ಶಿವಮೊಗ್ಗ | ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಮುನ್ನುಗ್ಗಬೇಕು: ಚಿಂತಕ ಜಿ ಎನ್ ನಾಗರಾಜ್

Date:

Advertisements

ಸಂವಿಧಾನದ ರಕ್ಷಣೆಗಾಗಿ ನಾವೆಲ್ಲರೂ ಮುನ್ನುಗ್ಗಿ ನಡೆಯಬೇಕಿದೆ. ಏಕೆಂದರೆ ನಾವುಗಳು ಮತ್ತೊಮ್ಮೆ ಗುಲಾಮಗಿರಿಗೆ ಸಿಕ್ಕಿಕೊಳ್ಳುವ ಅಪಾಯಕಾರಿ ವಾತಾವರಣ ನಮ್ಮ ಮುಂದಿದೆ ಎಂದು ಚಿಂತಕ ಮತ್ತು ಬರಹಗಾರ ಜಿ ಎನ್ ನಾಗರಾಜ್ ಕಳವಳ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕುವೆಂಪು ವಿಶ್ವವಿದ್ಯಾಲಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಐಕ್ಯೂಎಸಿ ಮತ್ತು ರಾಜ್ಯಶಾಸ್ತ್ರ ವಿಭಾಗ ಜೊತೆಗೆ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ʼಸಂವಿಧಾನದ ಸುತ್ತಾಮುತ್ತʼ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಗುಲಾಮಗಿರಿಯನ್ನು ಕಳೆದುಕೊಂಡು ಸಾಮಾಜಿಕವಾಗಿ ಗಟ್ಟಿ ನೆಲೆಗಟ್ಟಿನಲ್ಲಿ ಬದುಕುವ ಆಯುಧವೇ ಸಂವಿಧಾನ. ಜಾತಿ ವಿನಾಶ ಮಾಡಿ ಜಾತ್ಯತೀತವಾಗಿ ಬದುಕುವ ಹಕ್ಕುಗಳನ್ನು ಹಿಂದುಳಿದ ವರ್ಗಗಳಿಗೆ ನೀಡಿರುವುದು ಸಂವಿಧಾನವೇ ವಿನಹ ಬೇರೆ ಯಾವುದೇ ಧರ್ಮ ಗ್ರಂಥಗಳಲ್ಲ” ಎಂದು ಹೇಳಿದರು.

Advertisements

“ಪ್ರಜಾಪ್ರಭುತ್ವ ಸಂವಿಧಾನದ ತಳಹದಿಯಲ್ಲಿ ನಿಂತಿದೆ. ಈ ಕಾರಣದಿಂದ ನಾವು ಎಲ್ಲ ರೀತಿಯ ಹಕ್ಕುಗಳನ್ನು ಸರ್ಕಾರದಿಂದ ಪಡೆಯುತ್ತಿದ್ದೇವೆ. ಸರ್ಕಾರವನ್ನು ನಾವೇ ಆರಿಸುತ್ತಿದ್ದೇವೆ. ಆರಿಸಿ ಹೋದ ಜನಪ್ರತಿನಿಧಿಗಳು ಸಂವಿಧಾನದ ಬಗ್ಗೆ ತಾತ್ಸಾರ ಹೊಂದಿದ್ದಾರೆ. ಅದರ ನಾಶಕ್ಕೆ ಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂವಿಧಾನವನ್ನು ಉಳಿಸಬೇಕು. ಅದರ ರಕ್ಷಣೆಗೆ ಒಂದಾಗಿ ಮುನ್ನುಗ್ಗಬೇಕು. ಇಲ್ಲದಿದ್ದರೆ ಮನುಸ್ಮೃತಿ ಈ ದೇಶಕ್ಕೆ ಮತ್ತೊಮ್ಮೆ ಜಾರಿಯಾಗುವ ಸಂಭವವಿದ್ದು, ವಿದ್ಯೆಯಿಲ್ಲದೆ, ವಸತಿ ಇಲ್ಲದೆ, ಭೂಮಿ ಇಲ್ಲದೆ, ಇನ್ನೂ ಯಾವುದೇ ರೀತಿಯ ಬದುಕುವ ಹಕ್ಕುಗಳು ನಮಗೆ ದೊರೆಯದೆ, ನಾವುಗಳು ಗುಲಾಮಗಿರಿಗೆ ಒಳಗಾಗುತ್ತೇವೆ” ಎಂದು ಎಚ್ಚರಿಕೆ ನೀಡಿದರು.

“ಬ್ರಾಹ್ಮಣ್ಯದ ವ್ಯವಸ್ಥೆ ಈ ದೇಶದಲ್ಲಿ ವರ್ಣಾಶ್ರಮ ಜಾರಿಗೆ ತಂದ ಪರಿಣಾಮ ಇಂದಿಗೂ ವರ್ಣಾಶ್ರಮ ಪದ್ಧತಿ ಜೀವಂತವಿದೆ. ದೇಶದಲ್ಲಿ ಕುವೆಂಪು, ಪ್ರಜಾಪ್ರಭುತ್ವ ಆದಿಕವಿಗಳು ಗುಡಿ-ಚರ್ಚು-ಮಸೀದಿಗಳನ್ನು ಬಿಟ್ಟು ಹೊರಬನ್ನಿ ಎಂದರು. ಆದರೆ ಇಂದಿಗೂ ಸಹ ಬ್ರಾಹ್ಮಣ್ಯೀಕರಣದ ಮತ್ತು ಪುರೋಹಿತಶಾಹಿಗಳ ವ್ಯವಸ್ಥೆಯಲ್ಲಿ ನಾವುಗಳು ಗುಡಿಗುಡಾರಗಳನ್ನು ಸುತ್ತು ಹಾಕುವ ಕೆಲಸ ಮಾಡುತ್ತಿದ್ದೇವೆ. ಇವುಗಳ ಚಿಂತನೆಗೆ ನಾವುಗಳು ಮುಂದಾಗಬೇಕು. ದೇಶದಲ್ಲಿ ಬ್ರಾಹ್ಮಣರಿಗೆ ಭೂಮಿಯನ್ನು ಹಂಚಲಾಗಿದೆ. ಬದಲಿಗೆ ಇನ್ನುಳಿದ ಜನತೆ ಅವರ ಸೇವೆ ಮಾಡಿಕೊಂಡಿರಬೇಕು. ಅವರು ದೈವ ಸಮಾನರು ಎಂಬ ನಂಬಿಕೆಯನ್ನು ಇಟ್ಟಿರಬೇಕು. ಇವುಗಳ ಮೂಲಕ ಶೂದ್ರ ಸಮುದಾಯವನ್ನು ಅಭಿವೃದ್ಧಿ ಹೊಂದಲು ಬಿಡದೆ, ಗುಲಾಮರನ್ನಾಗಿಸುತ್ತಿದ್ದಾರೆ. ಇವುಗಳಿಂದ ಹೊರಬರಲು ಸಂವಿಧಾನವೇ ನಮಗೆ ದಾರಿ” ಎಂದು ಜಿ ಎನ್ ನಾಗರಾಜ್ ಹೇಳಿದರು.

“ದೇಶದಲ್ಲಿ ಅನೇಕ ಕೋಮುಗಲಭೆಗಳು ಸ್ವಾತಂತ್ರ್ಯದ ನಂತರವೂ ನಡೆಯುತ್ತಿವೆ. ಅನೇಕ ಜೀವಗಳು ಇದಕ್ಕಾಗಿ ಬಲಿಯಾಗಿವೆ. ಅವರೆಲ್ಲರೂ ಕೆಳಸ್ತರದ ವ್ಯಕ್ತಿಗಳಾಗಿರುವುದು ಅತ್ಯಂತ ದುರಂತವಾಗಿದೆ. ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿವೆ. ಆದರೆ ಭಾರತದ ಸಂವಿಧಾನವನ್ನು ನಾವು ಗಟ್ಟಿಯಾಗಿ ನೆಲೆಗೊಳಿಸಿದ ಕಾರಣ ನಮ್ಮ ದೇಶದಲ್ಲಿ ಇಂದಿಗೂ ಸಹ ಹಂತ ಹಂತವಾಗಿ ಜಾತಿ ವೈಷಮ್ಯಗಳು, ಧರ್ಮ ವೈಷ್ಣವ್ಯಗಳು ಕಡಿಮೆಯಾಗಿದ್ದವು. ಆದರೆ ಈ ದೇಶದ ಹಿಡಿತ ಕೈ ತಪ್ಪುವುದೆಂದು ಮೇಲ್ವರ್ಗದವರು ಸಂವಿಧಾನವನ್ನು ದಿನೇ ದಿನೆ ಕ್ಷೀಣಿಸುವಂತೆ ಮಾಡಿ ಖಾಸಗೀಕರಣದತ್ತ ಮುಖ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದರೂ ನಮಗಿದು ತಿಳಿಯದಾಗಿದೆ. ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸಂವಿಧಾನವನ್ನು ಉಳಿಸಿಕೊಂಡರೆ ದೇಶ ಉಳಿಯುತ್ತದೆ. ಬಡಜನರು ಉಳಿಯುತ್ತಾರೆ. ಹಾಗೆಯೇ ಶೋಷಣೆಯಿಂದ ಮುಕ್ತ ಸಮಾಜವನ್ನು ಕಟ್ಟಬಹುದು” ಎಂದು ಹೇಳಿದರು.

“ಸಂವಿಧಾನದಲ್ಲಿ ಮೀಸಲಾತಿ ಇದೆ. ಆದರೆ ಬರಬರುತ್ತಾ ಎಲ್ಲ ಸಂಸ್ಥೆಗಳನ್ನು ಖಾಸಗೀಕರಣಕ್ಕೆ ನೀಡಿ ಆ ಸಂಸ್ಥೆಗಳಲ್ಲಿ ಮೇಲ್ವರ್ಗದವರಿಗೆ ಮಾತ್ರ ಉದ್ಯೋಗ ಸಿಗುವಂತೆ ಮಾಡಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮುನ್ನ ನಾವುಗಳು ಜಾಗೃತರಾಗದಿದ್ದರೆ ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದ ರೀತಿ ಆಗುತ್ತದೆ” ಎಂದು ಹೇಳಿದರು.

“ಗಣ ಎಂದರೆ ನಾವು ದೇವರು ಅಥವಾ ಗುಂಪು ಎಂದು ತಿಳಿಯುತ್ತೇವೆ. ಗಣ ಎಂದರೆ ಸರಿಯಾದ ಅರ್ಥ ಜನ. ಗಣರಾಜ್ಯ ಎಂದರೆ ಜನರ ರಾಜ್ಯ, ದೇಶದಲ್ಲಿ ಭಾರತೀಯರ ಸಂವಿಧಾನ ಇದೆಯೇ ಹೊರತು ಒಂದು ವರ್ಗದವರ ಸಂವಿಧಾನ ಇಲ್ಲಿ ಇಲ್ಲ. ಈಗಾಗಲೇ ಅನೇಕ ದೇಶಗಳು ಅಂಬೇಡ್ಕರ್ ಎನ್ನುವ ವಿಶ್ವರತ್ನ ನಮ್ಮ ದೇಶದಲ್ಲಿ ಜನ್ಮ ತಾಳಬೇಕಿತ್ತು ಎಂದು ಹೇಳಿರುವುದನ್ನೂ ನಾವು ಸ್ಮರಿಸಬಹುದು. ಮನುಸ್ಮೃತಿಗೆ ಶವಸಂಸ್ಕಾರ ಮಾಡಿದ ದಿನವೇ ಪ್ರಜಾಪ್ರಭುತ್ವದ ಉದಯವಾಯಿತು. ಅದನ್ನು ಅಂಗೀಕರಿಸಿ ಜಾರಿಗೊಳಿಸುವ ಕೇವಲ ಎರಡು ತಿಂಗಳ ಸಮಯದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯಲ್ಲಿ ಶ್ರೀರಾಮನ ಮೂರ್ತಿ ಸ್ಥಾಪನೆಯಾಯಿತು. ಆ ಘಟನೆಯ ಜೀವಂತವಿರಿಸುವಿಕೆಯಿಂದ ರಾಜಕಾರಣ ಮಾಡಲಾಯಿತು. ಅದನ್ನೇ ಮುಂದುವರೆಸಿಕೊಂಡು ಬರಲಾಗುವ ಇಂದಿನ ಸಂದರ್ಭದಲ್ಲಿ ನಾವುಗಳು ಜಾಗೃತರಾಗದೇ ಹೋದರೆ ಮುಂದೆ ಮತ್ತೇ ಗುಲಾಮರಾಗಿ ಇರಬೇಕಾಗುತ್ತದೆ. ಹಾಗಾಗಿ ಇದಕ್ಕೆ ಅಸ್ಪದ ನೀಡದೇ ಮುನ್ನಡೆಯೋಣ” ಎಂದು ಹೇಳಿದರು.

ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್, ಸಾಗರ ಅಧ್ಯಕ್ಷ ಎಚ್.ಬಿ. ರಾಘವೇಂದ್ರ ಮಾತನಾಡಿ, ‘ಸಂವಿಧಾನದಿಂದಲೇ ದೇಶದಲ್ಲಿ ನಾವುಗಳು ಜೀವಿಸಲು ಬೇಕಾದ ಭದ್ರತೆಗಳನ್ನು ಪಡೆಯಲು ಸಾಧ್ಯ. ಯುವ ವಿದ್ಯಾರ್ಥಿಗಳು ಇದನ್ನು ಮನಗಾಣಬೇಕು’ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜ್ಯ ಮಹಿಳಾ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಧರಣಿ; ಅಹವಾಲು ಆಲಿಸಿದ ಅಧಿಕಾರಿಗಳು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಿ. ಸಣ್ಣಹನುಮಪ್ಪ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವಸಂತ ಕುಗ್ವೆ, ಡಾ. ಜಗದೀಶ್ ಬಿದರಗೆರೆ, ಕುಂಸಿ ಉಮೇಶ್‌, ವಸಂತ ಈಶ್ವರಗೆರೆ, ಡಿಎಂಪಿಸಿ ಕಾರ್ಯದರ್ಶಿ ನಾಗರಾಜ ಎಲ್ ಜಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X