ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸುದ್ದಿ ಸಹ್ಯಾದ್ರಿ ಬಳಗವು ಫೆ. 24ರಂದು ನಟ ಡಾ. ರಾಜ್ ಕುಮಾರ್ ರವರ ನೆನಪಿನ ಅಂಗವಾಗಿ ಡಾ.ರಾಜ್ ನಟಿಸಿದ ಹಾಗೂ ಹಾಡಿದ ಹಾಡುಗಳ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಈ ಸ್ಪರ್ಧೆಗಳು ನಾಲ್ಕು ವಿಭಾಗದಲ್ಲಿ ನಡೆಯಲಿದ್ದು, 10 ವರ್ಷದಿಂದ 18 ವರ್ಷ, 19ರಿಂದ 30 ವರ್ಷದವರು, 30 ವರ್ಷ ಮೇಲ್ಪಟ್ಟು ಜೋಡಿ ಸುತ್ತು ಹೀಗೆ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಮತ್ತು ಅವಾರ್ಡ್‌ಜೊತೆಗೆ, ಸಹ್ಯಾದ್ರಿ ಗಾನ ಸಿರಿ-2024 ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕರು ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಇನ್ನಿತರರು ನಟ, ನಟಿಯರು ಆಗಮಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ವಿಶೇಷ ತೀರ್ಪುಗಾರರಿರುತ್ತಾರೆ. ರಸಮಂಜರಿ ಗಾಯಕರಿಗೆ ಅವಕಾಶವಿರುವುದಿಲ್ಲ. ಸ್ಪರ್ಧಿಗಳು ದಿನಾಂಕ ಫೆ.20ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಹ್ಯಾದ್ರಿ ಗಾನ ಸಿರಿ ಪ್ರಕಟಣೆಯಲ್ಲಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ರಾಘವೇಂದ್ರ ತಾಳಗುಪ್ಪ: 8123824626, ವಸಂತ: 9738123234, 990172149, 8884268889 ಸಂಪರ್ಕಿಸಬಹುದಾಗಿದೆ.