ನಿಖಿಲ್ ಕುಮಾರ ಸ್ವಾಮಿಯವರೇ ನೀವು ನಿಜವಾಗಿಯೂ ನೈತಿಕ ಬೆಂಬಲ ಸೂಚಿಸ ಬೇಕಾಗಿರುವುದು ಪ್ರಜ್ವಲ್ ರೇವಣ್ಣರಿಂದ ಅನ್ಯಾಯಕ್ಕೊಳಗಾದ ಮಹಿಳಾ ಸಂತ್ರಸ್ತ್ರರಿಗೆ, ಯಾಕಂದ್ರೆ ಅಲ್ಲಿ ಅವರನ್ನು ಕಾಪಾಡಲು ಅಣ್ಣಪ್ಪ ಸ್ವಾಮಿಯೂ ಇಲ್ಲಾ ಹಾಗೇ ಮಂಜುನಾಥ ಸ್ವಾಮಿಯೂ ಇಲ್ಲಾ, ಇಲ್ಲಿ ನೀವು ಹೇಳಿದ ಧರ್ಮಾಧಿಕಾರಿಯವರನ್ನು ಕಾಪಾಡಲು ಪಕ್ಕದಲ್ಲೇ ಅಣ್ಣಪ್ಪ ಸ್ವಾಮಿಯೂ ಇದ್ದಾನೆ ಮತ್ತೆ ಮಂಜುನಾಥ ಸ್ವಾಮಿಯೂ ಇದ್ದಾನೆ. ಹಾಗಾಗಿ ಸದಾ ಅವರನ್ನು ಕಾಪಾಡುತ್ತಾರೆ ಎಂದು ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.
ನಿನ್ನೆ ದಿನ ಧರ್ಮಸ್ಥಳದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಧರ್ಮಸ್ಥಳ ಯಾತ್ರೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸತ್ಯ ಯಾತ್ರೆ ಹೊಳೆನರಸೀಪುರಕ್ಕೆ ಯಾಕೆ ಹೋಗಿಲ್ಲಾ ? ಅನ್ಯಾಯವಾಗಿ ಬಡವರ, ದುರ್ಬಲರ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಮ್ಮ ಕಾಲ ಬುಡದಲ್ಲೇ ಆಯಿತಲ್ಲಾ ಅದು ತಮಗೆ ಕಾಣಿಸಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಆ ಅಮಾಯಕ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಲು, ಸಾಂತ್ವಾನ ಹೇಳಲು ತಾವು ಯಾವ ಯಾತ್ರೆ ಕೈಗೊಂಡಿರಿ ? ಹಾಗೆಯೇ ಧರ್ಮಾಧಿಕಾರಿಗಳು ನೊಂದಿದ್ದಾರೆ ಅವರಿಗೆ ನೖತಿಕ ಬೆಂಬಲ ಸೂಚಿಸಲು ಬಂದಿದ್ದೇವೆ ಎಂದಿರಲ್ಲಾ.
ಅಲ್ಲಿ ನಿಮ್ಮ ದೊಡ್ಡಪ್ಪ ಮಗನಿಂದಾಗಿ ತುಂಬಾ ನೊಂದಿದ್ದಾರೆ, ನೋವಿನ ಕೊರಗಿನಲ್ಲೇ ಕಾಲ ಕಳೆಯುತ್ತಿದ್ದಾರೆ ಅವರಿಗೇಕೆ ನೖತಿಕ ಬೆಂಬಲ ತುಂಬಲು ತಮ್ಮ ಸತ್ಯ ಯಾತ್ರೆ ಹೋಗಿಲ್ಲಾ ? ಎಂದು ಮಾಧ್ಯಮದ ಮೂಲಕ ಪ್ರಶ್ನಿಸಿದ್ದಾರೆ.