ಶಿವಮೊಗ್ಗ ನಗರದಲ್ಲಿ ನಾಳೆ (ಸೆ.15) ರಂದು ಸೋಮವಾರ ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಅದರ ನಿಮಿತ್ತ ನಗರದ ಪ್ರಮುಖ ವೃತ್ತಗಳು, ರಸ್ತೆಗಳನ್ನು ಹಸಿರು ಬಂಟಿಗ್ಸ್ ತೋರಣದ ಮೂಲಕ ಶೃಂಗರಿಸಲಾಗಿದೆ.

ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ನಗರದ ಸುನ್ನಿ ಜಮಾಯಿತಿ ಉಲ್ಟಾ ಕಮಿಟಿ ಯು ಮೆರವಣಿಗೆಗೆ ಸಜ್ಜಾಗಿದೆ. ಶಾಂತಿಯುತ ಮತ್ತು ಸೌಹಾರ್ದಯುತ ಮೆರವಣಿಗೆ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ಸರಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಸೇರುವ ನಿರೀಕ್ಷೆಯಿದೆ.
ಮೆರವಣಿಗೆಯು ಸೆ.15 ರಂದು ಮಧ್ಯಾಹ್ನ 3.00 ನಗರದ ಗಾಂಧೀಬಜಾರ್ ನ ಜಾಮೀಯಾ ಮಸೀದಿ ಮುಂಭಾಗದಿಂದ ಶುರುವಾಗಿ, ಲಷ್ಕರ್ ಮೊಹಲ್ಲಾ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಸರ್ಕಲ್, ಬಿಎಚ್, ರಸ್ತೆ, ನೆಹರು ರಸ್ತೆ, ಮಾರ್ನಮಿ ಬೈಲ್, ಕೆ.ಆರ್. ಪುರಂ ರಸ್ತೆ ಮೂಲಕ ಸಾಗಲಿದೆ.
ರಾತ್ರಿ 9.00 ಗಂಟೆಯಿಂದ 10.00 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಸಮಾಜದ ಗಣ್ಯರನ್ನು, ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ರಾತ್ರಿ 10.00 ರಿಂದ ಮೌಲನಾ ಅವರ ಕಾರ್ಯಕ್ರಮಗಳು ನಡೆಯಲಿವೆ.

ಹಿಂದೂ ಮಹಾ ಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಭದ್ರತೆ ಒದಗಿಸಿದ ರೀತಿಯಲ್ಲೇ ಈದ್ ಮೆರವಣಿಗೆಗೂ ಜಿಲ್ಲಾ ಪೊಲೀಸ್ ಇಲಾಖೆ ಭದ್ರತೆ ಒದಗಿಸಲಿದ್ದು, ಯಾವುದೇ ಅಹಿತಕ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸಲು ಸಜ್ಜಾಗಿದೆ.