ ಕಾಲೇಜುಗಳ NRI ಕೋಟಾ ರದ್ದತಿಗೆ AIDSO ಆಗ್ರಹ
ಕಾರ್ಯದರ್ಶಿ ಹರ್ಷ ಮಾತನಾಡಿ, “ಪೋಲಿಸ್ ಇಲಾಖೆಗೆ ಈಗಾಗಲೇ ಪೊಲೀಸ್ ಇಲಾಖೆಗೆ ಸರ್ವೇ ನಂ 198ರಲ್ಲಿ 2.92 ಎಕರೆ ಭೂಮಿಯಲ್ಲಿ ಪೊಲೀಸ್ ವಸತಿ ಗೃಹಗಳು, ಸರ್ವೇ ನಂ. 59ರಲ್ಲಿ ಇಲಾಖೆಗೆ 1.28 ಭೂಮಿ ನೀಡಿದ್ದು ಇಷ್ಟೆಲ್ಲ ಭೂಮಿ ಇದ್ದರೂ ಪುನಃ ಪೊಲೀಸ ಇಲಾಖೆಗೆ ಭೂಮಿ ನೀಡುವುದು ಖಂಡನಿಯ. ಒಂದು ವೇಳೆ ಭೂಮಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದೆ ಆದರೆ, ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಅನಿರ್ದಿಷ್ಟವಾದ ಧರಣಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ವೇಳೆ ಸಹಕಾರ್ಯದರ್ಶಿ ಲೋಕೇಶ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ತಾಲೂಕು ಕಾರ್ಯದರ್ಶಿ ನಾಗಭೂಷಣ್, ಡಿಎಚ‌್‌ಎಸ್ ಮುಖಂಡರಾದ ಎ ಸ್ವಾಮಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿಯಾದ ಚನ್ನಬಸಯ್ಯ, ಮುಖಂಡರಾದ ಅರ್ಚನಾ, ಸಂಗೀತ, ಶ್ರಾವಣಿ, ಅಸ್ಮಿತಾ, ಕೀರ್ತಿ, ಸಂಗೀತ, ಹಾಗೂ ಇತರರು ಉಪಸ್ಥಿತರಿದ್ದರು.