ಶಿವಮೊಗ್ಗ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ಚಾಲಕರಿಗೆ ಸಿಂಹ ಸ್ವಪ್ನ ಆಗಿರುವ ಜೊತೆಗೆ ದಿನ ನಿತ್ಯ ಶಿವಮೊಗ್ಗ ನಗರದಲ್ಲಿ ವಾಹನ ಸವಾರರಿಗೆ ಅನುಕೂಲವಾಗಲೆಂದು ಪ್ರಾಮಾಣಿಕ ಕರ್ತವ್ಯ ಮಾಡುತ್ತಿರುವ,
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿಕೊಡಲು ಸಾಕಷ್ಟು ಒಳ್ಳೆ ಒಳ್ಳೆಯ ಕೆಲಸ ಮಾಡುತ್ತ ಬಂದಿರುವ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತೊಮ್ಮೆ ಸುದ್ದಿಯಲ್ಲಿದ್ದು ಈ ಬಾರಿ ವಿಶೇಷ ಏನಂದರೆ,
ಮಧ್ಯಪಾನ ಮಾಡಿ ಆಂಬುಲೆನ್ಸ್ ಚಲಾಯಿಸಿದ ಚಾಲಕನಿಗೆ ಪಿಎಸ್ಐ ತಿರುಮಲೇಶ್ ರಿಂದ ಚಾಲಕನಿಗೆ 10,000₹ ದಂಡ ಬಿದ್ದಿದೆ .
ದಿ: 25/08/2025 ರಂದು ಮದ್ಯಪಾನ ಮಾಡಿ ಆಂಬ್ಯುಲೆನ್ಸ್ ಚಲಾಯಿಸಿದ ವಾಹನ ಚಾಲಕನ ವಿರುದ್ದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ತಿರುಮಲೇಶ್ ಮತ್ತು ಅವರ ಸಿಬ್ಬಂದಿಗಳಾದ ಹೆಚ್ ಸಿ ರಾಜಾಸಾಬ್ & ಪಿಸಿ ಸುರೇಶ್ ರವರು ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು.
ಅದರಂತೆ 4th ACJ & JMFC ನ್ಯಾಯಾಲಯ ಶಿವಮೊಗ್ಗ ಆಂಬ್ಯುಲೆನ್ಸ್ ಚಾಲಕನಿಗೆ 10,000/- ದಂಡ ವಿಧಿಸಿರುತ್ತದೆ.
ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದೂ ಅದರಂತೆ ನಗರದ ಪ್ರಜ್ಞಾವಂತ ಜನತೆ ತಿರುಮಲೇಶ್ ಅವರ ಕರ್ತವ್ಯಕ್ಕೆ ಫಿದಾ ಆಗಿದ್ದು. ಇದೆ ರೀತಿ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮುಂದುವರಿಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.